ಕರ್ನಾಟಕ

karnataka

ETV Bharat / state

ಅಮೆರಿಕದ ಗ್ರಾಂಟ್ ಥಾರ್ನ್ಟನ್ ಸಂಸ್ಥೆಯಿಂದ ಸರ್ಕಾರಕ್ಕೆ ವೈದ್ಯಕೀಯ ಪರಿಕರ ಹಸ್ತಾಂತರ - Bangalore

ಕೊರೊನಾ ನಿಯಂತ್ರಣಕ್ಕೆ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯಡಿ ಕಂಪನಿಗಳು ನೀಡುತ್ತಿರುವ ಸಹಕಾರಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

medical equipment donate
ಸರ್ಕಾರಕ್ಕೆ ವೈದ್ಯಕೀಯ ಪರಿಕರ ಹಸ್ತಾಂತರ

By

Published : Jul 14, 2021, 3:18 PM IST

ಬೆಂಗಳೂರು: ಗ್ರಾಂಟ್ ಥಾರ್ನ್ಟನ್ ಕಂಪೆನಿ ವತಿಯಿಂದ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯಡಿ ಇಂದು 3 ಮಲ್ಟಿ-ಮೋಡ್ ವೆಂಟಿಲೇಟರ್​​ ಹಾಗು 10 ಐಸಿಯು ಬೆಡ್​​ಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಲಾಯಿತು.

ಸಿಎಂ ಗೃಹ ಕಚೇರಿ ಕೃಷ್ಣಾಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಕುಮಾರ್, ಪ್ರಿಯಾ ಹರಗೋಪಾಲ್, ಬಾಲಾಜಿ ಅಯ್ಯರ್, ದಿವ್ಯಾಂಗ್ ತ್ರಿವೇದಿ ನಿಯೋಗ ಭೇಟಿ ನೀಡಿತು. ಈ ವೇಳೆ ಸಿಎಂ ಜತೆ ಕೆಲಕಾಲ ಮಾತುಕತೆ ನಡೆಸಿ ನಂತರ ವೈದ್ಯಕೀಯ ಪರಿಕರಗಳನ್ನು ಸರ್ಕಾರಕ್ಕೆ ನೀಡಿದರು.

ತಮ್ಮ ಮನವಿಗೆ ಓಗೊಟ್ಟು ಸಾಕಷ್ಟು ಸಂಸ್ಥೆಗಳು ವೈದ್ಯಕೀಯ ಪರಿಕರಗಳನ್ನು ನೀಡುವ ಮೂಲಕ ಕೊರೊನಾ ಸಂಕಷ್ಟದ ವೇಳೆ ಸೋಂಕಿತರ ಚಿಕಿತ್ಸೆಗೆ ನೆರವಾಗಿವೆ ಎಂದು ಸಿಎಂ ಬಿಎಸ್​​ವೈ ಸ್ಮರಿಸಿದರು‌.

ಇದನ್ನೂ ಓದಿ: ಕೂಡಲೇ ವಿಧಾನಮಂಡಲ ಅಧಿವೇಶನ ಕರೆಯಿರಿ: ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

ABOUT THE AUTHOR

...view details