ಕರ್ನಾಟಕ

karnataka

ETV Bharat / state

ಅನರ್ಹ ಶಾಸಕರ ಬಗ್ಗೆ ಕೋರ್ಟ್​ ಕೊಡೋ ತೀರ್ಪನ್ನು ಗೌರವಿಸಬೇಕು: ಡಿಸಿಎಂ ಕಾರಜೋಳ - ಅನರ್ಹ ಶಾಸಕರ ಕೋರ್ಟ್ ತೀರ್ಪನ್ನು ಗೌರವಿಸಬೇಕು

ಅನರ್ಹ ಶಾಸಕರ ಬಗ್ಗೆ ಕೋರ್ಟ್ ಕೊಡುವ ತೀರ್ಪನ್ನು ಗೌರವಿಸಬೇಕು. ನ್ಯಾಯಾಲಯ ಇಂದಿಗೂ ಸತ್ಯ ಹಾಗೂ ವಸ್ತುಸ್ಥಿತಿ ಆಧಾರದ ಮೇಲೆ ತೀರ್ಪನ್ನ ನೀಡುತ್ತಿದೆ ಎಂದು ಡಿಸಿಎಂ ಕಾರಜೋಳ ಹೇಳಿದರು.

ಡಿಸಿಎಂ ಕಾರಜೋಳ

By

Published : Nov 4, 2019, 11:03 AM IST

ಬೆಂಗಳೂರು: ಅಧಿಕಾರಕ್ಕೆ ಬರುವುದಾಗಿ ಸಿದ್ದರಾಮಯ್ಯ ಹಗಲು ಕನಸು ಕಾಣುತ್ತಿದ್ದಾರೆ. ಪಕ್ಷಗಳು ಪ್ರವಾಹ ಸಂತ್ರಸ್ತರ ನೆರವಿಗೆ ನಿಲ್ಲಬೇಕು. ಅದು ಬಿಟ್ಟು ಸುಳ್ಳು ಆರೋಪಗಳನ್ನ ಮಾಡಿ ಜನರನ್ನು ಕೆರಳಿಸಬಾರದು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಕಿಡಿಕಾರಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಅನರ್ಹ ಶಾಸಕರ ಬಗ್ಗೆ ಕೋರ್ಟ್ ಕೊಡೋ ತೀರ್ಪನ್ನು ಗೌರವಿಸಬೇಕು. ನ್ಯಾಯಾಲಯ ಇಂದಿಗೂ ಸತ್ಯ ಹಾಗೂ ವಸ್ತುಸ್ಥಿತಿ ಆಧಾರದ ಮೇಲೆ ತೀರ್ಪನ್ನ ನೀಡುತ್ತಿದೆ ಎಂದರು.

ಗೋವಿಂದ ಕಾರಜೋಳ, ಉಪ ಮುಖ್ಯಮಂತ್ರಿ

ಅನ್ಯಾಯವಾಗಿದೆ ಎಂದು ಕೋರ್ಟ್ ಮೊರೆ ಹೋಗಿದ್ದ ಶಾಸಕರಿಗೆ ನ್ಯಾಯ ದೊರಕುತ್ತದೆ ಎಂದು ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details