ಕರ್ನಾಟಕ

karnataka

ETV Bharat / state

ಸಮಯೋಚಿತ ನಿರ್ಧಾರ ತೆಗೆದುಕೊಂಡಿದ್ದೇವೆ: ಕುಮಾರಸ್ವಾಮಿ ಹೇಳಿಕೆಗೆ ಬೊಮ್ಮಾಯಿ ತಿರುಗೇಟು - ಡಿಕೆ ಶಿವಕುಮಾರ್

ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟೀಕೆ ಮುಂದುವರೆದಿರುವ ಹಿನ್ನೆಲೆ ಗೃಹ ಸಚಿವರು ಪಾದರಾಯನಪುರ ವಿಚಾರದಲ್ಲಿ ಸ್ಪಷ್ಟೀಕರಣ ನೀಡಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಪಾದರಾಯನಪುರದ ಕಿಡಿಗೇಡಿಗಳನ್ನು ರಾಮನಗರ ಜೈಲಿಗೆ ಸ್ಥಳಾಂತರ ಮಾಡಿದ್ದ ನಿರ್ಧಾರವನ್ನು ಸಚಿವರು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.

government taken timely direction on issues Home minister on Padarayanapura case
ಸಮಯೋಚಿತ ನಿರ್ಧಾರ ತೆಗೆದುಕೊಂಡಿದ್ದೇವೆ: ಕುಮಾರಸ್ವಾಮಿ ಹೇಳಿಕೆಗೆ ಬೊಮ್ಮಾಯಿ ತಿರುಗೇಟು

By

Published : Apr 24, 2020, 8:22 PM IST

ಬೆಂಗಳೂರು: ಸರ್ಕಾರವು ಸಮಯೋಚಿತವಾಗಿ ನಿರ್ಣಯವನ್ನು ತೆಗೆದುಕೊಂಡಿದೆ. ಕೋವಿಡ್ ಹೋರಾಟದಲ್ಲಿ ಕ್ಷಣ-ಕ್ಷಣಕ್ಕೆ ಬದಲಾಗುತ್ತಿರುವ ವಸ್ತುಸ್ಥಿತಿಗೆ ಅನುಗುಣವಾಗಿ ಸರ್ಕಾರದ ಕಾರ್ಯಾಚರಣೆ ಅನಿವಾರ್ಯ ಹಾಗೂ ಅವಶ್ಯಕ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅಲ್ಲದೆ ಪಾದರಾಯನಪುರದ ಕಿಡಿಗೇಡಿಗಳನ್ನು ರಾಮನಗರ ಜೈಲಿಗೆ ಸ್ಥಳಾಂತರಿಸಿದ್ದ ನಿರ್ಧಾರವನ್ನು ಸಚಿವರು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.

ಪಾದರಾಯನಪುರ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಬೆಂಗಳೂರು ಪೊಲೀಸರು ಕೂಡಲೇ ಕ್ರಮ ಜರುಗಿಸಿ 2 ದಿನಗಳಲ್ಲಿ ಒಟ್ಟು 125 ಜನರನ್ನು ಬಂಧಿಸಿದ್ದಾರೆ ಹಾಗೂ ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ಇದರಲ್ಲಿ 121 ಜನರನ್ನು ನ್ಯಾಯಾಂಗ ಬಂಧನಕ್ಕೆ ಹಾಗೂ 4 ಜನರನ್ನು ಪೊಲೀಸ್ ಕಸ್ಟಡಿಗೆ ಕೊಟ್ಟಿರುತ್ತದೆ ಎಂದು ಪೊಲೀಸ್ ಆರಂಭಿಕ‌ ಕಾರ್ಯದ ವಿವರಣೆ ನೀಡಿದ್ದಾರೆ. ಸುಪ್ರೀಂಕೋರ್ಟ್‌ನ ಆದೇಶದ ಹಿನ್ನೆಲೆ ಅತೀ ಹೆಚ್ಚು ಕೈದಿಗಳ ಸಂಖ್ಯೆ ಇರುವ ಪರಪ್ಪನ ಅಗ್ರಹಾರಕ್ಕೆ ಈ ಕೈದಿಗಳನ್ನು ಇಡಲು ಸಾಧ್ಯವಾಗದ ಮೇಲೆ ಬೆಂಗಳೂರಿಗೆ ಹತ್ತಿರವಿರುವ ರಾಮ‌ನಗರ ಜಿಲ್ಲೆಯಲ್ಲಿ ಇರಿಸಲಾಗಿತ್ತು.

ಸಮಯೋಚಿತ ನಿರ್ಧಾರ ತೆಗೆದುಕೊಂಡಿದ್ದೇವೆ: ಕುಮಾರಸ್ವಾಮಿ ಹೇಳಿಕೆಗೆ ಬೊಮ್ಮಾಯಿ ತಿರುಗೇಟು

ಎಲ್ಲಾ 121 ಜನರನ್ನು ಕೋವಿಡ್ ಟೆಸ್ಟ್​ಗೆ ಒಳಪಡಿಸಿದ್ದು, ಅದರಲ್ಲಿ 5 ಜನರಿಗೆ ಸೋಂಕು ಇರುವುದು ಕಂಡು ಬಂದಿದೆ. ಅವರನ್ನು ವಿಕ್ಟೋರಿಯಾ ಕೋವಿಡ್ ಆಸ್ಪತ್ರೆಗೆ ಮುಂದಿನ ಚಿಕಿತ್ಸೆಗೆ ಸೇರಿಸಲಾಗಿದೆ. ಇನ್ನುಳಿದ 116 ಜನರನ್ನು ಬೆಂಗಳೂರಿನ ಹಜ್ ಭವನಕ್ಕೆ ಕ್ವಾರಂಟೈನ್ ಮಾಡುವುದಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸಚಿವ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.

ಇವರನ್ನು ರಾಮನಗರ ಜೈಲಿಗೆ ಕಳುಹಿಸಿದರ ಹಿಂದೆ ಯಾವುದೇ ದುರದ್ದೇಶವಿರುವುದಿಲ್ಲ. ಎಲ್ಲರನ್ನು ಪರೀಕ್ಷೆಗೆ ಒಳಪಡಿಸುತ್ತೇವೆ ಹಾಗೂ ಪಾಸಿಟಿವ್ ಬಂದರೆ ಅವರನ್ನು ಸ್ಥಳಾಂತರ ಮಾಡುತ್ತೇವೆಂದು ಅಲ್ಲಿಯ ಜನಪ್ರತಿನಿಧಿಗಳಿಗೆ ಹಾಗೂ ಮಾಜಿ ಮುಖ್ಯಮಂತ್ರಿಗೆ ತಿಳಿಸಿದಂತೆ ಅವರನ್ನು ಕೂಡಲೇ ಸ್ಥಳಾಂತರಿಸಲಾಗಿದೆ ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

ABOUT THE AUTHOR

...view details