ಆನೇಕಲ್:ಇಲ್ಲಿಗೆ ಸಮೀಪದ ಪಿಲ್ಲಕೆತ್ತೂರು ಬಳಿ ಆನೆಗಳ ಹಿಂಡು ಪ್ರತ್ಯಕ್ಷವಾಗಿದೆ. 20 ರಿಂದ 30 ಆನೆಗಳು ಕೆರೆಯಲ್ಲಿ ಇದ್ದ ದೃಶ್ಯಗಳು ಅಕ್ಕಪಕ್ಕದ ಗ್ರಾಮಗಳ ಜನರಲ್ಲಿ ಭೀತಿ ಹುಟ್ಟುಹಾಕಿದೆ. ಕೆರೆ ಅಕ್ಕಪಕ್ಕದ ರಾಗಿ ತೆನೆಗಳನ್ನು ತಿನ್ನುವಲ್ಲಿ ಆನೆಗಳು ನಿರತವಾಗಿವೆ.
ಪಿಲ್ಲಕೊತ್ತೂರು ಬಳಿ ಗಜಪಡೆ ಪ್ರತ್ಯಕ್ಷ: ಅರಣ್ಯಾಧಿಕಾರಿಗಳಿಗೆ ತಲೆನೋವು - krishnagiri forest area
ಪಿಲ್ಲಕೆತ್ತೂರು ಬಳಿ ಆನೆಗಳ ಹಿಂಡು ಪ್ರತ್ಯಕ್ಷವಾಗಿದೆ. 20 ರಿಂದ 30 ಆನೆಗಳು ಕೆರೆಯಲ್ಲಿ ಇದ್ದ ದೃಶ್ಯಗಳು ಅಕ್ಕಪಕ್ಕದ ಗ್ರಾಮಗಳ ಜನರಲ್ಲಿ ಭೀತಿ ಹುಟ್ಟಿಸಿದೆ.
![ಪಿಲ್ಲಕೊತ್ತೂರು ಬಳಿ ಗಜಪಡೆ ಪ್ರತ್ಯಕ್ಷ: ಅರಣ್ಯಾಧಿಕಾರಿಗಳಿಗೆ ತಲೆನೋವು anekal](https://etvbharatimages.akamaized.net/etvbharat/prod-images/768-512-5358653-thumbnail-3x2-bng.jpg)
ಪಿಲ್ಲಕೊತ್ತೂರು ಬಳಿ ಗಜಪಡೆ ಪ್ರತ್ಯಕ್ಷ
ಪಿಲ್ಲಕೊತ್ತೂರು ಬಳಿ ಗಜಪಡೆ ಪ್ರತ್ಯಕ್ಷ
ಕೃಷ್ಣಗಿರಿ ಜಿಲ್ಲೆಯ ಅರಣ್ಯಾಧಿಕಾರಿ ಸಿಬ್ಬಂದಿಗೆ ಆನೆಗಳ ಹಿಂಡನ್ನು ಕಾಡಿಗೆ ಓಡಿಸುವುದೇ ಒಂದು ಕಾಯಕವಾಗಿದೆ. ಕರ್ನಾಟಕ ಗಡಿಯಿಂದ 20-30 ಕಿ.ಮೀ. ಅಂತರದಲ್ಲಿ ಆನೆ ಪಡೆ ನಾಡಿನ ಕಡೆಗೆ ಬಂದಿದೆ. ಮೊನ್ನೆಯಷ್ಟೇ ಆನೇಕಲ್ ಸುತ್ತಲೂ ಇದ್ದ ಆನೆಗಳನ್ನು ಕಂಡು ಜನ ಅರಣ್ಯ ಸಿಬ್ಬಂದಿ ಮೇಲೆ ಹರಿಹಾಯ್ದಿದ್ದರು.