ಬೆಂಗಳೂರು:ಸಂತ್ರಸ್ತ ಯುವತಿಗೆರಕ್ಷಣೆ ನೀಡುವುದು, ದೌರ್ಜನ್ಯವಾಗದಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರದ ಮೂಲಭೂತ ಕರ್ತವ್ಯ. ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಹೇಳಬೇಕಾಗಿರುವುದನ್ನೆಲ್ಲಾ ಸದನದಲ್ಲಿ ಹೇಳಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಮಾಧ್ಯಮಗಳ ಜತೆ ಮಾತನಾಡುತ್ತಾ, ಸಂತ್ರಸ್ತ ಯುವತಿಯ ವಿಡಿಯೋ ನಾನು ನೋಡಿಲ್ಲ. ಜನಪ್ರತಿನಿಧಿ ನ್ಯಾಯಾಲಯದಲ್ಲಿ ಎಕನಾಮಿಕ್ ಅಫೆನ್ಸ್ ಪ್ರಕರಣದ ವಿಚಾರಣೆ ಇತ್ತು. ಅದಕ್ಕೆ ಹಾಜರಾಗಿ ಈಗಷ್ಟೇ ಬಂದಿದ್ದೇನೆ. ಕಳೆದ ಬಾರಿ ಹೋಗಲು ಆಗಿರಲಿಲ್ಲ. ಹೀಗಾಗಿ ಇಂದು ಹೋಗಿ ಬಂದಿದ್ದೇನೆ. ಈ ವಿಡಿಯೋ ಏನು ಎಂಬುದನ್ನು ನೋಡುತ್ತೇನೆ ಎಂದರು.
ಈ ವಿಚಾರದಲ್ಲಿ ನಾನೇನು ಹೇಳಲು ಇಲ್ಲ. ನಾನು ಏನೇನು ಮಾತನಾಡಬೇಕೋ ಅದನ್ನು ಸದನದಲ್ಲಿ ಮಾತನಾಡಿದ್ದೇನೆ. ಮಿಕ್ಕಿದ್ದನ್ನು ವಿಡಿಯೋ ನೋಡಿದ ನಂತರ ನಿರ್ಧರಿಸುತ್ತೇನೆ ಎಂದರು.