ಕರ್ನಾಟಕ

karnataka

ಕೇಂದ್ರದಿಂದ ರಾಜ್ಯಕ್ಕೆ ಸೂಕ್ಮ್ಮ ನೀರಾವರಿ ಯೋಜನೆಯಡಿ 2ನೇ ಕಂತಿನ ಅನುದಾನ‌ ಬಿಡುಗಡೆ

By

Published : Mar 26, 2022, 1:16 PM IST

ಸೂಕ್ಷ್ಮ‌ ನೀರಾವರಿ ಯೋಜನೆಯಡಿ 2ನೇ ಕಂತಿನ ಅನುದಾನ‌ವನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದೆ. ಕಳೆದ‌ ಬಾರಿಗೆ ಹೋಲಿಸಿದರೆ ಶೇ.25 ರಷ್ಟು ಹೆಚ್ಚಿನ ಕೇಂದ್ರದ‌ ಪಾಲಿನ ಅನುದಾನ‌ ಪಡೆಯಲಾಗಿದೆ.

Grant released under micro irrigation scheme from center to state
ಕೇಂದ್ರದಿಂದ ರಾಜ್ಯಕ್ಕೆ ಸೂಕ್ಮ್ಮ ನೀರಾವರಿ ಯೋಜನೆಗೆ ಅನುದಾನ ಬಿಡುಗಡೆ

ಬೆಂಗಳೂರು:ಕರ್ನಾಟಕದಲ್ಲಿ ಸೂಕ್ಷ್ಮ ನೀರಾವರಿ ಕಾರ್ಯಕ್ರಮಗಳಿಗೆ ಹೆಚ್ಚಿನ ಬೇಡಿಕೆ ಇರುವುದನ್ನು ಗಮನಿಸಿದ ಕೇಂದ್ರ ಸರ್ಕಾರವು ರಾಜ್ಯದ ಬೇಡಿಕೆ ಅನುಸಾರ ಕೇಂದ್ರ ಅನುದಾನ ಹೆಚ್ಚಿಸಿ ಆದೇಶಿಸಿದ್ದು, ಎರಡನೇ ಕಂತಿನ ಅನುದಾನವನ್ನು ಬಿಡುಗಡೆ ಮಾಡಿದೆ.

2020-21ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಪಿಎಂಕೆಎಸ್​​​ವೈ, ಪಿಡಿಎಂ ಅಡಿ 400 ಕೋಟಿ ರೂ. ಬಿಡುಗಡೆ ಮಾಡಿತ್ತು. 2021-22 ನೇ‌ ಸಾಲಿನಲ್ಲಿ‌ ರಾಜ್ಯದಲ್ಲಿ ಸೂಕ್ಷ್ಮ ನೀರಾವರಿ ಕಾರ್ಯಕ್ರಮಗಳಿಗೆ ಹೆಚ್ಚಿನ‌ ಬೇಡಿಕೆ‌ ಇರುವುದರಿಂದ ಕೇಂದ್ರ ಸರ್ಕಾರ ಇದೀಗ ರಾಜ್ಯದ ಮನವಿಯಂತೆ 500 ಕೋಟಿ ರೂ.ಗಳ‌ ಅನುದಾನ ಹಂಚಿಕೆ‌ ಮಾಡಿದೆ.

ಕಳೆದ‌ ಬಾರಿಗೆ ಹೋಲಿಸಿದರೆ ಶೇ.25ರಷ್ಟು ಹೆಚ್ಚಿನ ಕೇಂದ್ರದ ಪಾಲಿನ ಅನುದಾನ‌ ಪಡೆಯಲಾಗಿದೆ. ಪ್ರಸಕ್ತ ಸಾಲಿನಲ್ಲಿ ಕೇಂದ್ರವು ಹಂಚಿಕೆ‌ ಮಾಡಿದ 500 ಕೋಟಿ ರೂ.ಗಳಲ್ಲಿ ಮೊದಲ‌ ಕಂತಿನ‌ ಅನುದಾನವನ್ನಾಗಿ ರಾಜ್ಯಕ್ಕೆ 300 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿತ್ತು. ಉಳಿದ 200 ಕೋಟಿ ರೂ.ಗಳನ್ನು ರಾಜ್ಯಕ್ಕೆ ನಿನ್ನೆ ಬಿಡುಗಡೆ ಮಾಡಿದೆ.ಈ ಕಾರ್ಯಕ್ರಮವು ತೋಟಗಾರಿಕೆ, ಕೃಷಿ, ರೇಷ್ಮೆ ಮತ್ತು ಜಲಾನಯನ ಅಭಿವೃದ್ಧಿ ಇಲಾಖೆಗಳನ್ನು ಒಳಗೊಂಡಿರುತ್ತದೆ.

ಕೇಂದ್ರ ಸರ್ಕಾರ ಹಂಚಿಕೆ ಮಾಡಿದ ಅನುದಾನದಲ್ಲಿ ಶೇ.76 ರಷ್ಟು ಸಾಮಾನ್ಯ ವರ್ಗಕ್ಕೆ, ಶೇ.17 ರಷ್ಟು ಪರಿಶಿಷ್ಟ ಜಾತಿಗೆ ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ. 7ರಷ್ಟನ್ನು ನಿಗದಿಪಡಿಸಿ ಅನುದಾನ ಬಿಡುಗಡೆ ಮಾಡಲಾಗಿರುತ್ತದೆ. ಕೇಂದ್ರದಿಂದ‌ ರಾಜ್ಯಕ್ಕೆ ಇದರ ಯೋಜನೆಯಡಿ ಹಂಚಿಕೆಯಾದ ಎರಡನೇ‌ ಕಂತಿನ ‌200 ಕೋಟಿ ರೂ.ಗಳ ಕೇಂದ್ರದ‌ ಪಾಲಿನ ಅನುದಾನದಲ್ಲಿ ಕೃಷಿ ಇಲಾಖೆಗೆ ಹಂಚಿಕೆ ಮಾಡಬಹುದಾದ ಅನುದಾನಕ್ಕನುಗುವಾಗಿ ರಾಜ್ಯದ ಪಾಲಿನ ಅನುದಾನವನ್ನೂ ಸೇರಿಸಿ ಲಭ್ಯವಾಗುವ ಒಟ್ಟು ಅನುದಾನಕ್ಕೆ ಜಿಲ್ಲಾವಾರು‌ ಬೇಡಿಕೆ ಅನುಸಾರ ಕ್ರಿಯಾ‌ ಯೋಜನೆಯನ್ನು ನೀಡಲಾಗಿರುತ್ತದೆ.

ಇದರಿಂದ ಬೇಸಿಗೆ ಹಂಗಾಮಿನ‌ ಬೆಳೆಗಳಿಗೆ ಸಕಾಲದಲ್ಲಿ ಸೂಕ್ಷ್ಮ ನೀರಾವರಿ ಘಟಕಗಳನ್ನು ವಿತರಿಸಿ ಬೆಳೆಗಳನ್ನು ಉಳಿಸಿಕೊಳ್ಳಲು ಸಹಾಯಕವಾಗುತ್ತದೆ. ಜಿಲ್ಲೆಗಳಿಗೆ ನೀಡಿದ ಕ್ರಿಯಾಯೋಜನೆ ಅನ್ವಯ ಸೂಕ್ಷ್ಮನೀರಾವರಿ ಘಟಕಗಳನ್ನು ರೈತರಿಗೆ ತುರ್ತಾಗಿ ಅಂದರೆ ನಿನ್ನೆಯಿಂದಲೇ ಅಂದರೆ ಮಾರ್ಚ್.25 ರಿಂದ ವಿತರಣೆ ಆರಂಭವಾಗಿರುತ್ತದೆ. ಇದರಿಂದ ಸಂಕಷ್ಟದಲ್ಲಿರುವ ರೈತರಿಗೆ ತುರ್ತಾಗಿ ನೆರವಿಗೆ ಧಾವಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿರುತ್ತದೆ.

ಇದನ್ನೂ ಓದಿ: ಏ.1 ರಂದು ರಾಜ್ಯಕ್ಕೆ ಅಮಿತ್ ಶಾ ಭೇಟಿ, ಏ. 5ರಂದು ಕರ್ನಾಟಕಕ್ಕೆ ಪ್ರಧಾನಿ ಬರುವ ನಿರೀಕ್ಷೆ : ಬಸವರಾಜ ಬೊಮ್ಮಾಯಿ

For All Latest Updates

ABOUT THE AUTHOR

...view details