ಕರ್ನಾಟಕ

karnataka

ETV Bharat / state

ಗ್ರಾಪಂ ಚುನಾವಣೆ ಆದೇಶ ಪ್ರತಿ ನಕಲಿ.. ರಾಜ್ಯ ಚುನಾವಣಾ ಆಯೋಗ ಸ್ಪಷ್ಟನೆ! - Gram Panchayat announced Copy Is duplicate : Karnataka Election Commission

ಗ್ರಾಮ ಪಂಚಾಯತ್‌ಗಳಿಗೆ ಸಾರ್ವತ್ರಿಕ ಚುನಾವಣೆ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ‌ ಹರಿದಾಡುತ್ತಿರುವ ಆದೇಶ ಪ್ರತಿ ನಕಲಿ ಎಂದು ರಾಜ್ಯ ಚುನಾವಣಾ ಆಯೋಗ ಸ್ಪಷ್ಟೀಕರಣ ನೀಡಿದೆ.

Gram Panchayat announced Copy Is duplicate
ಗ್ರಾ.ಪಂ ಚುನಾವಣೆ ಆದೇಶ ಪ್ರತಿ ನಕಲಿ

By

Published : Jan 11, 2020, 7:41 PM IST

ಬೆಂಗಳೂರು: ಗ್ರಾಮ ಪಂಚಾಯತ್‌ಗಳಿಗೆ ಸಾರ್ವತ್ರಿಕ ಚುನಾವಣೆ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ‌ ಹರಿದಾಡುತ್ತಿರುವ ಆದೇಶ ಪ್ರತಿ ನಕಲಿ ಎಂದು ರಾಜ್ಯ ಚುನಾವಣಾ ಆಯೋಗ ಸ್ಪಷ್ಟೀಕರಣ ನೀಡಿದೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ರಾಜ್ಯ ಚುನಾವಣಾ ಆಯೋಗ, ಗ್ರಾಮ ಪಂಚಾಯತ್‌ಗೆ ಸಾರ್ವತ್ರಿಕ ಚುನಾವಣೆ ಸಂಬಂಧ ಯಾವುದೇ ದಿನಾಂಕ ನಿಗದಿಪಡಿಸಿಲ್ಲ‌. ಇಂತಿಷ್ಟೇ ಶಿಕ್ಷಣ ಹೊಂದಿರಬೇಕು, ಇಂತಿಷ್ಟೇ ಮಕ್ಕಳಿರಬೇಕು ಎಂಬ ಬಗ್ಗೆ ಯಾವುದೇ ಆದೇಶ ಹೊರಡಿಸಿಲ್ಲ‌. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆದೇಶ ಪ್ರತಿ ನಕಲಿ ಎಂದು ಸ್ಪಷ್ಟಪಡಿಸಿದೆ‌.

ಗ್ರಾಪಂ ಚುನಾವಣೆ ಆದೇಶ ಪ್ರತಿ ನಕಲಿ..

ಏಪ್ರಿಲ್ 5 ಮತ್ತು 9ಕ್ಕೆ ಗ್ರಾಮ ಪಂಚಾಯತ್‌ಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂಬ ಆದೇಶ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ನಕಲಿ ಆದೇಶ ಪ್ರತಿಯಲ್ಲಿ ಅಭ್ಯರ್ಥಿಗಳು ಕಡ್ಡಾಯವಾಗಿ ಪ್ರೌಢ ಶಿಕ್ಷಣ ಉತ್ತೀರ್ಣರಾಗಿರಬೇಕು. ಆಧಾರ್ ಕಾರ್ಡ್, ಪಾನ್ ಕಾರ್ಡ್ ಹೊಂದಿರಬೇಕು ಎಂಬ ಕೆಲ ಷರತ್ತುಗಳನ್ನು ವಿಧಿಸಿ ರಾಜ್ಯ ಚುನಾವಣಾ ಆಯೋಗ ಆದೇಶಿಸಿದೆ ಎಂಬ ಅರ್ಥದಲ್ಲಿ ನಕಲಿ ಪತ್ರ ಸೃಷ್ಟಿಸಲಾಗಿತ್ತು.

ABOUT THE AUTHOR

...view details