ಬೆಂಗಳೂರು: ಲಸಿಕೆ ವಿಚಾರದಲ್ಲಿ ಸರ್ಕಾರ ತನ್ನ ಸಲಹೆಗಾರರಾದ ಗಗನ್ ದೀಪ್ ಕಾಂಗ್ ಅವರ ಮಾತು ಕೇಳಿದರೆ ಸಾಕು, ಪರಿಣಾಮಕಾರಿಯಾಗಿ ಲಸಿಕೆ ವಿತರಣೆ ಮಾಡಬಹುದು. ಆದರೆ ಸರ್ಕಾರ ತನ್ನ ಸಲಹೆಗಾರರ ಮಾತನ್ನು ಒಪ್ಪಲು ಸಿದ್ಧವಿದೆಯೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ಕಾಂಗ್ ಅವರು ಖ್ಯಾತ ವೈರಾಣು ತಜ್ಞರಾಗಿದ್ದು, ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ವೈರಾಣು ವಿಜ್ಞಾನ ವಿಭಾಗದ ಪ್ರೊಫೆಸರ್ ಆಗಿದ್ದಾರೆ. ಕಳೆದ ತಿಂಗಳು ರಾಜ್ಯ ಸರ್ಕಾರ ಇವರನ್ನು ಲಸಿಕೆ ತಾಂತ್ರಿಕ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿತ್ತು. ಕಾಂಗ್ ಅವರ ನೇಮಕವಾದಾಗ ಸರ್ಕಾರ ಕಡೆಗೂ ವಿಜ್ಞಾನಿಗಳ ಸಲಹೆ ಪಡೆಯಲು ಮುಂದಾಗಿದೆ ಎಂದು ಭಾವಿಸಿದ್ದೆವು. ಆದರೆ ಸಲಹೆಗಾರರ ಅಭಿಪ್ರಾಯಕ್ಕೂ ಸರ್ಕಾರದ ನಿರ್ಧಾರಗಳಿಗೂ ಹೊಂದಾಣಿಕೆಯೇ ಆಗುತ್ತಿಲ್ಲ. ಹೀಗಾಗಿ ಸರ್ಕಾರ ಕೇವಲ ಪ್ರಚಾರಕ್ಕೆ ಮಾತ್ರ ಸಲಹೆಗಾರರನ್ನು ನೇಮಕ ಮಾಡಿಕೊಂಡಿದೆ ಎಂಬುದು ಸ್ಪಷ್ಟವಾಗುತ್ತಿದೆ ಎಂದು ಡಿಕೆಶಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ ಅವರು ಕೋವಿಡ್ ನಿರ್ವಹಣೆ ವಿಚಾರವಾಗಿ ವ್ಯಕ್ತಪಡಿಸಿರುವ 10 ಅಂಶಗಳನ್ನು ಡಿ.ಕೆ. ಶಿವಕುಮಾರ್ ಅವರು ಉಲ್ಲೇಖಿಸಿದ್ದು, ಕಾಂಗ್ ಅವರ ಅಭಿಪ್ರಾಯಗಳನ್ನು ಸರ್ಕಾರ ಪರಿಗಣಿಸುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ಅವರ ಪ್ರಶ್ನಾಂಶಗಳು ಇಂತಿದೆ.
ಲಸಿಕೆ ಖರೀದಿಯಲ್ಲಿ ವಿಳಂಬ:
ಲಸಿಕೆ ಖರೀದಿ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಮಾಡಬೇಕೇ ಹೊರತು, ರಾಜ್ಯ ಸರ್ಕಾರವಲ್ಲ ಎಂದು ಸಲಹೆಗಾರರು ಅಭಿಪ್ರಾಯಪಟ್ಟಿದ್ದು, ಇದನ್ನು ಸರ್ಕಾರ ಒಪ್ಪುತ್ತದೆಯೇ ಎಂದು ಕಾಂಗ್ರೆಸ್ ಕೇಳಲು ಬಯಸುತ್ತದೆ. ಇನ್ನು ಕೇಂದ್ರ ಸರಕಾರವು ಜಾಗತಿಕ ಕಂಪನಿಗಳಿಂದ ಲಸಿಕೆ ಖರೀದಿಯಲ್ಲಿ ವಿಳಂಬ ಮಾಡಿದೆ ಎಂಬುದನ್ನಾದರೂ ಸರ್ಕಾರ ಒಪ್ಪಿಕೊಳ್ಳುತ್ತದೆಯೇ?
ಕಾಂಗ್ ಅವರು ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ, 'ಇಡೀ ವಿಶ್ವ ಮುಂದಿನ ಒಂದು ವರ್ಷದಲ್ಲಿ ಎದುರಾಗುವ ಸವಾಲು ಎದುರಿಸಲು ಲಸಿಕೆ ಖರೀದಿ ಮಾಡುತ್ತಿದೆ. ಆದರೆ ನಮಗೆ ಮಾರುಕಟ್ಟೆಯಲ್ಲಿ ಸದ್ಯದ ಬೇಡಿಕೆಯಷ್ಟು ಮಾತ್ರ ಲಸಿಕೆ ಲಭ್ಯವಾಗುತ್ತಿದೆ. ಹೀಗಾಗಿ ನಾವು ಹೆಚ್ಚಿನ ಪ್ರಮಾಣದ ಲಸಿಕೆ ಖರೀದಿಸಬೇಕು’ ಎಂದಿದ್ದಾರೆ.
ಜಾಗತಿಕ ಟೆಂಡರ್:
ಇನ್ನು ಕಾಂಗ್ ಅವರು ಜಾಗತಿಕ ಟೆಂಡರ್ ಅನ್ನು ಸಂಪನ್ಮೂಲದ ವ್ಯರ್ಥ ಎಂದು ಹೇಳಿರುವ ದಾಖಲೆಗಳಿವೆ. ಹಾಗಾದರೆ ಕರ್ನಾಟಕ ಸರ್ಕಾರವು ಜಾಗತಿಕ ಟೆಂಡರ್ ಮೂಲಕ ಲಸಿಕೆ ಖರೀದಿ ನಿರ್ಧಾರದಲ್ಲಿ ಸಲಹೆಗಾರರ ಅಭಿಪ್ರಾಯವನ್ನು ಪರಿಗಣಿಸಿದೆಯೇ ಎಂಬ ಅನುಮಾನಗಳು ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಜಾಗತಿಕ ಟೆಂಡರ್ ಮೂಲಕ ಎಷ್ಟು ಪ್ರಮಾಣದ ಲಸಿಕೆಯನ್ನು, ಯಾವಾಗ ಖರೀದಿ ಮಾಡಲಿದೆ ಎಂಬ ಮಾಹಿತಿ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತದೆ.
ಡಿಸೆಂಬರ್ ಗಡುವು ಬಗ್ಗೆ ಪ್ರಶ್ನೆ:
ಕೇಂದ್ರ ಸರ್ಕಾರ ಈ ವರ್ಷ ಡಿಸೆಂಬರ್ ವೇಳೆಗೆ 2 ಕೋಟಿ ಡೋಸ್ ಲಸಿಕೆ ಖರೀದಿ ಮಾಡುವುದಾಗಿ ತಿಳಿಸಿದ್ದು, ಗಗನ್ ದೀಪ್ ಕಾಂಗ್ ಅವರು, ‘ಇದು ವಾಸ್ತವಾಂಶಕ್ಕೆ ದೂರವಾದದ್ದು’ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಾಗಾದರೆ ರಾಜ್ಯ ಬಿಜೆಪಿ ಸರ್ಕಾರ ತನ್ನ ಸಲಹೆಗಾರರ ಅಭಿಪ್ರಾಯವನ್ನು ಒಪ್ಪುತ್ತದೆಯೇ? ಹಾಗೂ ರಾಜ್ಯದಲ್ಲಿರುವ ಎಲ್ಲ ವಯಸ್ಕರಿಗೂ ಪೂರ್ಣ ಪ್ರಮಾಣದಲ್ಲಿ ಲಸಿಕೆ ನೀಡಲು ಹಾಕಿಕೊಂಡಿರುವ ಕಾಲಮಿತಿಯ ಬಗ್ಗೆ ವಿವರ ನೀಡುತ್ತದೆಯೇ?
ಕೋವ್ಯಾಕ್ಸಿನ್ ಪರಿಣಾಮದ ಅಂಕಿ ಅಂಶ: