ಕರ್ನಾಟಕ

karnataka

ETV Bharat / state

ಖಾಸಗಿ ವಾಹನಗಳ ತೆರಿಗೆ ಪಾವತಿ ದಿನಾಂಕ ಮುಂದೂಡಿದ ಸರ್ಕಾರ - ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ

ಸಾರಿಗೆ ಮುಷ್ಕರ ಹಿನ್ನೆಲೆ ಖಾಸಗಿ ವಾಹನಗಳನ್ನು ನೆಚ್ಚಿಕೊಂಡಿರುವ ಸರ್ಕಾರ, ಅವರ ಮನವಿ ಮೇರೆಗೆ ನಿಯಮದಲ್ಲಿ ಸಡಿಲಿಕೆ ಮಾಡಿದೆ. ಖಾಸಗಿ ವಾಣಿಜ್ಯ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡುವಂತೆ ವಾಹನ‌ ಮಾಲೀಕರ ಬಹು ದಿನಗಳ ಬೇಡಿಕೆಯಾಗಿತ್ತು.

Government to postpone tax payment of private vehicles
ಖಾಸಗಿ ವಾಹನಗಳ ತೆರಿಗೆ ಪಾವತಿ ದಿನಾಂಕ ಮುಂದೂಡಿದ ಸರ್ಕಾರ

By

Published : Apr 12, 2021, 10:30 PM IST

ಬೆಂಗಳೂರು: ಖಾಸಗಿ ವಾಹನ ಮಾಲೀಕರ ಮನವಿ ಪುರಸ್ಕರಿಸಿರುವ ಸರ್ಕಾರ ಎಲ್ಲ ವಾಣಿಜ್ಯ ವಾಹನಗಳ ತೆರಿಗೆ ಪಾವತಿ ಡೆಡ್​​​​ಲೈನ್ ಮುಂದೂಡಿದೆ.

ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ 1957ರ ಕಲಂ 4(1) ನಿಯಮಗಳನ್ನು ಸಡಿಲಗೊಳಿಸಿ ಕರ್ನಾಟಕ ರಾಜ್ಯದ ಎಲ್ಲಾ ನೋಂದಾಯಿತ ಸಾರಿಗೆ ಪ್ರಯಾಣಿಕ ವಾಹನಗಳಿಗೆ (ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ) ಅನ್ವಯಿಸುವಂತೆ ಏ.15 ರೊಳಗಾಗಿ ಪಾವತಿಸಬೇಕಾಗಿದ್ದ ಮೋಟಾರು ವಾಹನ ತೆರಿಗೆಯನ್ನು ದಂಡರಹಿತವಾಗಿ ಪಾವತಿಸಲು ಏ.30ರ ವರೆಗೆ ಅವಧಿಯನ್ನು ವಿಸ್ತರಿಸಿ ಆದೇಶಿಸಿದೆ.

ಖಾಸಗಿ ವಾಹನಗಳ ತೆರಿಗೆ ಪಾವತಿ ದಿನಾಂಕ ಮುಂದೂಡಿದ ಸರ್ಕಾರ

ಸಾರಿಗೆ ಮುಷ್ಕರ ಹಿನ್ನೆಲೆ ಖಾಸಗಿ ವಾಹನಗಳನ್ನು ನೆಚ್ಚಿಕೊಂಡಿರುವ ಸರ್ಕಾರ, ಅವರ ಮನವಿ ಮೇರೆಗೆ ನಿಯಮದಲ್ಲಿ ಸಡಿಲಿಕೆ ಮಾಡಿದೆ. ಖಾಸಗಿ ವಾಣಿಜ್ಯ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡುವಂತೆ ವಾಹನ‌ ಮಾಲೀಕರ ಬಹು ದಿನಗಳ ಬೇಡಿಕೆಯಾಗಿತ್ತು. ಈ ಸಂಬಂಧ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೆ, ದಂಡರಹಿತ ತೆರಿಗೆ ಪಾವತಿಗೆ ಅವಕಾಶ ಮಾಡಿಕೊಟ್ಟಿದೆ.

ಇದನ್ನೂ ಓದಿ:ಮಾಧ್ಯಮಗಳಲ್ಲಿ ಅಶ್ಲೀಲ ವಿಚಾರ ನಿರ್ಬಂಧಕ್ಕೆ ಶಾಸನ ರೂಪಿಸಲು ಕೋರಿ ಪಿಐಎಲ್ : ಕೇಂದ್ರಕ್ಕೆ ಕೋರ್ಟ್ ನೋಟಿಸ್

ABOUT THE AUTHOR

...view details