ಕರ್ನಾಟಕ

karnataka

ETV Bharat / state

ಏಳು ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆಗೆ ತಡೆ - IGP Saumendu Mukherjee

ರಾಜ್ಯ ಸರ್ಕಾರ ಏಳು ಮಂದಿ ಐಪಿಎಸ್​ ಅಧಿಕಾರಿಗಳ ವರ್ಗಾವಣೆಗೆ ತಡೆ ನೀಡಿದೆ.

ಐಪಿಎಸ್ ಅಧಿಕಾರಿಗಳ ವರ್ಗಾವಣೆಗೆ ತಡೆ
ಐಪಿಎಸ್ ಅಧಿಕಾರಿಗಳ ವರ್ಗಾವಣೆಗೆ ತಡೆ

By ETV Bharat Karnataka Team

Published : Sep 5, 2023, 7:00 PM IST

ಬೆಂಗಳೂರು :ಆಡಳಿತಾತ್ಮಕ ಕಾರಣಕ್ಕಾಗಿ 35 ಮಂದಿ ಐಪಿಎಸ್ ಅಧಿಕಾರಿಗಳನ್ನ ನಿನ್ನೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದ ಸರ್ಕಾರ, 28 ಮಂದಿ ಅಧಿಕಾರಿಗಳಿಗೆ ಮೂವೆಂಟ್ ಆರ್ಡರ್ ನೀಡಿದ್ದು, ಇನ್ನುಳಿದ ಏಳು ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆಗೆ ತಡೆ ಸಿಕ್ಕಿದೆ.

ನಗರ ಪೂರ್ವ ವಿಭಾಗದ ಡಿಸಿಪಿಯಾಗಿದ್ದ ಡಾ ಭೀಮಾಶಂಕರ್ ಎಸ್ ಗುಳೇದ್ ಅವರನ್ನ ಬೆಳಗಾವಿ ಎಸ್ಪಿ, ಅಬ್ದುಲ್ ಅಹದ್ ಅವರಿಗೆ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿಯಾಗಿ ವರ್ಗಾವಣೆ ಆದೇಶ ಹೊರಡಿಸಲಾಗಿತ್ತು‌. ಜೊತೆಗೆ ಶೇಖರ್ ಟೆಕ್ಕಣ್ಣನವರ್, ಸೈದುಲ್ಲಾ ಅದಾವತ್, ನಿರಂಜನ್ ರಾಜೇ ಅರಸ್ ಮತ್ತು ಬದರಿನಾಥ್ ಅವರಿಗೆ ನಿಯುಕ್ತಿಗೊಳಿಸಿದ ಸ್ಥಳಗಳಲ್ಲಿ ರಿಪೋರ್ಟ್ ಮಾಡಿಕೊಳ್ಳದೇ ಕೂಡಲೇ ಡಿಜಿಪಿ ಪ್ರಧಾನ ಕಚೇರಿಗೆ ವರದಿ ಮಾಡಿಕೊಳ್ಳಬೇಕು ಎಂದು ರಾಜ್ಯ ಪೊಲೀಸ್ ಆಡಳಿತ ವಿಭಾಗದ ಐಜಿಪಿ‌ ಸೌಮೆಂದು ಮುಖರ್ಜಿ ಆದೇಶಿಸಿದ್ದಾರೆ.

ಇನ್ನುಳಿದ ವರ್ಗಾವಣೆಯಾದ 28 ಮಂದಿ ಐಪಿಎಸ್ ಅಧಿಕಾರಿಗಳಿಗೆ ಮೂವೆಂಟ್ ಆರ್ಡರ್ ನೀಡಲಾಗಿದ್ದು, ವರದಿ ಮಾಡಿಕೊಂಡ ಬಳಿಕ ಪಾಲನಾ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ತಾಕೀತು ಮಾಡಿದ್ದಾರೆ. ಈ ಹಿಂದೆ ಇನ್​​​​​ಸ್ಪೆಕ್ಟರ್​​ಗಳ ವರ್ಗಾವಣೆಯಾದಾಗಲೂ ‌ಆದೇಶ ಹೊರಡಿಸಿದ ಕೆಲವೇ ಗಂಟೆಗಳಲ್ಲಿ‌ 68 ಇನ್ಸ್​​ಪೆಕ್ಟರ್​ಗಳ ವರ್ಗಾವಣೆಗೆ ತಡೆ ಸಿಕ್ಕಿತ್ತು. ಇದೀಗ ಐಪಿಎಸ್ ಅಧಿಕಾರಿಗಳ ವರ್ಗಾವಣೆಯಲ್ಲಿಯೂ ಏಳು ಮಂದಿ ಅಧಿಕಾರಿಗಳಿಗೆ ವರ್ಗಾವಣೆಗೆ ತಡೆ ಸಿಕ್ಕಿದೆ.

35 ಜನ ಐಪಿಎಸ್ ಅಧಿಕಾರಿಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ನಿನ್ನೆ ಆದೇಶಿಸಿತ್ತು. ರಾಜ್ಯಾದ್ಯಂತ ಪ್ರಮುಖ ಹುದ್ದೆಗಳಲ್ಲಿ ವರ್ಗಾವಣೆಯಾಗಿದ್ದ ಅಧಿಕಾರಿಗಳ ವಿವರ ಇಲ್ಲಿದೆ.

ಅನುಪಮ್ ಅಗರ್ವಾಲ್ -ಮಂಗಳೂರು ನಗರ ಪೊಲೀಸ್ ಆಯುಕ್ತ

ಡಾ.ಎಸ್.ಡಿ ಶರಣಪ್ಪ -ಡಿಐಜಿಪಿ & ಡೈರೆಕ್ಟರ್, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು

ವರ್ತಿಕಾ ಕಟಿಯಾರ್ -ಎಸ್.ಪಿ, ರಾಜ್ಯ ಅಪರಾಧ ದಾಖಲೆಗಳ ಘಟಕ

ಕಾರ್ತೀಕ್ ರೆಡ್ಡಿ - ಡಿಸಿಪಿ, ಬೆಂಗಳೂರು ಸಂಚಾರ ದಕ್ಷಿಣ ವಿಭಾಗ

ಕೆ.ಸಂತೋಷ್ ಬಾಬು -ಡಿಸಿಪಿ, ಆಡಳಿತ ವಿಭಾಗ, ಬೆಂಗಳೂರು ನಗರ

ಯತೀಶ್ ಚಂದ್ರ ಜಿ.ಎಚ್ -ಎಸ್.ಪಿ - ಆಂತರಿಕ ಭದ್ರತಾ ವಿಭಾಗ

ಡಾ. ಭೀಮಾಶಂಕರ ಗುಳೇದ್ - ಎಸ್‌‌.ಪಿ, ಬೆಳಗಾವಿ

ನಿಕಂ ಪ್ರಕಾಶ್ ಅಮ್ರಿತ್ - ಎಸ್.ಪಿ, ವೈರ್‌ಲೆಸ್

ರಾಹುಲ್ ಕುಮಾರ್ ಶಹಾಪುರವಾಡ್ - ಡಿಸಿಪಿ, ಬೆಂಗಳೂರು ದಕ್ಷಿಣ ವಿಭಾಗ

ಡಿ.ದೇವರಾಜ್ -ಡಿಸಿಪಿ ಬೆಂಗಳೂರು ಪೂರ್ವ ವಿಭಾಗ

ಅಬ್ದುಲ್ ಅಹದ್ -ಡಿಸಿಪಿ ಬೆಂಗಳೂರು ಕೇಂದ್ರ ವಿಭಾಗ

ಎಸ್‌.ಗಿರೀಶ್ - ಡಿಸಿಪಿ ಬೆಂಗಳೂರು ಪಶ್ಚಿಮ ವಿಭಾಗ

ಸಂಜೀವ್ ಎಂ. ಪಾಟೀಲ್ -ಡಿಸಿಪಿ, ವೈಟ್ ಫೀಲ್ಡ್ ವಿಭಾಗ

ಕೆ.ಪರಶುರಾಮ್ -ಎಸ್.ಪಿ. ಇಂಟೆಲಿಜೆನ್ಸ್‌

ಹೆಚ್‌‌.ಡಿ ಆನಂದ್ ಕುಮಾರ್ -ಎಸ್.ಪಿ, ನಾಗರಿಕ ಹಕ್ಕುಗಳು ಮತ್ತು ಜಾರಿ ನಿರ್ದೇಶನಾಲಯ

ಡಾ.ಸುಮನ್ ಡಿ.ಪೆನ್ನೇಕರ್ - ಎಐಜಿಪಿ, ಹೆಡ್ ಕ್ವಾಟ್ವಾರ್ಸ್-1

ಡೆಕಾ ಕಿಶೋರ್ ಬಾಬು - ಎಸ್.ಪಿ & ಪ್ರಿನ್ಸಿಪಲ್, ಪೊಲೀಸ್ ತರಬೇತಿ ಕೇಂದ್ರ, ಕಲ್ಬುರ್ಗಿ

ಡಾ.ಕೋನಾ ವಂಶಿಕೃಷ್ಣ -ಡಿಸಿಪಿ, ಕಮಾಂಡ್ ಸೆಂಟರ್, ಬೆಂಗಳೂರು

ಲಕ್ಷ್ಮಣ್ ನಿಂಬರಗಿ - ಎಸ್.ಪಿ, ರಾಜ್ಯ ಅಪರಾಧ ದಾಖಲೆಗಳ ಘಟಕ

ಡಾ. ಅರುಣ್.ಕೆ -ಎಸ್.ಪಿ, ಉಡುಪಿ

ಮಹಮ್ಮದ್ ಸುಜೀತಾ. ಎಂ.ಎಸ್- ಎಸ್.ಪಿ‌. ಹಾಸನ

ಜಯಪ್ರಕಾಶ್ - ಎಸ್.ಪಿ. ಇಂಟೆಲಿಜನ್ಸ್

ಶೇಖರ್. ಹೆಚ್. ತೆಕ್ಕನ್ನವರ್ - ಡಿಸಿಪಿ, ಸಿಸಿಬಿ ಬೆಂಗಳೂರು

ಸಾರಾ ಫಾತೀಮಾ- ಡಿಸಿಪಿ, ಬೆಂಗಳೂರು ಸಂಚಾರ ಪಶ್ಚಿಮ ವಿಭಾಗ

ಸೋನಾವಾನೆ ರಿಷಿಕೇಶ್ ಭಗವಾನ್ - ಎಸ್‌.ಪಿ. ವಿಜಯಪುರ

ಲೋಕೇಶ್ ಭರಮಪ್ಪ ಜಗಲ್ಸರ್ - ಎಸ್.ಪಿ,‌

ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು

ಆರ್. ಶ್ರೀನಿವಾಸ್ ಗೌಡ - ಡಿಸಿಪಿ-2, ಸಿಸಿಬಿ ಬೆಂಗಳೂರು

ಪಿ.ಕೃಷ್ಣಕಾಂತ್ -ಎಐಜಿಪಿ (ಆಡಳಿತ)

ಅಮರನಾಥ್ ರೆಡ್ಡಿ. ವೈ -ಎಸ್.ಪಿ. ಬಾಗಲಕೋಟೆ

ಹರಿರಾಮ್ ಶಂಕರ್ -ಎಸ್.ಪಿ, ಇಂಟೆಲಿಜೆನ್ಸ್‌

ಅದ್ದೂರು ಶ್ರೀನಿವಾಸುಲು -ಎಸ್.ಪಿ.ಕಲ್ಬುರ್ಗಿ

ಅನ್ಶು ಕುಮಾರ್ -ಎಸ್.ಪಿ, ಕೋಸ್ಟಲ್ ಸೆಕ್ಯುರಿಟಿ ಪೊಲೀಸ್, ಉಡುಪಿ

ಕನ್ನಿಕಾ ಸಿಕ್ರಿವಾಲ್ - ಡಿಸಿಪಿ, ಕಾನೂನು ಸುವ್ಯವಸ್ಥೆ, ಕಲ್ಬುರ್ಗಿ

ಕುಶಾಲ್ ಚೌಕ್ಸಿ -ಜಂಟಿ ನಿರ್ದೇಶಕರು, ವಿಧಿ ವಿಜ್ಞಾನ ಪ್ರಯೋಗಾಲಯ, ಬೆಂಗಳೂರು

ರವೀಂದ್ರ ಕಾಶಿನಾಥ್ ಗಡದಿ -ಎಸ್.ಪಿ ಇಂಟೆಲಿಜೆನ್ಸ್‌

ಇದನ್ನೂ ಓದಿ:35 ಮಂದಿ IPS ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ..

ABOUT THE AUTHOR

...view details