ಬೆಂಗಳೂರು: ಕೊರೊನಾ ಎರಡನೇ ಅಲೆ ಶರವೇಗದಲ್ಲಿ ರಾಜ್ಯವನ್ನು ಆವರಿಸುತ್ತಿದ್ದು, ಇದರ ಫಲವಾಗಿ ಕರ್ನಾಟಕದಲ್ಲಿ ಮಿನಿ ಲಾಕ್‌ಡೌನ್ ಹೇರಿಕೆಯಾಗಿದೆ. ಈ ಮಿನಿ ಲಾಕ್‌ಡೌನ್ ಹೇರಿಕೆಯಿಂದ ದಿನದ ಆದಾಯವನ್ನು ನೆಚ್ಚಿರುವ ದುರ್ಬಲ ವರ್ಗದ ಮಂದಿ ಮತ್ತೆ ಅತಂತ್ರಕ್ಕೊಳಗಾಗಿದ್ದಾರೆ.
ಕಳೆದ ಬಾರಿಯ ಸುದೀರ್ಘ ಲಾಕ್‌ಡೌನ್ ನಿಂದ ಸಂಕಷ್ಟಕ್ಕೊಳಗಾಗಿದ್ದ ವಿವಿಧ ದುರ್ಬಲ ವರ್ಗದವರಿಗೆ ರಾಜ್ಯ ಸರ್ಕಾರ ವಿಶೇಷ ಪರಿಹಾರವನ್ನು ಘೋಷಿಸಿತ್ತು. ಆ ಪರಿಹಾರ ಮೊತ್ತ ಪಾವತಿಯ ಸ್ಥಿತಿಗತಿಯ ವರದಿ ಇಲ್ಲಿದೆ .
ಕೋವಿಡ್ 19ರ ಎರಡನೇ ಅಲೆ ರಭಸವಾಗಿ ರಾಜ್ಯವ್ಯಾಪಿ ಹರಡುತ್ತಿದೆ. ಈ ಕೊರೊನಾ ಅಬ್ಬರಕ್ಕೆ ಅಂಕುಶ ಹಾಕಲು ಇದೀಗ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಸೇರಿ ಕಲೆ ಕಠಿಣ ಕ್ರಮಗಳನ್ನೊಳಗೊಂಡ ಮಿನಿ ಲಾಕ್‌ಡೌನ್ ಹೇರಿದೆ. ಲಾಕ್‌ಡೌನ್ ಹೇರಿಕೆಯಿಂದ ಇದೀಗ ಮತ್ತೆ ಆರ್ಥಿಕ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ.
ಈ ಮಿನಿ ಲಾಕ್‌ಡೌನ್ ದಿನಗೂಲಿ ವೇತನವನ್ನು ನೆಚ್ಚಿಕೊಂಡಿರುವ ವಿವಿಧ ಕಾರ್ಮಿಕ ವರ್ಗದವರವನ್ನು ಮತ್ತೆ ಸಂಕಷ್ಟಕ್ಕೆ ತಳ್ಳಿದೆ. ಕಳೆದ ಬಾರಿಯ ಲಾಕ್‌ಡೌನ್ ನಿಂದ ಕಾರ್ಮಿಕರು, ದಿನಗೂಲಿ ಕಾರ್ಮಿಕರು ಸೇರಿದಂತೆ ವಿವಿಧ ದುರ್ಬಲ ವರ್ಗದವರ ಭವಿಷ್ಯ ಡೋಲಾಯಮಾನವಾಗಿತ್ತು. ಇದನ್ನರಿತ ಸರ್ಕಾರ ದಿನದ ದುಡಿಮೆ ಕಳೆದುಕೊಂಡ ದುರ್ಬಲ ವರ್ಗದವರಿಗೆ ವಿಶೇಷ ನೆರವಿನ ಪ್ಯಾಕೇಜ್ ಘೋಷಿಸಿದ್ದರು. ವಿವಿಧ ವರ್ಗಗಳಿಗೆ 2,272 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿತ್ತು.
ಘೋಷಿಸಿದ್ದು ಬೆಟ್ಟದಷ್ಟು, ಆದರೆ ಸಿಕ್ಕಿದ್ದು ಎಳ್ಳಷ್ಟು:
ಲಾಕ್‌ಡೌನ್ ವೇಳೆ ದುರ್ಬಲ ವರ್ಗದವರ ನೆರವಿಗೆ ಬಂದ ರಾಜ್ಯ ಸರ್ಕಾರ ಕಾರ್ಮಿಕರು, ಆಟೋ, ಟ್ಯಾಕ್ಸಿ ಚಾಲಕರು, ಕೂಲಿ ಕಾರ್ಮಿಕರು ಸೇರಿದಂತೆ ವಿವಿಧ ವರ್ಗದವರಿಗೆ ಪರಿಹಾರ ಪ್ಯಾಕೇಜ್ ಘೋಷಿಸಿತ್ತು. ಬರೋಬ್ಬರಿ 2,272 ಕೋಟಿ ರೂ. ಪರಿಹಾರ ಮೊತ್ತವನ್ನು ಘೋಷಿಸಿದರು. ಆದರೆ, ವಾಸ್ತವದಲ್ಲಿ ಈ ಪರಿಹಾರ ಸೀಮಿತ ಫಲಾನುಭವಿಗಳ ಕೈ ಸೇರಿದೆ. ದೊಡ್ಡ ಮಟ್ಟಿನ ಪರಿಹಾರ ಘೋಷಣೆ ಮಾಡಿದರೂ, ಅದು ಕೆಲವೇ ಕೆಲ ಫಲಾನುಭವಿಗಳ ಕೈ ಸೇರಿದೆ.
ಪರಿಹಾರ ಘೋಷಣೆ ಮಾಡಿ ವರ್ಷ ಆಗುತ್ತಿದ್ದರೂ, ಪೂರ್ಣ ಪ್ರಮಾಣದಲ್ಲಿ ಪರಿಹಾರ ಮಾತ್ರ ಇನ್ನೂ ದುರ್ಬಲ ವರ್ಗದವರ ಕೈ ಸೇರಿಲ್ಲ. ಹೂ, ತರಕಾರಿ, ಮೆಕ್ಕೆ ಜೋಳ ಬೆಳೆಗಾರರು, ನೇಕಾರರು, ಕ್ಷೌರಿಕರು, ಮಡಿವಾಳ, ಆಟೋ, ಟ್ಯಾಕ್ಸಿ ಚಾಲಕರಿಗೆ, ಕಟ್ಟಡ ಕಾರ್ಮಿಕರು ಸೇರಿದಂತೆ ಆರ್ಥಿಕವಾಗಿ ದುರ್ಬಲರಿಗೆ ಪರಿಹಾರ ಘೋಷಿಸಲಾಗಿತ್ತು. ಆದರೆ, ಹೇಳಿದಷ್ಟು ಫಲಾನುಭವಿಗಳಿಗೆ ಪರಿಹಾರವೇ ಪಾವತಿಯಾಗಿಲ್ಲ. ಪರಿಹಾರ ಪಾವತಿ ಅಂಕಿ - ಅಂಶ ನೋಡಿದರೆ, ವಿಶೇಷ ಪ್ಯಾಕೇಜ್ ಘೋಷಣೆಗೆ ಮಾತ್ರ ಸೀಮಿತವಾಗಿದೆ ಅನ್ನೋ ಪ್ರಶ್ನೆ ಮೂಡಿದೆ.
ಆಟೋ, ಕ್ಯಾಬ್ ಚಾಲಕರಿಗೆ ಸಿಕ್ಕಿದ್ದೆಷ್ಟು?:
ಉದ್ದೇಶಿತ ಆಟೋ, ಟ್ಯಾಕ್ಸಿ ಚಾಲಕರ ಸಂಖ್ಯೆ- 7.75 ಲಕ್ಷ
ಪರಿಹಾರ ಮೊತ್ತ- 5,000 ರೂ.
ಪರಿಹಾರ ಪಡೆದ ಫಲಾನುಭವಿಗಳು- 2,15,669
ಒಟ್ಟು ಪಾವತಿಸಿದ ಮೊತ್ತ- 107.83 ಕೋಟಿ ರೂ.
ಬಾಕಿ ಉಳಿದಿರುವುದು- 1.31 ಕೋಟಿ ರೂ.
ಕ್ಷೌರಿಕ/ಅಗಸರಿಗೆ ಸಿಕ್ಕಿದ್ದೆಷ್ಟು?:
ಪರಿಹಾರ ಘೋಷಣೆ- 5,000 ರೂ.
ಸ್ವೀಕೃತವಾದ ಅರ್ಜಿ- 1,41,602
ಪರಿಹಾರ ಪಡೆದ ಫಲಾನುಭವಿಗಳು- 1,19,642
ಪಾವತಿಸಿದ ಮೊತ್ತ- 59.82 ಕೋಟಿ
ಕಟ್ಟಡ ಕಾರ್ಮಿಕರಿಗೆ ಸಿಕ್ಕಿದ್ದೆಷ್ಟು?:
ಪರಿಹಾರ ಘೋಷಣೆ- 5,000 ರೂ.
ಪರಿಹಾರ ಪಡೆದ ಫಲಾನುಭವಿಗಳು- 16,48,431
ಪಾವತಿಸಿದ ಮೊತ್ತ- 824.21 ಕೋಟಿ ರೂ.
ಬಾಕಿ ಉಳಿದ ಅರ್ಜಿ- 1,02,034
ಕೈಮಗ್ಗ ನೇಕಾರರಿಗೆ ಸಿಕ್ಕಿದ್ದೆಷ್ಟು?:
ಪರಿಹಾರ ಘೋಷಣೆ- 2000 ರೂ.