ಬೆಂಗಳೂರು:ಕಸ ನಿರ್ವಹಣೆಯಲ್ಲಿ ಆಗುತ್ತಿರುವ ಹೆಚ್ಚುವರಿ ಖರ್ಚು, ಅವ್ಯವಹಾರ ತಡೆಯಲು ಎಲ್ಲಾ ಕಸದ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಕಡ್ಡಾಯ ಮಾಡಲಾಗಿದೆ.
ಕಸ ಸಾಗಾಣಿಕೆ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಕಡ್ಡಾಯ : ಬಿಬಿಎಂಪಿ ಆದೇಶ - ಬಿಬಿಎಂಪಿ ಸುದ್ದಿ
ಬೆಂಗಳೂರಲ್ಲಿ ಕಸ ಸಂಗ್ರಹಣೆ ಹಾಗೂ ವಿಲೇವಾರಿ ಘಟಕಗಳಿಗೆ ಸಾಗಾಣಿಕೆ ಮಾಡುವ ವಾಹನಗಳಿಗೆ ಕಡ್ಡಾಯವಾಗಿ ಮ್ಯಾಪಿಂಗ್ ಮಾಡುವ ಜಿಪಿಎಸ್ ಸಾಧನ ಅಳವಡಿಸಿರಬೇಕು.
ಕಸ ಸಂಗ್ರಹಣೆ ಹಾಗೂ ವಿಲೇವಾರಿ ಘಟಕಗಳಿಗೆ ಸಾಗಾಣಿಕೆ ಮಾಡುವ ವಾಹನಗಳಿಗೆ ಕಡ್ಡಾಯವಾಗಿ ಮ್ಯಾಪಿಂಗ್ ಮಾಡುವ ಜಿಪಿಎಸ್ ಸಾಧನ ಅಳವಡಿಸಿರಬೇಕು. ಸಾಧನದಿಂದ ಟ್ರಿಪ್ ಶೀಡ್ ಪಡೆದು, ಪರಿಶೀಲಿಸಿ ಆ ಪ್ರಕಾರವೇ ಬಿಲ್ ತಯಾರಿಸಿ, ಪಾವತಿಗೆ ಕಡತ ಮಂಡಿಸಬೇಕು ಎಂದು ಬಿಬಿಎಂಪಿ ಹಣಕಾಸು ವಿಶೇಷ ಆಯುಕ್ತರು ಆದೇಶಿಸಿದ್ದಾರೆ.
ಇಲ್ಲವಾದರೆ ತಮ್ಮ ಹಂತದಲ್ಲಿಯೇ ಬಿಲ್ ಪಾವತಿ ತಡೆಯಬೇಕು. ಇದನ್ನು ತಪ್ಪಿ ಬಿಲ್ ಪಾವತಿ ಮಾಡಿದ್ದಲ್ಲಿ ಸಂಬಂಧಿಸಿದ ವಲಯ ಅಪರ/ಜಂಟಿ ಆಯುಕ್ತರು, ಮತ್ತು ಉಪ ನಿಯಂತ್ರಕರು (ಹಣಕಾಸು) ರನ್ನು ನೇರ ಜವಾಬ್ದಾರರನ್ನಾಗಿಸಿ, ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಬಿಬಿಎಂಪಿ ಹಣಕಾಸು ವಿಶೇಷ ಆಯುಕ್ತರು ಆದೇಶ ಮಾಡಿದ್ದಾರೆ.
TAGGED:
ವಾಹನಗಳಿಗೆ ಜಿಪಿಎಸ್ ಕಡ್ಡಾಯ