ಬೆಂಗಳೂರು: ಹೊಸ ವರ್ಷಾಚರಣೆ ಸಂದರ್ಭವಾದ ಇಂದು ಪೊಲೀಸ್ ಸಿಬ್ಬಂದಿಗೆ ಖುಷಿ ಸುದ್ದಿ ಸಿಕ್ಕಿದೆ. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆಯಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಬಡ್ತಿ ಹಾಗೂ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ.
ಅಲೋಕ್ ಮೋಹನ್ - ರಾಜ್ಯ ಕಾರಾಗೃಹ ಇಲಾಖೆ ಡಿಜಿಪಿಯಿಂದ ಅಗ್ನಿಶಾಮಕ & ತುರ್ತುಸೇವೆ ಡಿಜಿಪಿಯಾಗಿ, ಸಿ.ಹೆಚ್ ಪ್ರತಾಪ್ ರೆಡ್ಡಿ - ಎಡಿಜಿಪಿ ಹುದ್ದೆಯಿಂದ ಡಿಜಿಪಿಯಾಗಿ ಬಡ್ತಿ ನೀಡಲಾಗಿದ್ದು, ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಮುಂದುವರೆಸಲಾಗಿದೆ. ಕೇಂದ್ರೀಯ ಸೇವೆಯಲ್ಲಿರುವ ಪಿ.ಕೆ.ಠಾಕೂರ್ - ಎಡಿಜಿಪಿ ಹುದ್ದೆಗೆ ಬಡ್ತಿ ನೀಡಲಾಗಿದ್ದು, ಸೆಂಟ್ರಲ್ ಇಂಟಲಿಜೆನ್ಸ್ ಬ್ಯೂರೋದಲ್ಲಿ ಮುಂದುವರಿಸಲಾಗಿದೆ. ಮನೀಶ್ ಕರ್ಬಿಕರ್ - ಈಶಾನ್ಯ ವಲಯದ ಐಜಿಪಿಯಿಂದ ಎಡಿಜಿಪಿಯಾಗಿ ಬಡ್ತಿ ನೀಡಲಾಗಿದ್ದು ರಾಜ್ಯ ಕಾರಾಗೃಹ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ಸೌಮೇಂದು ಮುಖರ್ಜಿ ಐಜಿಪಿಯಿಂದ ಎಡಿಜಿಪಿಯಾಗಿ ಬಡ್ತಿ ನೀಡಲಾಗಿದ್ದು ಪೊಲೀಸ್ ಸಂಪರ್ಕ - ಸಂವಹನ ಹಾಗೂ ಆಧುನೀಕರಣ ಇಲಾಖೆಗೆ ವರ್ಗಾಯಿಸಲಾಗಿದೆ.
ಎಂ.ಚಂದ್ರಶೇಖರ್ - ಐಜಿಪಿ ಕೇಂದ್ರ ವಲಯದಿಂದ ಎಡಿಜಿಪಿಯಾಗಿ ಬಡ್ತಿ ನೀಡಿ ಬೆಂಗಳೂರು ಪೂರ್ವ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಸತೀಶ್ ಕುಮಾರ್ - ಐಜಿಪಿ ಉತ್ತರ ವಲಯ ಬೆಳಗಾವಿಯಿಂದ ಐಜಿಪಿ ಈಶಾನ್ಯ ವಲಯಕ್ಕೆ ವರ್ಗಾಯಿಸಲಾಗಿದೆ. ರಮಣ್ ಗುಪ್ತಾ ಡಿಐಜಿ ಇಂಟಲಿಜೆನ್ಸ್ ಬೆಂಗಳೂರಿನಿಂದ ಐಜಿಪಿಯಾಗಿ ಬಡ್ತಿ ನೀಡಿ ಉತ್ತರ ವಲಯ ಬೆಳಗಾವಿಗೆ ವರ್ಗಾವಣೆ ಮಾಡಲಾಗಿದೆ. ಡಾ.ಬಿ.ಆರ್.ರವಿಕಾಂತೇ ಗೌಡ ಡಿಐಜಿ ಸಿಐಡಿಯಿಂದ ಐಜಿಪಿಯಾಗಿ ಬಡ್ತಿ ನೀಡಿ ಕೇಂದ್ರ ವಲಯಕ್ಕೆ ವರ್ಗಾಯಿಸಲಾಗಿದೆ.