ಕರ್ನಾಟಕ

karnataka

ETV Bharat / state

ಲಾಕ್​​ಡೌನ್ ಮಾಡಬೇಕಾದಲ್ಲಿ ಮಾಡಿ, ಜನರ ಆರೋಗ್ಯ ಮುಖ್ಯ: ವಜುಭಾಯಿ ವಾಲಾ ಸೂಚನೆ - ಆರೋಗ್ಯದ ದೃಷ್ಟಿಯಿಂದ ಲಾಕ್ ಡೌನ್

ಸರ್ಕಾರ, ಕಾಂಗ್ರೆಸ್ ನಾಯಕರಿಂದ ಲಾಕ್​​​​ಡೌನ್ ವಿರುದ್ಧ ಹೇಳಿಕೆ ಬಂದಿತ್ತು. ಆದರೆ, ಇದೀಗ ರಾಜ್ಯಪಾಲರು ಕುಮಾರಸ್ವಾಮಿ ಅವರ ಅಭಿಪ್ರಾಯಕ್ಕೆ ಮನ್ನಣೆ ನೀಡಿದಂತೆ ಕಂಡು ಬಂದಿದೆ.

Governor Vajubhai Wala advised to govrnment
ವಜುಭಾಯಿ ವಾಲಾ ಅಭಿಪ್ರಾಯ

By

Published : Apr 20, 2021, 7:25 PM IST

Updated : Apr 20, 2021, 7:58 PM IST

ಬೆಂಗಳೂರು: ರಾಜ್ಯದ ಜನತೆಯ ಆರೋಗ್ಯದ ದೃಷ್ಟಿಯಿಂದ ಲಾಕ್ ಡೌನ್ ಮಾಡಬೇಕಾದ ಸ್ಥಿತಿ ಇದ್ದರೆ ಲಾಕ್ ಡೌನ್ ಜಾರಿಗೊಳಿಸಿ ಎಂದು ರಾಜ್ಯ ಸರ್ಕಾರಕ್ಕೆ ರಾಜ್ಯಪಾಲ ವಜುಭಾಯ್ ವಾಲಾ ಸಲಹೆ ನೀಡಿದ್ದಾರೆ.

ಓದಿ: ಲಾಕ್​​​ಡೌನ್​​ಗೆ ಪರ-ವಿರೋಧ.. 15 ದಿನ ಲಾಕ್​ಡೌನ್​ಗೆ ಹೆಚ್​​ಡಿಕೆ ಸಲಹೆ.. ಬೇಡವೇ ಬೇಡ ಎಂದರು ಡಿಕೆಶಿ..

ಸರ್ವಪಕ್ಷ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಆಲಿಸಿ ಮಾತನಾಡಿದ ರಾಜ್ಯಪಾಲರು, ಕೊರೊನಾ ನಿಯಂತ್ರಣಕ್ಕೆ ಜನರು ಸಹಕಾರ ಮಾಡಬೇಕು. ಸರ್ಕಾರ ಕಾರ್ಮಿಕರ ಬಗ್ಗೆಯೂ ಯೋಚಿಸಬೇಕು, ಯಾವ ರೀತಿ ಕಠಿಣ‌ ಕ್ರಮ ಬೇಕಾದರೂ ಕೈಗೊಳ್ಳಿ, ನಮಗೆ ಜನರ ಆರೋಗ್ಯ, ಹಿತವೇ ಮುಖ್ಯ. ಅಗತ್ಯ ಇದ್ದತೆ ಲಾಕ್ ಡೌನ್ ಮಾಡಬೇಕಾದರೂ ಮಾಡಿ ಎಂದು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಎಸ್​​​ಆರ್​​ಪಿ ಸಲಹೆ

ಸರ್ವಪಕ್ಷ ಸಭೆಯಲ್ಲಿ ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ ಮಾತ್ರ ಲಾಕ್ ಡೌನ್ ಪರ ಒಲವು ತೋರಿದ್ದರು. ಸರ್ಕಾರ, ಕಾಂಗ್ರೆಸ್ ನಾಯಕರಿಂದ ಲಾಕ್ ಡೌನ್ ವಿರುದ್ಧ ಹೇಳಿಕೆ ಬಂದಿತ್ತು. ಆದರೆ, ಇದೀಗ ರಾಜ್ಯಪಾಲರು ಕುಮಾರಸ್ವಾಮಿ ಅವರ ಅಭಿಪ್ರಾಯಕ್ಕೆ ಮನ್ನಣೆ ನೀಡಿದಂತೆ ಕಂಡು ಬಂದಿದೆ.

ತಜ್ಞರು ಲಾಕ್​​​ಡೌನ್ ಮಾಡಿ ಎಂದರೆ ಮಾಡಿ: ಎಸ್​​​ಆರ್​​ಪಿ ಸಲಹೆ

ತಜ್ಞರು ಸರ್ಕಾರಕ್ಕೆ ನವೆಂಬರ್ ನಲ್ಲಿ ಕೊಟ್ಟ ವರದಿಯನ್ನು ಪಾಲಿಸಬೇಕಾಗಿತ್ತು. ಹಿಂದಿನ‌ ಅನುಭವದ ಮೇಲೆ‌ 2ನೇ ಅಲೆ ನಿಯಂತ್ರಣ ಮಾಡಬೇಕಾಗಿತ್ತು ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ನಿಯಂತ್ರಣ ಸಂಬಂಧ ರಾಜ್ಯಪಾಲರ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಮತ್ತು ಇನ್ನು ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರಸ್ತಾಪ ಮಾಡಿದರು. ಈಗ ಹಾಸಿಗೆ, ಆಕ್ಸಿಜನ್ ಇಲ್ಲ ಅಂದ್ರೆ ಏನರ್ಥ..? ತಜ್ಞರ ಸಲಹೆ ಗಂಭೀರವಾಗಿ ತೆಗೆದುಕೊಳ್ಳಿ.

ಕೊರೊನಾ ನಿಯಂತ್ರಣ ಸಂಬಂಧ ಕೈಗೊಂಡ ಕ್ರಮಗಳಲ್ಲಿ ಪಾರದರ್ಶಕತೆ ಇಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಂದ ಲೂಟಿ ಮಾಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಅವ್ಯವಸ್ಥೆ ಇದೆ. ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ, ವೆಂಟಿಲೇಟರ್ ಇಲ್ಲ, ಆ್ಯಕ್ಸಿಜನ್, ರೆಮ್ಡೆಸಿವಿರ್​​ ಇಂಜೆಕ್ಷನ್ ಇಲ್ಲದೇ ಜನ ಪ್ರಾಣ ಬಿಡುತ್ತಿರುವುದನ್ನು ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಈ ಅವ್ಯವಸ್ಥೆ ಸರಿಪಡಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಅಂತ್ಯ ಸಂಸ್ಕಾರದ ವಿಚಾರದಲ್ಲಿ ಭ್ರಷ್ಟಾಚಾರ ಆಗಬಾರದು. ಜೀವನದ ಕೊನೆಯ ಕ್ಷಣದಲ್ಲಿ ಹಣದ ವ್ಯವಹಾರ ಆಗಬಾರದು. ಗೌರವದಿಂದ ಅಂತ್ಯಕ್ರಿಯೆ ಮಾಡಲು ಸೂಕ್ತ ಕ್ರಮ‌ ಕೈಗೊಳ್ಳಿ. ಎಲ್ಲ ಜಿಲ್ಲೆಗಳಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆ ವ್ಯವಸ್ಥೆ ಮಾಡಿ. ಐಸಿಯು ವ್ಯವಸ್ಥೆ ನಿಭಾಯಿಸಲು ಕ್ರಮ ತೆಗೆದುಕೊಳ್ಳಿ. ಬೆಂಗಳೂರಿನಲ್ಲಿ ಸೋಂಕಿತರನ್ನು ಮೂರು zonal ಮೂಲಕ ವಿಂಗಡಿಸಿ. ವಲಯವಾರು ಕ್ರಮಗಳು ಜಾರಿ ಆಗಲಿ. ಕೊರೊನಾ ಬೆಂಗಳೂರಿನಲ್ಲಿ ಮಾತ್ರ ಇಲ್ಲ. ಬೆಂಗಳೂರಿಗೆ ತೆಗೆದುಕೊಳ್ಳುವ ಕ್ರಮಗಳನ್ನು ಜಿಲ್ಲಾ ಕೇಂದ್ರಗಳಲ್ಲೂ ಜಾರಿ ಮಾಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ಕೊರತೆ ಸಾಕಷ್ಟಿದೆ:

ಆ್ಯಕ್ಸಿಜನ್ ಕೊರತೆ ಸಾಕಷ್ಟಿದೆ, ಆ್ಯಕ್ಸಿಜನ್ ಕೊರತೆಯನ್ನು ಸಮರ್ಪಕವಾಗಿ ನಿಭಾಯಿಸಬೇಕು. ಎಲ್ಲ ಆಸ್ಪತ್ರೆಗಳಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಬೇಕು. ಐಸಿಯು, ವೆಂಟಿಲೇಟರ್ ವ್ಯವಸ್ಥೆಯನ್ನು ಸರ್ಕಾರ ಯುದ್ಧೋಪಾದಿಯಲ್ಲಿ ಮಾಡಬೇಕಿದೆ.

ಕೊರೊನಾ ಸಾಂಕ್ರಾಮಿಕವಾಗದಂತೆ ತಡೆಯಲು ಧಾರ್ಮಿಕ ಕೇಂದ್ರಗಳು, ಸಿನಿಮಾ ಥಿಯೇಟರ್, ಮಾಲ್​ಗಳು, ಪಾರ್ಕ್​, ಈಜುಕೊಳಗಳನ್ನು ಬಂದ್ ಮಾಡಬೇಕು. ಮದುವೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಜನ ಸೇರದಂತೆ ಕ್ರಮ ವಹಿಸಬೇಕು. ರಾಜ್ಯದಲ್ಲಿ ಸಂತೆ, ಜಾತ್ರೆ, ರಾಜಕೀಯ ಸಭೆ ನಿಷೇಧ ಮಾಡಿ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ಲಾಕ್​​ಡೌನ್ ಅಗತ್ಯವಾದರೆ ಮಾಡಿ:

ಲಾಕ್ ಡೌನ್ ಅಂದರೆ ಗೃಹ ಬಂಧನವಿದ್ದಂತೆ. ಜೈಲಿಗೆ ಹೋದವರಿಗೆ ಊಟ, ಸಂಬಳ ಕೊಡ್ತೀರಿ. ಆದರೆ ಗೃಹ ಬಂಧನದಲ್ಲಿ ಇದ್ದರೆ ಏನ್ ಕೊಡ್ತೀರಿ..? ಲಾಕ್ ಡೌನ್ ಮಾಡೋ‌ ಮೊದಲು ತಜ್ಞರ ಅಭಿಪ್ರಾಯ ಕೇಳಿ. ತಜ್ಞರು ಲಾಕ್ ಡೌನ್ ಮಾಡಿ ಎಂದರೆ ಮಾಡಿ. ಆದರೆ ಲಾಕ್ ಡೌನ್ ಮಾಡೋ‌ ಮೊದಲು ಎಲ್ಲಾ ವ್ಯವಸ್ಥೆ ಮಾಡಬೇಕು.

ಕಳೆದ ವರ್ಷದ ಲಾಕ್​ಡೌನ್ ನಿಂದ ಜನ ನೋವು ಉಂಡಿದ್ದಾರೆ. ಲಾಕ್ ಡೌನ್ ಮಾಡದೇ ಪರ್ಯಾಯ ವ್ಯವಸ್ಥೆ ಮಾಡಬೇಕು. ಲಾಕ್ ಡೌನ್ ಮಾಡದೇ ಏನೆಲ್ಲಾ ನಿಷೇಧ ಮಾಡಬಹುದೋ ಅದನ್ನು ಮಾಡಿ. ಕಳೆದ ಬಾರಿ ಆದ ತೊಂದರೆ ಮತ್ತೊಮ್ಮೆ ಆದರೆ, ಈ ರಾಜ್ಯದ ಜನ ನಿಮ್ಮನ್ನು ಕ್ಷಮಿಸಲ್ಲ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

Last Updated : Apr 20, 2021, 7:58 PM IST

ABOUT THE AUTHOR

...view details