ಹೋಂ ಐಸೋಲೇಶನ್ಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ ಆರೋಗ್ಯ ಇಲಾಖೆ - ಹೊಸ ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ
ಹೋಂ ಐಸೋಲೇಶನ್ಗೆ ಒಳಗಾಗುವ ಕೊರೊನಾ ಸೋಂಕಿತರಿಗೆ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಹೊಸ ಮಾರ್ಗಸೂಚಿ
ಬೆಂಗಳೂರು : ಕೊರೊನಾ ಸೋಂಕಿತರ ಹೋಂ ಐಸೋಲೇಷನ್ ಅಥವಾ ಹೋಂ ಕೇರ್ ಬಗ್ಗೆ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಪರಿಷ್ಕೃ ಮಾರ್ಗಸೂಚಿಗಳು ಈ ಕೆಳಗಿನಂತಿವೆ.
- ಹೋಂ ಐಸೋಲೇಷನ್ ಬದಲು ಇನ್ನು ಮುಂದೆ ಹೋಂ ಕೇರ್ ಎಂಬ ಪದ ಬಳಸಲಾಗುತ್ತದೆ.
- 60 ವರ್ಷ ಮೇಲ್ಪಟ್ಟವರು ಕೂಡ ಮನೆ ಆರೈಕೆಯನ್ನು ಪಡೆಯಬಹುದಾಗಿದ್ದು, ಆದರೆ, ಸಂಬಂಧಪಟ್ಟ ಅಧಿಕಾರರಿಗಳಿಂದ ಅನುಮತಿ ಪಡೆಯಬೇಕಿದೆ. ಕ್ಲಿನಿಕಲ್ ಟೆಸ್ಟ್ ಆದ ಬಳಿಕ ಆಸ್ಪತ್ರೆ ಅಥವಾ ಕೋವಿಡ್ ಕೇರ್ ಸೆಂಟರ್ ಅಗತ್ಯವಿಲ್ಲದಿದ್ದರೆ ಮನೆ ಆರೈಕೆ ಪಡೆಯಬಹುದು.
- ಮನೆ ಆರೈಕೆಯಲ್ಲಿ ಇರುವವರು ಗುಣಮುಖರಾದ ನಂತರ 7 ದಿನಗಳವರೆಗೆ ಕಡ್ಡಾಯವಾಗಿ ಸ್ವತಃ ಕ್ವಾರಂಟೈನ್ ಆಗಬೇಕು.
- ಗರ್ಭಿಣಿಯರು ಮನೆ ಆರೈಕೆ ಸೇವೆಯನ್ನು ಪಡೆಯಬಹುದು. ಆದರೆ, ಹೆರಿಗೆಗೆ ಎರಡು ವಾರಗಳ ಮೊದಲು ಆಸ್ಪತ್ರೆಗೆ ತೆರಳಬೇಕು.
- ಇನ್ನುಳಿದಂತೆ ಈಗಾಗಲೇ ಜಾರಿಯಲ್ಲಿರುವ ಮಾರ್ಗಸೂಚಿಗಳು ಮುಂದುವರೆಯಲಿವೆ.