ಬೆಂಗಳೂರು: ಕೋವಿಡ್-19 ಮಹಾಮಾರಿ 2ನೇ ಅಲೆ ಡಿ. 2ನೇ ವಾರದಿಂದ ರಾಜ್ಯದಲ್ಲಿ ಆರಂಭವಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಈ ಕಾರಣದಿಂದ ಹೊಸ ವರ್ಷ ಆಚರಣೆಗೆ ಸರ್ಕಾರ ಬ್ರೇಕ್ ಹಾಕುವ ಚಿಂತನೆಯಲ್ಲಿದೆ. ಒಂದು ವೇಳೆ ಸರ್ಕಾರ ಹೊಸ ವರ್ಷ ಆಚರಣೆಗೆ ಬ್ರೇಕ್ ಹಾಕಿದ್ರೆ, ಹೋಟೆಲ್ ಹಾಗೂ ಪಬ್-ಬಾರ್ಗಳಿಗೆ ನಷ್ಟ ಕಟ್ಟಿಟ್ಟ ಬುತ್ತಿಯಾಗಿದೆ.
2020 ಮಾರ್ಚ್ನಿಂದ ಆರಂಭವಾದ ಕೊರೊನಾ ಮಹಾಮಾರಿಯಿಂದ ನಷ್ಟದಲ್ಲಿದ್ದ ಆತಿಥ್ಯ ವಲಯ, ಸೆಪ್ಟೆಂಬರ್ ತಿಂಗಳಿಂದ ಕೊಂಚ ಮಟ್ಟಿಗೆ ಚೇತರಿಕೆ ಕಂಡಿತ್ತು. ಹಾಗಾಗಿ ಕ್ರಿಸ್ಮಸ್, ಹೊಸ ವರ್ಷ ಆಚರಣೆ ವೇಳೆ ಆದಾಯದ ನಿರೀಕ್ಷೆಯಲ್ಲಿದ್ದರು. ಆದರೆ, ಟಾಸ್ಕ್ ಫೋರ್ಸ್ ವರದಿ ಗಮನಿಸಿದ ಸರ್ಕಾರ ರಾತ್ರಿ ಕರ್ಫ್ಯೂ ಜೊತೆಗೆ ಬ್ರಿಗೇಡ್ ರೋಡ್ ಹಾಗೂ ಇತರ ಪಾರ್ಟಿಗಳಿಗೆ ನಿಷೇಧ ಹೇರುವ ಚಿಂತೆಯಲ್ಲಿದೆ. ಇದರಿಂದ ಆತಿಥ್ಯ ವಲಯ ಇನ್ನಷ್ಟು ನಷ್ಟ ಎದುರಿಸಬೇಕಾಗಬಹುದು.