ಕರ್ನಾಟಕ

karnataka

ETV Bharat / state

ಮದುವೆಗೆ 2 ದಿನವಿರುವಾಗಲೇ ವರ ಎಸ್ಕೇಪ್​: ಪೊಲೀಸ್​ ಠಾಣೆ ಮೆಟ್ಟಿಲೇರಿದ ಯುವತಿ - ಬೆಂಗಳೂರು ಅಪರಾಧ ಸುದ್ದಿ

ಮದುವೆಗೆ ಎರಡು ದಿನವಿರುವಾಗಲೇ ಯುವಕ ನನಗೆ ಈ ಮದ್ವೆ ಇಷ್ಟವಿಲ್ಲ ಅಂತ ಹೇಳಿ ಪರಾರಿಯಾಗಿದ್ದಾನೆ. ಘಟನೆಯಿಂದ ನೊಂದ ಯುವತಿ ಹಾಗೂ ಪೋಷಕರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

groom escape
ವರ ಎಸ್ಕೇಪ್

By

Published : Apr 6, 2021, 1:46 PM IST

ಬೆಂಗಳೂರು:ಮದುವೆಗೆ 2 ದಿನ ಮುನ್ನವೇ ಮದುಮಗ ಎಸ್ಕೇಪ್​ ಆಗಿದ್ದು, ಘಟನೆಯಿಂದ ಬೇಸತ್ತ ಯುವತಿ ಪೊಲೀಸ್​ ಠಾಣೆಗೆ ದೂರು ನೀಡಿದ್ದಾಳೆ.

ಎರಡು ವರ್ಷದಿಂದ ಸೋಮಶೇಖರ್​ ಎಂಬಾತ ಯುವತಿಯನ್ನು ಪ್ರೀತಿಸುತ್ತಿದ್ದ. ಮದುವೆ ಬಗ್ಗೆ ಇಬ್ಬರ ಮನೆಯಲ್ಲೂ ಪ್ರಸ್ತಾಪ ಮಾಡಿ ಒಪ್ಪಿಗೆ ಪಡೆದುಕೊಂಡು ವಿವಾಹವಾಗಲು ಸಿದ್ಧತೆ ನಡೆಸಿದ್ದರು. ಮದುವೆಗೆ ದಿನಾಂಕ ನಿಗದಿ ಮಾಡಿ, ಮನೆ ಮುಂದೆ ಚಪ್ಪರವನ್ನು ಹಾಕಲಾಗಿತ್ತು. ಇನ್ನೇನು ಮದುವೆಗೆ ಎರಡು ದಿನ ಬಾಕಿ ಇರುವಾಗಲೇ ವರ ಫೋನ್​ ಸ್ವಿಚ್ಡ್​ ಆಫ್​ ಮಾಡಿಕೊಂಡು ಪರಾರಿಯಾಗಿದ್ದಾನೆ.

ಕೆಲಸಕ್ಕೆಂದು ಹಾಸನದ ಚೆನ್ನರಾಯಪಟ್ಟಣದಿಂದ ಬೆಂಗಳೂರಿಗೆ ಬಂದ ಸೋಮಶೇಖರ್​ಗೆ ನಾಗರಬಾವಿ ಬಳಿಯ ವಿಶ್ವೇಶ್ವರಯ್ಯ ಲೇಔಟ್​ನ ಯುವತಿ ಜೊತೆ ಪ್ರೇಮಾಂಕುರವಾಗಿತ್ತು. ಎರಡು ವರ್ಷದಿಂದ ಯುವತಿಯನ್ನ ಲವ್ ಮಾಡುತ್ತಿರುವುದಾಗಿ ನಂಬಿಸಿದ್ದ ಆರೋಪಿ ಕಳೆದ ವರ್ಷ ಮೇ ನಲ್ಲಿ ಯುವತಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಆದರೆ ಕೊರೊನಾ ಸಂದರ್ಭದಲ್ಲಿ ಮದುವೆ ಬೇಡ ಎಂದು ಹೇಳಿ, ಮದುವೆ ಮುಂದೂಡಿದ್ದ. ಈ ಬಳಿಕ ಹೊಸ ವಾಹನ ತೆಗೆದುಕೊಳ್ಳಬೇಕು ಅಂತ 8 ಲಕ್ಷ ಹಣ ಪೀಕಿದ್ದಾನೆ. ಕಡೆಗೆ ಮಾ. 24ರಂದು ಮದುವೆ ದಿನಾಂಕ ನಿಗದಿ ಮಾಡಲಾಗಿದೆ. ಆದರೆ ಮದುವೆಗೆ ಎರಡು ದಿನ ಇರುವಾಗಲೇ ನನಗೆ ಮದುವೆ ಇಷ್ಟವಿಲ್ಲ ಎಂದು ಹೇಳಿ ಫೋನ್ ಸ್ವಿಚ್ಡ್​ ಆಫ್ ಮಾಡಿ ಆರೋಪಿ ಎಸ್ಕೇಪ್ ಆಗಿದ್ದಾನೆ.

ಹೀಗಾಗಿ ಇದೀಗ ನೊಂದ ಯುವತಿ ಹಾಗೂ ಪೊಷಕರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ABOUT THE AUTHOR

...view details