ಕರ್ನಾಟಕ

karnataka

ETV Bharat / state

ಎಸ್ಸಿ ಎಸ್ಟಿ ಸಮುದಾಯಗಳಿಗೆ ಆತ್ಮಗೌರವ, ಸ್ವಾಭಿಮಾನದ ಬದುಕು ಕಲ್ಪಿಸಲು ಬದ್ಧ: ವಾಲ್ಮೀಕಿ ಜಯಂತಿ ವೇಳೆ ಸಿಎಂ ಭರವಸೆ

ವಾಲ್ಮೀಕಿ ಜಯಂತಿಗೆ ಸಿಎಂ ಚಾಲನೆ. ಎಸ್ಸಿ ಎಸ್ಟಿ ಸಮುದಾಯಗಳಿಗೆ ಆತ್ಮ ಸನ್ಮಾನ, ಆತ್ಮ ಗೌರವ, ಸಮಾನ ಅವಕಾಶ, ಸ್ವಾಭಿಮಾನದ ಬದುಕು ನಡೆಸೋಕೆ ಸರ್ಕಾರ ಎಲ್ಲ ವ್ಯವಸ್ಥೆ ಮಾಡಿಯೇ ತೀರಲಿದೆ ಎಂದು ಸಿಎಂ ಭರವಸೆ ನೀಡಿದರು.

ವಾಲ್ಮೀಕಿ ಜಯಂತಿ
ವಾಲ್ಮೀಕಿ ಜಯಂತಿ

By

Published : Oct 9, 2022, 1:04 PM IST

ಬೆಂಗಳೂರು: ತುಳಿತಕ್ಕೊಳಗಾದ ಎಸ್ಸಿ ಎಸ್ಟಿ ಸಮುದಾಯಗಳಿಗೆ ಆತ್ಮ ಸಮ್ಮಾನ, ಆತ್ಮಗೌರವ, ಸಮಾನಾದ ಅವಕಾಶ, ಸ್ವಾಭಿಮಾನದ ಬದುಕು ಕಲ್ಪಿಸಲು ಏನೆಲ್ಲಾ ಮಾಡಬೇಕೋ ಅದನ್ನೆಲ್ಲಾ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ, ಮತ್ತು ಅದನ್ನು ಮಾಡಿಯೇ ತೀರಲಿದೆ‌ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅಭಯ ನೀಡಿದ್ದಾರೆ.

ಶಾಸಕರ ಭವನದಲ್ಲಿ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ನೆರವೇರಿಸಿ ವಾಲ್ಮೀಕಿ ಜಯಂತಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ಪರಿವರ್ತನೆಯ ಹರಿಕಾರ, ಶ್ರೇಷ್ಠ ಮಾನವತಾವಾದಿ, ಶ್ರೇಷ್ಠ ರಾಮಾಯಣ ರಚನೆಕಾರ. ಮನುಕುಲಕ್ಕೆ ಸದಾಕಾಲ ದಾರಿ ದೀಪ ಆಗಿರುವವರು. ವಾಲ್ಮೀಕಿ ಜಯಂತಿಯನ್ನು ಮಾಡಬೇಕೆಂದು ಗುಲ್ಬರ್ಗದ ಕ್ಯಾಬಿನೆಟ್​​ನಲ್ಲಿ ಯಡಿಯೂರಪ್ಪನವರ ನೇತೃತ್ವದಲ್ಲಿ ನಾವೆಲ್ಲರೂ ಸಚಿವ ಸಂಪುಟದಲ್ಲಿ ಅಂದು ನಿರ್ಧಾರ ಕೈಗೊಂಡಿದ್ದೆವು. ಅದರಂತೆ ಅಂದಿನಿಂದ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.

ವಾಲ್ಮೀಕಿ ಜಯಂತಿ

ಮಹರ್ಷಿ ವಾಲ್ಮೀಕಿಯ ತತ್ವ ಆದರ್ಶಗಳನ್ನು ಸಮಾಜದ ಪ್ರತಿಯೊಬ್ಬರು ಕೂಡ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಹರ್ಷಿ ವಾಲ್ಮೀಕಿ ರಾಮಾಯಣ ಇಡೀ ವಿಶ್ವದಲ್ಲಿ ಹತ್ತು ಶ್ರೇಷ್ಠ ಗ್ರಂಥಗಳಲ್ಲಿಯೇ ಶ್ರೇಷ್ಠ ಗ್ರಂಥವಾಗಿದೆ. ವಾಲ್ಮೀಕಿ ರಾಮಾಯಣ ರಚನೆ ಮಾಡಿ ಪ್ರತಿಯೊಬ್ಬರಿಗೂ ಕೂಡ ಜೀವನದ ಒಂದು ಸಾರ ನೀಡಿ, ಜೀವನದ ಒಂದು ಮಾರ್ಗವನ್ನು ಕೊಟ್ಟಿದ್ದಾರೆ. ಅಲ್ಲಿ ಬರುವಂತಹ ಪ್ರತಿಯೊಂದು ಪ್ರಸಂಗಗಳು ಕೂಡ ಅನುಕರಣೀಯ. ಅವರ ತತ್ವ ಆದರ್ಶಗಳನ್ನು ‌ನಾವು ಸರ್ಕಾರದಲ್ಲಿ ಅಳವಡಿಸಿಕೊಳ್ಳುತ್ತೇರೆ ಎಂದು ತಿಳಿಸಿದರು.

ವಾಲ್ಮೀಕಿ ಜಯಂತಿ

ತುಳಿತಕ್ಕೊಳಗಾದ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಆತ್ಮ ಸನ್ಮಾನ, ಆತ್ಮ ಗೌರವ, ಸಮಾನ ಅವಕಾಶ, ಸ್ವಾಭಿಮಾನದ ಬದುಕು ನಡೆಸೋಕೆ ಸರ್ಕಾರ ಎಲ್ಲ ವ್ಯವಸ್ಥೆ ಮಾಡಿಯೇ ತೀರಲಿದೆ. ಮಹರ್ಷಿ ವಾಲ್ಮೀಕಿಯ ಜಯಂತಿ ಸರ್ವರಿಗೂ ಒಳ್ಳೆಯದನ್ನು ಮಾಡಲಿ ಎಂದು ಸಿಎಂ ಶುಭಾಶಯ ಕೋರಿದರು.

(ಓದಿ: ಎಸ್​ಸಿ ಎಸ್​​ಟಿ ಮೀಸಲಾತಿ ಹೆಚ್ಚಿಸಲು ಸರ್ಕಾರ ಒಪ್ಪಿಗೆ: ಸರ್ವಪಕ್ಷ ಸಭೆಯಲ್ಲಿ ನಿರ್ಧಾರ)

ABOUT THE AUTHOR

...view details