ಕರ್ನಾಟಕ

karnataka

ETV Bharat / state

ಬಿಬಿಎಂಪಿ 225 ವಾರ್ಡ್ ಪುನರ್ ವಿಂಗಡನೆಗಾಗಿ ಮಾರ್ಗಸೂಚಿ ಹೊರಡಿಸಿದ ಸರ್ಕಾರ - ಬಿಬಿಎಂಪಿ ವಾರ್ಡ್​​ ಪುನರ್ ವಿಂಗಡನೆ ಬಗ್ಗೆ ಅಧಿಸೂಚನೆ

ಬಿಬಿಎಂಪಿ ವಾರ್ಡ್​​ ಪುನರ್ ವಿಂಗಡನೆ ಬಗ್ಗೆ ಅಧಿಸೂಚನೆ ಹೊರಡಿಸಿದ್ದ ರಾಜ್ಯ ಸರ್ಕಾರ ಇದೀಗ ಮಾರ್ಗಸೂಚಿ ಬಿಡುಗಡೆ ಮಾಡಿದೆ.

govt-issued-guidelines-for-re-allocation-of-225-bbmp-wards
225 ಬಿಬಿಎಂಪಿ ವಾರ್ಡ್ ಪುನರ್ ವಿಂಗಡನೆಗಾಗಿ ಮಾರ್ಗಸೂಚಿ ಹೊರಡಿಸಿದ ಸರ್ಕಾರ

By

Published : Aug 6, 2023, 7:01 AM IST

ಬೆಂಗಳೂರು:ಬಿಬಿಎಂಪಿ ವಾರ್ಡ್​​ಗಳ ಪುನರ್ ವಿಂಗಡನೆ ಸಂಬಂಧ ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಬಿಜೆಪಿ ಸರ್ಕಾರ ಈ ಹಿಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೌನ್ಸಿಲರ್‌ಗಳ ಸಂಖ್ಯೆಯನ್ನು 243 ಎಂದು ನಿಗದಿಪಡಿಸಿ ಹೊರಡಿಸಲಾಗಿದ್ದ ಅಧಿಸೂಚನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಶುಕ್ರವಾರ (ಆ.4) ಹಿಂಪಡೆಯಲಾಗಿದೆ. ಪಾಲಿಕೆಯ ಕೌನ್ಸಿಲರ್‌ಗಳ ಸಂಖ್ಯೆಯನ್ನು 225 ಎಂದು ನಿಗದಿಪಡಿಸಲಾಗಿದೆ.

ಈ ಹಿನ್ನೆಲೆಯಲ್ಲಿ 2011ರ ಜನಗಣತಿಯ ಆಧಾರದ ಮೇಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪಾರ್ಡುಗಳ ಪುನರ್ ವಿಂಗಡಣೆ ಪ್ರಕ್ರಿಯೆಯ ಮಾರ್ಗಸೂಚಿಗಳನ್ನು ರಚಿಸಲು ಸರ್ಕಾರ ತೀರ್ಮಾನಿಸಿದೆ.

ವಾರ್ಡ್ ಪುನರ್ ವಿಂಗಡನೆ ಮಾರ್ಗಸೂಚಿ ಹೀಗಿದೆ:

  • ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್‌ಗಳನ್ನು ಭಾರತ ಸರ್ಕಾರ ಪ್ರಕಟಿಸಿದ ಹಾಗೂ ಪ್ರಸ್ತುತ ಲಭ್ಯವಿರುವ 2011ರ ಜನಗಣತಿಯ ಅಂಕಿ-ಅಂಶಗಳ ಆಧಾರದ ಮೇಲೆ ವಿಂಗಡಿಸಬೇಕು.
  • ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಪ್ರತಿಯೊಂದು ವಾರ್ಡ್​ನ್ನು ವಿಧಾನಸಭೆಯ ಸದಸ್ಯರ ಚುನಾವಣಾ ಕ್ಷೇತ್ರ ವ್ಯಾಪ್ತಿಯೊಳಗೆ ಬರುವ ರೀತಿಯಲ್ಲಿಯೇ ವಾರ್ಡ್‌ಗಳನ್ನು ವಿಭಾಗಿಸತಕ್ಕದ್ದು, ಮತ್ತು ಯಾವುದೇ ವಾರ್ಡ್‌ಗಳು ಆಯಾ ವಿಧಾನಸಭೆಯ ಮತಕ್ಷೇತ್ರದ ವ್ಯಾಪ್ತಿಯಿಂದ ಇತರ ವಿಧಾನಸಭಾ ಮತಕ್ಷೇತ್ರಗಳಿಗೆ ಒಳಪಡಬಾರದು.
  • ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್‌ಗಳು ಕಾರ್ಯಸಾಧ್ಯವಾದ ಮಟ್ಟಿಗೆ, ಭೌಗೋಳಿಕವಾಗಿ ದಟ್ಟವಾದ (ಕಾಂಪ್ಯಾಕ್ಸ್) ಪ್ರದೇಶಗಳಾಗಿರಬೇಕು ಮತ್ತು ಅವುಗಳನ್ನು ಮರು ವಿಂಗಡಣೆ ಮಾಡುವಾಗ ಭೌತಿಕ ಲಕ್ಷಣಗಳು, ಸಂವಹನ ಸೌಲಭ್ಯಗಳು ಮತ್ತು ಸಾರ್ವಜನಿಕರ ಅನುಕೂಲಗಳನ್ನು ಪರಿಗಣಿಸಬೇಕು.
  • ಒಂದು ವಾರ್ಡ್‌ನೊಳಗಿನ ಪ್ರದೇಶವು ಇತರ ವಾರ್ಡ್‌ಗಳಿಗೆ ವಿಸ್ತರಿಸಬಾರದು. ಅಂದರೆ, ಒಂದು ವಾರ್ಡ್‌ಗೆ ಸಂಬಂಧಿಸಿದ ವಾರ್ಡ್‌ನ ಇತರ ಪ್ರದೇಶಗಳಿಗೆ ಯಾವುದೇ ಸಂಪರ್ಕವನ್ನು ಹೊಂದಿರದ ಮತ್ತೊಂದು ವಾರ್ಡ್‌ಗೆ ಸೇರಿದ ಕೆಲವು ಪ್ರದೇಶಗಳ ಎನ್‌ಕ್ಲೇವ್/ದ್ವೀಪವನ್ನು ಹೊಂದಿರಬಾರದು.
  • ವಾರ್ಡ್‌ಗಳ ಮರುವಿಂಗಡಣೆ ಮಾಡುವ ಸಂದರ್ಭದಲ್ಲಿ ಕೆಲವು ಸಂದಿಗ್ಧತೆಗಳನ್ನು ಹೊರತುಪಡಿಸಿ, ಹಿಮ್ಮುಖ ಅಥವಾ ಗುಡ್ಡಗಾಡು ಶ್ರೇಣಿಗಳು, ಕಾಡುಗಳು ಅಥವಾ ಕಂದರಗಳಿಂದ ವಿಭಜಿಸಲ್ಪಟ್ಟ ಪ್ರದೇಶಗಳು ಮತ್ತು ಇತರ ನೈಸರ್ಗಿಕ ಅಡೆತಡೆಗಳನ್ನು ಒಳಗೊಳ್ಳುವ ಸಂದರ್ಭದಲ್ಲಿ ಪಕ್ಕದ, ಭೌಗೋಳಿಕ ವೈಶಿಷ್ಟ್ಯಗಳು, ಸಂಪರ್ಕ, ಸಂವಹನ ಸಾಧನಗಳು, ಸಾರ್ವಜನಿಕ ಅನುಕೂಲಗಳನ್ನು ಗಮನದಲ್ಲಿ ಇಟ್ಟುಕೊಂಡು ಅದೇ ವಾರ್ಡ್‌ಗೆ ಸೇರಿಸಲು ಕ್ರಮವಹಿಸಬೇಕು.
  • ಕೆಲವು ಗುಣ ಲಕ್ಷಣಗಳನ್ನು ಹೊಂದಿರುವ ಪ್ರದೇಶಗಳಾದ ಕಾಲೋನಿಗಳು, ನಿರ್ದಿಷ್ಟ ರಸ್ತೆ ಮಾದರಿಗಳು, ಕೊಳಚೆ ಪ್ರದೇಶಗಳು - ಇವುಗಳನ್ನು ವಾರ್ಡ್‌ಗಳ ಮರುವಿಂಗಡಣೆ ಪ್ರಕ್ರಿಯೆಯಲ್ಲಿ ಸಾಧ್ಯವಾದ ಮಟ್ಟಿಗೆ ಪೂರ್ಣ ಬ್ಲಾಕ್‌ಗಳನ್ನೇ ಆಯಾ ವಾರ್ಡ್‌ಗಳಲ್ಲಿ ವಿಂಗಡಿಸಿ ನಿರ್ವಹಿಸಬೇಕು.
  • ಅದಾಗ್ಯೂ, ಭೌಗೋಳಿಕ ಲಕ್ಷಣಗಳು, ಸಂವಹನ ಸಾಧನಗಳು, ಸಾರ್ವಜನಿಕ ಅನುಕೂಲತೆ, ಪ್ರದೇಶಗಳ ಅವಿಭಾಜ್ಯತೆ ಮತ್ತು ಅಗತ್ಯವಿರುವ ಅಡಳಿತಾತ್ಮಕ ಘಟಕಗಳ ವಿಭಜನೆಯನ್ನು ತಪ್ಪಿಸುವ ಅವಶ್ಯಕತೆಯಿದ್ದರೆ ಪ್ರತಿ ವಾರ್ಡಿನ ಸರಾಸರಿ ಜನಸಂಖ್ಯೆಯ 15 ಪ್ರತಿಶತದಷ್ಟು ಡಿವಿಯೇಷನ್ (ವಿಚಲನ) ಸ್ವೀಕಾರಾರ್ಹವಾಗಿರುತ್ತದೆ.
  • ಸರ್ಕಾರವು ಕರಡು ಅಧಿಸೂಚನೆಯನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಗೆಜೆಟ್ ಅಧಿಸೂಚನೆಯ ಮೂಲಕ ಮತ್ತು ಎರಡು ವ್ಯಾಪಕವಾಗಿ ಪ್ರಸಾರವಾಗುವ ದಿನಪತ್ರಿಕೆಗಳಲ್ಲಿ (ಕನಿಷ್ಠ ಒಂದಾದರೂ ಪತ್ರಿಕೆ ಕನ್ನಡ ಭಾಷೆಯಲ್ಲಿರುವಂತೆ) ಈ ವಿಷಯವನ್ನು ಪ್ರಕಟಿಸಿ ಸಾರ್ವಜನಿಕರ ಗಮನಕ್ಕೆ ತರುವುದು ಹಾಗೂ ಈ ಮೂಲಕವೂ ಸಹ ನಿರ್ದಿಷ್ಟವಡಿಸಬಹುದಾದ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೊಳಪಡುವ ಸಾರ್ವಜನಿಕರಿಂದ/ಜನಸಾಮಾನ್ಯರಿಂದ ಲಿಖಿತ ರೂಪದಲ್ಲಿ ಆಕ್ಷೇವಣೆ ಮತ್ತು ಸಲಹೆಗಳನ್ನು ಆಹ್ವಾನಿಸಬೇಕು.
  • ಅಧಿಸೂಚನೆ ಪ್ರಕಟಣೆಯ ದಿನಾಂಕದಿಂದ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ವ್ಯಾಪ್ತಿಗೊಳಪಡುವ ಸಾರ್ವಜನಿಕರಿಂದ ಲಿಖಿತ ರೂಪದಲ್ಲಿ ಆಕ್ಷೇಪಣೆಗಳನ್ನು ಮತ್ತು ಸಲಹೆಗಳನ್ನು ಆಹ್ವಾನಿಸಲು ಕನಿಷ್ಠ 15 ದಿನಗಳ ಸಮಯವನ್ನು ಒದಗಿಸಬೇಕು.
  • ಆಕ್ಷೇಪಣೆ/ಸಲಹೆಗಳನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಇವರಿಗೆ ವಿಳಾಸಕ್ಕೆ ಖುದ್ದಾಗಿ ಲಿಖಿತ ರೂಪದಲ್ಲಿ ಸ್ಪಷ್ಟವಾಗಿ ಆಕ್ಷೇಪಣೆಗಳನ್ನು ಮತ್ತು ಸಲಹೆಗಳನ್ನು ಸಲ್ಲಿಸಬೇಕು. ಸಲ್ಲಿಕೆಯಾದ ಸದರಿ ಆಕ್ಷೇಪಣೆ/ಸಲಹೆಗಳನ್ನು ಸರ್ಕಾರವು ಪರಿಶೀಲಿಸಿ ಸೂಕ್ತವಾಗಿ ನಿರ್ಣಯಿಸಿ ವಾರ್ಡ್​​ವಾರು ವಿಂಗಡಣಾ ಪ್ರಕ್ರಿಯೆ ಅಂತಿಮಗೊಳಿಸಬೇಕು.

ಇದನ್ನೂ ಓದಿ:ಬಿಬಿಎಂಪಿ ವಾರ್ಡ್​ಗಳ ಸಂಖ್ಯೆ 243ರಿಂದ 225ಕ್ಕೆ ಇಳಿಕೆ: ರಾಜ್ಯ ಸರ್ಕಾರ ಅಧಿಸೂಚನೆ

ABOUT THE AUTHOR

...view details