ಬೆಂಗಳೂರು :ಮೊಮ್ಮಗಳ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯವೆಸಗಿದ್ದ ಆಕೆಯ 70 ವರ್ಷ ವಯಸ್ಸಿನ ತಾತನಿಗೆ 20 ವರ್ಷ ಸೆರೆವಾಸ 1 ಲಕ್ಷದ 30 ಸಾವಿರ ದಂಡ ವಿಧಿಸಿ ಬೆಂಗಳೂರಿನ ಫಾಸ್ಟ್ ಟ್ಯ್ರಾಕ್ ಸೆಷನ್ ಕೋರ್ಟ್ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ಅಶ್ಲೀಲ ವಿಡಿಯೋ ವೀಕ್ಷಿಸುವ ಗೀಳು.. ನಗರದ ಕುಮಾರಸ್ವಾಮಿ ಲೇಔಟ್ನಲ್ಲಿ ಪೋಷಕರೊಂದಿಗೆ ಬಾಲಕಿ ವಾಸವಿದ್ದಳು. ಆರೋಪಿ ವೃದ್ಧ ಸಹ ಅವರೊಂದಿಗೆ ವಾಸವಿದ್ದರು. ಅಶ್ಲೀಲ ವಿಡಿಯೋಗಳನ್ನ ವೀಕ್ಷಿಸುವ ಅಭ್ಯಾಸ ಹೊಂದಿದ್ದ ಆರೋಪಿ, ಬಾಲಕಿಯ ಪೋಷಕರು ಕೆಲಸಕ್ಕೆ ಹೋದಾಗ ಮೊಮ್ಮಗಳನ್ನ ಆಟವಾಡಿಸುವ ನೆಪದಲ್ಲಿ ಆಕೆಯ ಮೈಕೈ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರಂತೆ.
ಸತತ ಐದು ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ..3ನೇ ತರಗತಿಯಿಂದ 8ನೇ ತರಗತಿವರೆಗೂ ಮೊಮ್ಮಗಳಿಗೆ ಅಶ್ಲೀಲ ವಿಡಿಯೋ ತೋರಿಸಿ, ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಬೆದರಿಸಿ ಲೈಂಗಿಕ ದೌರ್ಜನ್ಯವೆಸಗಿದ್ದರಂತೆ. ಮಾತ್ರವಲ್ಲ, ಕೃತ್ಯದ ಕುರಿತು ಯಾರಿಗಾದರೂ ತಿಳಿಸಿದರೆ ಬಾಲಕಿಯ ತಂದೆಯನ್ನ ಸಾಯಿಸುವುದಾಗಿ ಬೆದರಿಕೆ ಹಾಕಿದ್ದರಂತೆ.