ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಡಿ ಮಾರ್ಟ್, ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿ, ರಿಲ್ಯಾಯನ್ಸ್, ಬಿಗ್ ಬಜಾರ್, ಮೋರ್ ನಂತಹ ಸೂಪರ್ ಮಾರ್ಕೆಟ್ಗಳನ್ನ ತೆರೆಯಲು ಅನುಮತಿ ನೀಡಲಾಗಿದೆ ಎಂದು ಆಯುಕ್ತರಾದ ಬಿ.ಹೆಚ್.ಅನಿಲ್ ಕುಮಾರ್ ತಿಳಿಸಿದ್ದಾರೆ.
ಕೊರೊನಾಗೆ ಡೊಂಟ್ ಕೇರ್... ಮಹಾನಗರದಲ್ಲಿ ಮತ್ತೆ ಸೂಪರ್ ಮಾರ್ಕೆಟ್ಗಳ ದರ್ಬಾರ್ - ಕ್ಲೋಸ್ ಆಗಿದ್ದ ಸೂಪರ್ ಮಾರ್ಕೆಟ್ಗಳಿಗೆ ಮತ್ತೆ ಗ್ರೀನ್ ಸಿಗ್ನಲ್
ಕೊರೊನಾ ವೈರಸ್ ಹರಡದಂತೆ, ಮುನ್ನೆಚ್ಚರಿಕಾ ಕ್ರಮವಾಗಿ ಬಂದ್ ಮಾಡಿಸಿದ್ದ ಸೂಪರ್ ಮಾರ್ಕೆಟ್ಗಳನ್ನು ತೆರೆಯಲು ಬಿಬಿಎಂಪಿ ಅನುಮತಿ ನೀಡಿದೆ.
ಬಿ.ಹೆಚ್. ಅನಿಲ್ ಕುಮಾರ್
ಜನರಿಗೆ ಆಹಾರ ಪದಾರ್ಥಗಳು, ತರಕಾರಿಗಳು, ನೀರು ಸೇರಿದಂತೆ ಅಗತ್ಯ ವಸ್ತುಗಳ ಲಭ್ಯತೆಗೆ ಕಷ್ಟ ಆಗಬಾರದು ಎಂದು ತೆರೆಯಲು ಸೂಚಿಸಲಾಗಿದೆ. ಆದರೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಬಾರದು ಎಂದು ಆದೇಶಿಸಲಾಗಿದೆ.
ಇದೇ ವೇಳೆ ಜನಸಾಂದ್ರತೆ ಆಗಬಾರದು, ನೈರ್ಮಲ್ಯ ಕಾಪಾಡಬೇಕು. ವಿಶೇಷ ಆಫರ್ಗಳಲ್ಲಿ ಸೇಲ್ಗಳನ್ನ ಮಾಡಬಾರದು ಎಂದು ಸೂಚಿಸಲಾಗಿದೆ ಎಂದಿದ್ದಾರೆ.