ಬೆಂಗಳೂರು: ನಗರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಬಿಬಿಎಂಪಿಅಂದಾಜು 4 ಸಾವಿರ ಕೋಟಿಯಷ್ಟು ಆಸ್ತಿಹೊಂದಿದೆ. ಈ ಆಸ್ತಿಯನ್ನು ಚಿಲ್ಲರೆ ಕಾಸಿಗೆ ಲೀಸ್, ಬಾಡಿಗೆ ಹಾಗೂ ಗುತ್ತಿಗೆ ನೀಡಲಾಗಿದೆ ಎಂಬ ಆರೋಪದ ಹಿನ್ನೆಲೆ ಸರ್ಕಾರ, ಆಸ್ತಿ ವಿವರವನ್ನು ಕೇಳಿರುವುದು ಸ್ವಾಗತಾರ್ಹ ಎಂದು ಸಾಮಾಜಿಕ ಕಾರ್ಯಕರ್ತ ಅಮರೇಶ್ ಹೇಳಿದರು.
ನಗರದಲ್ಲಿ ಬಾಡಿಗೆ, ಗುತ್ತಿಗೆಹಾಗೂ ಲೀಸ್ಗೆ ನೀಡಿರುವ ಬಿಬಿಎಂಪಿಯ ಆಸ್ತಿ ವಿವರಗಳನ್ನು ಸರ್ಕಾರಕ್ಕೆ ನೀಡಲಾಗಿದೆ ಎಂದು ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ತಿಳಿಸಿದ್ದಾರೆ.