ಆನೇಕಲ್ :ಇಲ್ಲಿನ ಅತ್ತಿಬೆಲೆ ಪಟಾಲಮ್ಮ ಕೆರೆ ಸರ್ವೇ ನಂಬರ್ 8 ರಲ್ಲಿ, 1 ಎಕರೆ 28 ಕುಂಟೆ ಕೆರೆ ಜಾಗವನ್ನು ಕೆಲ ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ಮನೆಗಳನ್ನು ಕಟ್ಟಿಕೊಂಡಿದ್ದರು ಎನ್ನಲಾದ ಜಾಗವನ್ನು, ತಹಶೀಲ್ದಾರ್ ದಿನೇಶ್ ಅವರು ಸ್ಥಳ ಪರಿಶೀಲನೆ ನಡೆಸಿ ತಂತಿ ಬೇಲಿ ಹಾಕಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅತ್ತಿಬೆಲೆ ಪಟಾಲಮ್ಮ ಕೆರೆ ಒತ್ತುವರಿಗೆ ಪ್ರಭಾವಿಗಳ ಹುನ್ನಾರ... ತಂತಿ ಬೇಲಿ ಹಾಕಿಸಿದ ತಹಸೀಲ್ದಾರ್ - ಆನೇಕಲ್ ತಾಲೂಕಿನ ಅತ್ತಿಬೆಲೆ
ಆನೇಕಲ್ನಲ್ಲಿ ಕೋಟ್ಯಂತರ ರೂ. ಬೆಲೆಬಾಳುವ ಜಾಗವನ್ನು ಕಬಳಿಕೆ ಮಾಡಲು ಹುನ್ನಾರ ನಡೆಸಿದ್ದರ ಬಗ್ಗೆ ತಹಶೀಲ್ದಾರ್ ಗಮನಕ್ಕೆ ಬಂದಿದ್ದು, ಕೂಡಲೇ ತಹಶೀಲ್ದಾರ್ ಸ್ಥಳ ಪರಿಶೀಲನೆ ನಡೆಸಿ ತಂತಿ ಬೇಲಿ ಹಾಕಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಅತ್ತಿಬೆಲೆಯ ಪಟಾಲಮ್ಮ ಕೆರೆಯಲ್ಲಿ 3 ಎಕರೆ 26 ಕುಂಟೆ ಜಾಗವಿತ್ತು. ಅದರಲ್ಲಿ 1 ಎಕರೆ 20 ಗುಂಟೆ ಜಾಗದಲ್ಲಿ ಕೆಲ ಪ್ರಭಾವಿಗಳು ಮನೆಗಳನ್ನು ಕಟ್ಟಿಕೊಂಡಿದ್ದಲ್ಲದೇ, ಕೆರೆ ಜಾಗದಲ್ಲಿ ಕಸ ತಂದು ಸುರಿದಿದ್ದಾರೆ. ಈ ಬಗ್ಗೆ ಎಚ್ಚೆತ್ತ ತಾಲೂಕು ಆಡಳಿತ ಆ ಜಾಗವನ್ನು ವಶಕ್ಕೆ ಪಡೆದು ಬೇಲಿ ಹಾಕಿದ್ದಾರೆ.
ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ತಹಶಿಲ್ದಾರ್ ಸ್ಥಳಕ್ಕೆ ಭೇಟಿಕೊಟ್ಟು ಸರ್ಕಾರಿ ನಾಮಫಲಕ ಹಾಕುವ ಮೂಲಕ ಆ ಜಾಗವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನು ಕೆರೆಯಂಗಳವನ್ನು ಪುನರುಜ್ಜೀವನ ಮಾಡೋದಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ತಕ್ಷಣಕ್ಕೆ ಕಾಂಪೌಂಡ್ ಹಾಕಲಾಗಿದೆ.