ಕರ್ನಾಟಕ

karnataka

ETV Bharat / state

ರಾಜ್ಯದ ಜನತೆಗೆ ಮತ್ತೆ ಬೆಲೆ ಏರಿಕೆಯ ಬರೆ.. ನಾಳೆಯಿಂದಲೇ ಮೊಸರು, ಮಜ್ಜಿಗೆ, ಲಸ್ಸಿ ದುಬಾರಿ - ಮೊಸರು ಮಜ್ಜಿಗೆ ಲಸ್ಸಿ ದುಬಾರಿ

ಜಿಎಸ್​ಟಿ ತೆರಿಗೆ ಅನ್ವಯ- ಮಜ್ಜಿಗೆ ಮತ್ತು ಲಸ್ಸಿ ಪೊಟ್ಟಣಗಳ ಮೇಲಿನ‌‌ ಪರಿಷ್ಕೃತ ದರವನ್ನು ಹೆಚ್ಚಿಸಿದ ಕೆಎಂಎಫ್ - ನಾಳೆಯಿಂದ ನೂತನ ದರ ಜಾರಿಗೆ

gst-effect-curd-buttermilk-lassi-expensive-from-tomorrow
ಆಹಾರ ಪದಾರ್ಥ ಮೇಲೂ ಜಿಎಸ್​ಟಿ: ನಾಳೆಯಿಂದ ಮೊಸರು, ಮಜ್ಜಿಗೆ, ಲಸ್ಸಿ ದುಬಾರಿ...

By

Published : Jul 17, 2022, 5:33 PM IST

ಬೆಂಗಳೂರು: ಸೋಮವಾರದಿಂದ ಆಹಾರ ಪದಾರ್ಥಗಳಿಗೂ ಶೇ.5ರಷ್ಟು ಜಿಎಸ್​ಟಿ ತೆರಿಗೆ ಅನ್ವಯವಾಗಲಿದ್ದು, ನಂದಿನಿ ಮೊಸರು, ಮಜ್ಜಿಗೆ, ಲಸ್ಸಿ ದರ ಏರಿಕೆಯಾಗಲಿದೆ. ಜಿಎಸ್​ಟಿ ಎಫೆಕ್ಟ್ ಹಿನ್ನೆಲೆ ಈಗಾಗಲೇ ಬೆಲೆ ಏರಿಕೆಗಳಿಂದ ಸುಸ್ತಾಗಿರುವ ಗ್ರಾಹಕರ ಜೇಬಿಗೆ ನಾಳೆಯಿಂದ ಇನ್ನಷ್ಟು ಕತ್ತರಿ ಬೀಳಲಿದೆ. ಈ ಸಂಬಂಧ ಕೆಎಂಎಫ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ನಂದಿನಿ ಮೊಸರು, ಮಜ್ಜಿಗೆ ಮತ್ತು ಲಸ್ಸಿ ಪೊಟ್ಟಣಗಳ ಮೇಲಿನ‌‌ ಪರಿಷ್ಕೃತ ದರವನ್ನು ಪ್ರಕಟಿಸಿದೆ.

ಮೊಸರು ಮತ್ತು ಮಜ್ಜಿಗೆ ಪೊಟ್ಟಣಗಳ ಮೇಲೆ ಈಗಾಗಲೇ ಹಳೇ ದರ ಮುದ್ರಿತವಾಗಿದ್ದು, ಮುದ್ರಿತ ದರಗಳ ಪ್ಯಾಕಿಂಗ್ ಸಾಮಗ್ರಿಗಳ ದಾಸ್ತಾನು ಮುಗಿಯುವವರಗೆ ಇಂಕ್‌ ಜೆಟ್ ಮೂಲಕ ಪರಿಷ್ಕೃತ ದರಗಳನ್ನು ಪೊಟ್ಟಣಗಳ ಮೇಲೆ ಮುದ್ರಿಸಿ ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತಿದೆ ಎಂದು ಕೆಎಂಎಫ್ ತಿಳಿಸಿದೆ.

ಪರಿಷ್ಕೃತ ದರ ಈ ರೀತಿ ಇರಲಿದೆ:

  • 200 ಗ್ರಾಂ ಮೊಸರು (ಸ್ಯಾಚೆ ಪ್ಯಾಕ್): ಹಿಂದಿನ ದರ 10 ರೂ., ಹೊಸ ದರ 12 ರೂ.
  • 500 ಗ್ರಾಂ ಮೊಸರು: ಹಿಂದಿನ ದರ 22 ರೂ., ಹೊಸ ದರ 24 ರೂ.
  • 1 ಲೀಟರ್ ಮೊಸರು: ಹಿಂದಿನ ದರ 43 ರೂ., ಹೊಸ ದರ 46 ರೂ.
  • ಮಜ್ಜಿಗೆ 200 ಮಿಲಿ (ಸ್ಯಾಚೆ ಪ್ಯಾಕ್): ಹಿಂದಿನ ದರ 7 ರೂ., ಹೊಸ ದರ 8 ರೂ.
  • ಟೆಟ್ರಾ ಪ್ಯಾಕ್: ಹಿಂದಿನ‌ ದರ 10 ರೂ., ಹೊಸ ದರ 11 ರೂ.
  • ಪೆಟ್ ಬಾಟಲ್: ಹಿಂದಿನ ದರ 12 ರೂ., ಹೊಸ ದರ 13 ರೂ.
  • ಲಸ್ಸಿ 200 ಮಿಲಿ (ಸ್ಯಾಚೆ ಪ್ಯಾಕ್), ಹಿಂದಿನ ದರ 10 ರೂ., ಹೊಸ ದರ 11 ರೂ.
  • ಟೆಟ್ರಾ ಪ್ಯಾಕ್ ಸಾದ: ಹಿಂದಿನ‌ ದರ 20 ರೂ., ಹೊಸ ದರ 21 ರೂ.
  • ಟೆಟ್ರಾ ಪ್ಯಾಕ್ ಮ್ಯಾಂಗೋ: ಹಿಂದಿನ‌ ದರ 25 ರೂ., ಹೊಸ ದರ 27 ರೂ.
  • ಪೆಟ್ ಬಾಟಲ್ ಸಾದ: ಹಿಂದಿನ ದರ 15 ರೂ., ಹೊಸ ದರ 16 ರೂ.
  • ಪೆಟ್ ಬಾಟಲ್ ಮ್ಯಾಂಗೋ: ಹಿಂದಿನ ದರ 20 ರೂ., ಹೊಸ ದರ 21 ರೂ.

ABOUT THE AUTHOR

...view details