ಕರ್ನಾಟಕ

karnataka

ETV Bharat / state

ದಶಪಥ ರಸ್ತೆಗೆ ಹೊಂದಿಕೊಂಡಂತೆ ಅತ್ಯಾಧುನಿಕ 'ಆರೋಗ್ಯ ನಗರ' ಸ್ಥಾಪಿಸಲು ಸರ್ಕಾರ ನಿರ್ಧಾರ? - ರಾಮನಗರದಲ್ಲಿ ಆರೋಗ್ಯ ನಗರ ಸ್ಥಾಪನೆ

ಅಭಿವೃದ್ಧಿ ಕಾರ್ಯಗಳ ಮೂಲಕ ಡಿಕೆ ಸಹೋದರರ ಓಟವನ್ನು ಕಟ್ಟಿ ಹಾಕುವುದು ಸರ್ಕಾರದ ಪ್ಲಾನ್ ಆಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಸಚಿವ ಡಾ‌. ಅಶ್ವತ್ಥ್‌ ನಾರಾಯಣ ಅವರ ಬಲ ಮತ್ತಷ್ಟು ಹೆಚ್ಚಲಿದೆ. ಸಚಿವರ ಈ ಮಾಸ್ಟರ್ ಪ್ಲಾನ್ ಯಶಸ್ವಿಯಾಗುವುದೇ ಎಂಬುದನ್ನು ಕಾದುನೋಡಬೇಕು..

Govt decided to establish health city with ten line road
ದಶಪಥ ರಸ್ತೆ ಜೊತೆ ಆರೋಗ್ಯ ನಗರ ಸ್ಥಾಪನೆಗೆ ಸರ್ಕಾರ ನಿರ್ಧಾರ

By

Published : Jan 19, 2022, 3:07 PM IST

ಬೆಂಗಳೂರು : ಮೈಸೂರು-ಬೆಂಗಳೂರು ದಶಪಥ ರಸ್ತೆಗೆ ಹೊಂದಿಕೊಂಡಂತೆ ಅತ್ಯಾಧುನಿಕ 'ಆರೋಗ್ಯ ನಗರ'ವನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ದಸರಾ ಹಬ್ಬದ ವೇಳೆಗೆ ಉದ್ಘಾಟನೆಗೊಳ್ಳಲಿರುವ ಬೆಂಗಳೂರು-ಮೈಸೂರು ದಶಪಥ ರಸ್ತೆಗೆ ಹೊಂದಿಕೊಂಡಂತೆ ಸ್ಥಾಪನೆಯಾಗಲಿರುವ ಈ ಆರೋಗ್ಯ ನಗರ ಏಕಕಾಲಕ್ಕೆ ವೈದ್ಯಕೀಯ ಕಾಲೇಜು, ಆಸ್ಪತ್ರೆ ಸೇರಿ ಹಲವು ಸವಲತ್ತುಗಳನ್ನು ಒಳಗೊಳ್ಳಲಿದೆ.

ರಾಮನಗರದ ಸಮೀಪ ತಲೆ ಎತ್ತಲಿರುವ ಆರೋಗ್ಯ ನಗರದ ಶಂಕುಸ್ಥಾಪನೆ ಕಾರ್ಯ ಮಾರ್ಚ್ ಅಂತ್ಯಕ್ಕೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಹಲವು ಯೋಜನೆಗಳನ್ನು ಕಾರ್ಯಗತಗೊಳಿಸಲು ನೀಲ ನಕಾಶೆಯನ್ನ ಸರ್ಕಾರ ಸಿದ್ಧಪಡಿಸುತ್ತಿದೆ. ಆ ಮೂಲಕ ರಾಮನಗರ ಜಿಲ್ಲೆಯ ಮೇಲೆ ಡಿಕೆ ಬ್ರದರ್ಸ್ ಹೊಂದಿರುವ ಹಿಡಿತ ಸಡಿಲಗೊಳಿಸುವುದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್‌ ನಾರಾಯಣ ಲೆಕ್ಕಾಚಾರವಾಗಿದೆ.

ಬೆಂಗಳೂರು-ಮೈಸೂರು ದಶಪಥ ರಸ್ತೆ ಮತ್ತು ಆರೋಗ್ಯ ನಗರದ ನಡುವೆ ಸಂಪರ್ಕ ಸಾಧಿಸುವ ಯೋಚನೆ ಇಲ್ಲದಿದ್ದರೂ ಸಚಿವ ಅಶ್ವತ್ಥ್‌ ನಾರಾಯಣ ಅವರು ಪಟ್ಟು ಹಿಡಿದು ಈ ರಸ್ತೆಗೂ, ಆರೋಗ್ಯ ನಗರಕ್ಕೂ ಸಂಪರ್ಕ ಕಲ್ಪಿಸಲು ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಡಾ.ಅಶ್ವತ್ಥ್‌ ನಾರಾಯಣ ಅವರು ರಾಮನಗರ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾರೆ. ಇತ್ತೀಚೆಗೆ ರಾಮನಗರದಲ್ಲಿ ನಡೆದ ಸಮಾರಂಭವೊಂದರಲ್ಲಿ ಸಂಸದ ಡಿ.ಕೆ.ಸುರೇಶ್ ಅವರಿಂದ ತೀವ್ರ ವಿರೋಧ ಎದುರಿಸಿದ್ದರು. ಸಮಾರಂಭದಲ್ಲಿ ಸಚಿವರು ಭಾಷಣ ಮಾಡುವ ವೇಳೆ ಸಂಸದ ಡಿ ಕೆ ಸುರೇಶ್​ ನುಗ್ಗಿ ಬಂದು ಅವರನ್ನು ಉದ್ದೇಶಿಸಿ ಟೀಕೆ ಮಾಡಿದ ಬೆಳವಣಿಗೆ ಅಶ್ವತ್ಥ್‌ ನಾರಾಯಣ ಅವರಿಗೆ ತೀವ್ರ ಮುಜುಗರವನ್ನುಂಟು ಮಾಡಿತ್ತು. ಖುದ್ದು ಸಿಎಂ ಬೊಮ್ಮಾಯಿ ಅವರ ಉಪಸ್ಥಿತಿಯಲ್ಲಿಯೇ ಈ ಘಟನೆ ನಡೆದಿದ್ದರಿಂದ ಅಶ್ವತ್ಥ್‌ ನಾರಾಯಣ ಅವರು ಆಕ್ರೋಶಗೊಂಡಿದ್ದಲ್ಲದೆ ಡಿಕೆ ಸಹೋದರರ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಇದಕ್ಕೆ ಪ್ರತಿಯಾಗಿ ಡಿ.ಕೆ.ಶಿವಕುಮಾರ್ ಹಾಗೂ ಸಹೋದರ ಡಿ.ಕೆ.ಸುರೇಶ್ ಅವರು ಕೂಡ ಸಚಿವ ಅಶ್ವತ್ಥ್‌ ನಾರಾಯಣ ವಿರುದ್ಧ ನಿರಂತರ ವಾಗ್ಧಾಳಿ ನಡೆಸಿ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದರು. ಆದರೆ, ಈ ಬೆಳವಣಿಗೆಗೆ ಅಭಿವೃದ್ಧಿ ಕಾರ್ಯಗಳ ಮೂಲಕವೇ ಉತ್ತರ ನೀಡಲು ಬಯಸಿರುವ ಅಶ್ವತ್ಥ್‌ ನಾರಾಯಣ ಅವರು, ಇದೀಗ ಬೆಂಗಳೂರು-ಮೈಸೂರು ದಶಪಥ ರಸ್ತೆಗೆ ಹೊಂದಿಕೊಂಡಂತೆ ಆರೋಗ್ಯ ನಗರವನ್ನು ಸ್ಥಾಪಿಸುವ ಮೂಲಕ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವವನ್ನು ಆರಂಭಿಸಲು ಸಜ್ಜಾಗಿದ್ದಾರೆ. ಅದರ ಫಲವಾಗಿಯೇ ಮಾರ್ಚ್ ವೇಳೆಗೆ ಬೆಂಗಳೂರು-ಮೈಸೂರು ದಶಪಥ ರಸ್ತೆಯಲ್ಲಿ ಆರೋಗ್ಯ ನಗರದ ಶಂಕುಸ್ಥಾಪನೆ ಕಾರ್ಯ ನಡೆಯಲಿದೆ ಎಂದು ಸರ್ಕಾರದ ಉನ್ನತ ಮೂಲಗಳು ಮಾಹಿತಿ ನೀಡಿವೆ.

ಅಭಿವೃದ್ಧಿ ಕಾರ್ಯಗಳ ಮೂಲಕ ಡಿಕೆ ಸಹೋದರರ ಓಟವನ್ನು ಕಟ್ಟಿ ಹಾಕುವುದು ಸರ್ಕಾರದ ಪ್ಲಾನ್ ಆಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಸಚಿವ ಡಾ‌. ಅಶ್ವತ್ಥ್‌ ನಾರಾಯಣ ಅವರ ಬಲ ಮತ್ತಷ್ಟು ಹೆಚ್ಚಲಿದೆ. ಸಚಿವರ ಈ ಮಾಸ್ಟರ್ ಪ್ಲಾನ್ ಯಶಸ್ವಿಯಾಗುವುದೇ ಎಂಬುದನ್ನು ಕಾದುನೋಡಬೇಕು.

ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ ವಾಪಸ್ ಪಡೆಯಲು ಹೆಚ್ಚಿದ ಒತ್ತಡ.. ವಿವಿಧ ಸಂಘ-ಸಂಸ್ಥೆಗಳಿಂದ ಸಭೆ..

ABOUT THE AUTHOR

...view details