ಬೆಂಗಳೂರು:ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸುವ ಸಂಬಂಧ ರಚನೆ ಮಾಡಿರುವ ಏಳನೇ ವೇತನ ಆಯೋಗಕ್ಕೆ 44 ಹುದ್ದೆಗಳನ್ನು ಸೃಷ್ಟಿಸಿ ಸರ್ಕಾರ ಆದೇಶ ಹೊರಡಿಸಿದೆ.
ಐಎಎಸ್ ವೃಂದದ ಕಾರ್ಯದರ್ಶಿ ಹುದ್ದೆ ಸೇರಿದಂತೆ 44 ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಕಾರ್ಯದರ್ಶಿ (ಐಎಎಸ್ ವೃಂದ) ಒಂದು ಹುದ್ದೆ, ಹೆಚ್ಚುವರಿ/ಜಂಟಿ/ಉಪಕಾರ್ಯದರ್ಶಿ/ವಿಶೇಷಾಧಿಕಾರಿ ಮೂರು ಹುದ್ದೆ, ಜಂಟಿ/ಉಪ/ಸಹಾಯಕ ನಿರ್ದೇಶಕರು (ಅಂಕಿ- ಅಂಶ) ಒಂದು ಹುದ್ದೆ, ಅಧೀನ ಕಾರ್ಯದರ್ಶಿ/ಆಪ್ತ ಕಾರ್ಯದರ್ಶಿ ಆರು ಹುದ್ದೆ, ಶಾಖಾಧಿಕಾರಿ ಎರಡು ಹುದ್ದೆ, ಹಿರಿಯ ಸಹಾಯಕರು/ಸಹಾಯಕರು/ಶೀಘ್ರಲಿಪಿಗಾರರು/ ಕಿರಿಯ ಸಹಾಯಕರು/ ಬೆರಳಚ್ಚುಗಾರರು/ಡಾಟಾ ಎಂಟ್ರಿ ಆಪರೇಟರ್ ಮತ್ತು ಇತರೆ ಗ್ರೂಪ್ ಸಿ ವೃಂದದ ಹುದ್ದೆಗಳು 25, ದಲಾಯತ್ ಆರು ಹುದ್ದೆ ಸೇರಿದಂತೆ 44 ಹುದ್ದೆಗಳನ್ನು ಸೃಷ್ಟಿಸಲಾಗಿದೆ.