ಬೆಂಗಳೂರು:ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರಿಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಶೀಘ್ರ ಗುಣಮುಖರಾಗಲಿ ಎಂದು ರಾಜ್ಯಪಾಲ ವಜುಬಾಯಿ ವಾಲಾ ಹಾರೈಸಿದ್ದಾರೆ.
ಗೋವಿಂದ ಕಾರಜೋಳಗೆ ಕೊರೊನಾ: ಶೀಘ್ರ ಗುಣಮುಖರಾಗಲೆಂದು ಕೋರಿದ ರಾಜ್ಯಪಾಲ - ಗೋವಿಂದ ಕಾರಜೋಳಗೆ ಕೊರೊನಾ ಪಾಸಿಟಿವ್
ಡಿಸಿಎಂ ಗೋವಿಂದ ಕಾರಜೋಳ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದಿದ್ದು, ಅವರು ಶೀಘ್ರ ಗುಣಮುಖರಾಗಲಿ ಬರಲಿ ಎಂದು ರಾಜ್ಯಪಾಲ ವಜುಬಾಯಿ ವಾಲಾ ಪತ್ರ ಮುಖೇನ ಹಾರೈಸಿದ್ದಾರೆ.
ರಾಜ್ಯಪಾಲ ವಜುಬಾಯಿ
ಈ ಕುರಿತು ಪತ್ರ ಬರೆದಿರುವ ಅವರು, ಡಿಸಿಎಂ ಗೋವಿಂದ ಕಾರಜೋಳ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದಿದ್ದು, ಅವರು ಶೀಘ್ರ ಗುಣಮುಖರಾಗಲಿ ಬರಲಿ ಎಂದಿದ್ದಾರೆ.
ಕೋವಿಡ್ 19 ಪರೀಕ್ಷೆಯಲ್ಲಿ ನನಗೆ ಪಾಸಿಟಿವ್ ಎಂದು ದೃಢ ಪಟ್ಟಿದ್ದು, ನನಗೆ ಯಾವುದೇ ರೋಗಲಕ್ಷಣಗಳು ಇಲ್ಲದಿದ್ದರೂ ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ನನ್ನ ಸಂಪರ್ಕದಲ್ಲಿದ್ದವರು ಮುಂಜಾಗ್ರತೆವಹಿಸಿ, ಕೋವಿಡ್ ಪರೀಕ್ಷೆಗೊಳಪಟ್ಟು ಕ್ವಾರಂಟೈನ್ ನಲ್ಲಿರುವಂತೆ ಎಂದು ಕೋರುತ್ತೇನೆ ಎಂದು ಡಿಸಿಎಂ ಟ್ವಿಟ್ಟರ್ನಲ್ಲಿ ಮನವಿ ಮಾಡಿದ್ದರು.