ಹೈದರಾಬಾದ್: ಕಣ್ಣು ಕಾಣದಿದ್ದರೂ ಅಂಧರ ತಂಡವೊಂದು ಬೆಂಗಳೂರಿನ ಅಂದ ಹೆಚ್ಚಿಸಲು ಇಂದು ಒಂದು ವಿಭಿನ್ನ ಪ್ರಯತ್ನ ಮಾಡಿತು.
ದಿ ಅಗ್ಲಿ ಇಂಡಿಯನ್ ಎಂಬ ಸಂಸ್ಥೆಯು ಬಿಬಿಎಂಪಿ ಜೊತೆಗೂಡಿ ಬೆಂಗಳೂರಿನಲ್ಲಿ ಗಲೀಜಾಗಿರುವ ಗೋಡೆಗಳಿಗೆ ಬಣ್ಣ ಹಚ್ಚುವ ಹಾಗೂ ರಸ್ತೆಗಳನ್ನು ಶುಚಿಗೊಳಿಸುವ ಕಾರ್ಯ ಕೈಗೆತ್ತಿಕೊಂಡಿದೆ.
ಸ್ವಚ್ಛತೆಗೆ ಮಿಡಿದ ಒಳಗಣ್ಣು: ಬೆಂಗಳೂರಿನ ಅಂದ ಹೆಚ್ಚಿಸಿದ ಅಂಧರು - the ugly indian
ದಿ ಅಗ್ಲಿ ಇಂಡಿಯನ್ ಎಂಬ ಸಂಸ್ಥೆಯು ಬಿಬಿಎಂಪಿ ಜೊತೆಗೂಡಿ ಬೆಂಗಳೂರಿನಲ್ಲಿ ಗಲೀಜಾಗಿರುವ ಗೋಡೆಗಳಿಗೆ ಬಣ್ಣ ಹಚ್ಚುವ ಹಾಗೂ ರಸ್ತೆಗಳನ್ನು ಶುಚಿಗೊಳಿಸುವ ಕಾರ್ಯ ಕೈಗೆತ್ತಿಕೊಂಡಿದೆ. ಸಾರ್ವಜನಿಕರಿಗೆ ನಗರ ಸ್ವಚ್ಛತೆ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಅಂಧರಿಂದ ನಗರದ ಗೋಡೆಗಳಿಗೆ ಬಣ್ಣ ಹಚ್ಚಿಸಲಾಗಿದೆ.

ಕೃಪೆ: ದಿ ಅಗ್ಲಿ ಇಂಡಿಯನ್ ಸಂಸ್ಥೆ
ಸಾರ್ವಜನಿಕರಿಗೆ ನಗರ ಸ್ವಚ್ಛತೆ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಅಂಧರಿಂದ ನಗರದ ಗೋಡೆಗಳಿಗೆ ಬಣ್ಣ ಹಚ್ಚಿಸಲಾಗಿದೆ.
ನಾನು ಹುಟ್ಟು ಅಂಧೆ. ಪೇಂಟಿಂಗ್ ಮಾಡಬೇಕೆಂದು ಚಿಕ್ಕಂದಿನಿಂದ ಆಸೆಯಿತ್ತು, ಆದರೆ ಕುರುಡುತನದಿಂದ ಅದು ಸಾಧ್ಯವಾಗಿರಲಿಲ್ಲ, ಇದೀಗ ಒಂದು ಅವಕಾಶ ಸಿಕ್ಕಿದೆ ಎಂದು ಅಂಧೆಯೊಬ್ಬರು ಸಂಸ್ಥೆಯು ತನ್ನ ಅಧಿಕೃತ ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಹೇಳಿದ್ದಾರೆ.