ಕರ್ನಾಟಕ

karnataka

ETV Bharat / state

ಜಾತ್ರೆ ಹೊರತುಪಡಿಸಿ ನಾಳೆಯಿಂದ ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲ ಸೇವೆಗಳಿಗೆ ಅವಕಾಶ - ಕೋವಿಡ್ ಅನ್​ಲಾಕ್

ಜುಲೈ 25 ರಿಂದ ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲ ರೀತಿಯ ಸೇವೆಗಳಿಗೆ ಸರ್ಕಾರ ಅವಕಾಶ ನೀಡಿ ಆದೇಶ ಹೊರಡಿಸಿದೆ. ಜಾತ್ರೆ, ಮೆರವಣಿಗೆಗೆ ನಿರ್ಬಂಂಧ ವಿಧಿಸಲಾಗಿದೆ.

Karnataka Unlock
ಧಾರ್ಮಿಕ ಕೇಂದ್ರ ಓಪನ್

By

Published : Jul 24, 2021, 11:37 AM IST

ಬೆಂಗಳೂರು: ರಾಜ್ಯದ ಕೋವಿಡ್ ಪರಿಸ್ಥಿತಿ ನೋಡಿಕೊಂಡು ಕೆಲ ನಿಯಮಗಳನ್ನು ಸಡಿಲಿಸಲು ಸರ್ಕಾರ ತೀರ್ಮಾನಿಸಿದೆ. ನಾಳೆಯಿಂದ ದೇವಸ್ಥಾನ, ಮಂದಿರ, ಚರ್ಚ್, ಮಸೀದಿ, ಗುರುದ್ವಾರ ಸೇರಿದಂತೆ ಎಲ್ಲ ಧಾರ್ಮಿಕ ಕೇಂದ್ರಗಳಲ್ಲಿ ಪೂಜೆ ಹಾಗೂ ಎಲ್ಲಾ ರೀತಿಯ ಸೇವೆಗಳಿಗೆ ಅವಕಾಶ ನೀಡಲಾಗಿದೆ.

ಕೋವಿಡ್‌ ಹಿನ್ನೆಲೆ ಏಪ್ರಿಲ್ 22 ರಂದು ಲಾಕ್‌ ಡೌನ್‌ ಜಾರಿಯಾದ ಕಾರಣ ರಾಜ್ಯದಲ್ಲಿ ಧಾರ್ಮಿಕ ಕೇಂದ್ರಗಳನ್ನು ಬಂದ್‌ ಮಾಡಲಾಗಿತ್ತು. ಅನ್ ಲಾಕ್ ಘೋಷಣೆಯಾದ ಬಳಿಕ ಪ್ರಾರ್ಥನಾ ಮಂದಿರಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು. ಆದರೆ, ದೇವರ ದರ್ಶನ ಹೊರತುಪಡಿಸಿ ಎಲ್ಲ ರೀತಿಯ ಸೇವೆಗಳಿಗೆ ನಿರ್ಬಂಧ ಹೇರಲಾಗಿತ್ತು.

ಸರ್ಕಾರದ ಆದೇಶ ಪ್ರತಿ

ಓದಿ : ಮತ್ತೆ ಕೋವಿಡ್​ ಏರಿಕೆ: ದೇಶದಲ್ಲಿ 39,097 ಹೊಸ ಕೊರೊನಾ ಪ್ರಕರಣ

ಇದೀಗ 2021 ಜುಲೈ 25 ರಿಂದ ಅರ್ಚಕರು, ಮೌಲ್ವಿಗಳು ಹಾಗೂ ಪಾದ್ರಿಗಳು ಧಾರ್ಮಿಕ ವಿಧಿವಿಧಾನಗಳು, ವಿಶೇಷ ಪೂಜೆ‌ ಪುನಸ್ಕಾರ, ಪ್ರಾರ್ಥನೆಗಳನ್ನು ಮಾಡಬಹುದಾಗಿದೆ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಜಾತ್ರೆ, ದೇವಸ್ಥಾನದ ಮೆರವಣಿಗೆಗಳಿಗೆ ಅವಕಾಶ ನೀಡಿಲ್ಲ.

ಕೋವಿಡ್ -19 ಮಾರ್ಗಸೂಚಿ ಪಾಲಿಸಬೇಕಾದ ಅನಿವಾರ್ಯತೆ ಹಿನ್ನೆಲೆ ಹೆಚ್ಚು ಜನ ಸೇರುವಂತಹ ಕಾರ್ಯಕ್ರಮಗಳಿಗೆ ಅವಕಾಶ ನೀಡಿಲ್ಲ. ಧಾರ್ಮಿಕ ಕೇಂದ್ರಗಳೊಂದಿಗೆ ಇನ್ನು, ಮನೋರಂಜನಾ ಪಾರ್ಕ್​ಗಳು ಹಾಗೂ ಇದೇ ರೀತಿಯ ಸ್ಥಳಗಳನ್ನು ತೆರೆಯಲು, ಜನ ಭೇಟಿ ನೀಡಲು ಅವಕಾಶ ನೀಡಲಾಗಿದೆ. ಈ ಸ್ಥಳಗಳಲ್ಲಿ ಜಲ‌ ಕ್ರೀಡೆಗಳಿಗೆ ಅವಕಾಶ ಇರುವುದಿಲ್ಲ.

ABOUT THE AUTHOR

...view details