ಕೆ.ಆರ್ ಪುರಂ(ಬೆಂಗಳೂರು): ನಗರದ ಕೆಆರ್ ಪುರಂನಲ್ಲಿ ಹೈಟೆಕ್ ಸರ್ಕಾರಿ ಶಾಲೆಯೊಂದು ನಿರ್ಮಾಣವಾಗಿದ್ದು, ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿರುವ ಈ ಶಾಲೆ ಖಾಸಗಿ ಶಾಲೆಗಳಿಗೆ ಸೆಡ್ಡುಹೊಡೆಯುವಂತೆ ನಿರ್ಮಾಣಗೊಂಡಿದೆ.
ಕ್ಯಾಪಿಟಾಲ್ಯಾಂಡ್ ಹಾಗೂ ಹೋಪ್ ಪೌಂಡೇಷನ್ ಸಹಕಾರಿದಿಂದ ತಲೆಯೆತ್ತಿರುವ ಸರ್ಕಾರಿ ಪ್ರಾಥಮಿಕ ಶಾಲೆ 10 ಹಲವು ಸೌಲಭ್ಯಗಳನ್ನು ಒಳಗೊಂಡಿದ್ದು, 5.5 ಕೋಟಿ ರೂ. ಅನುದಾನದಲ್ಲಿ ನಿರ್ಮಾಣವಾಗಿದೆ. ಸ್ಥಳೀಯ ಶಾಸಕ ಹಾಗೂ ಸಚಿವರಾದ ಬೈರತಿ ಬಸವರಾಜ್ ಅವರು ಇಂದು ಶಾಲೆಯ ಉದ್ಘಾಟನೆ ಮಾಡಿದರು.
ಈ ಶಾಲೆಯಲ್ಲಿ ಎಲ್ಕೆಜಿ ಯಿಂದ ಎಂಟನೇ ತರಗತಿಯವರೆಗೂ ಅಭ್ಯಾಸ ಮಾಡಬಹುದಾಗಿದೆ. ವಿದ್ಯಾರ್ಥಿಗಳಿಗೆ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ವಿದ್ಯಾಭ್ಯಾಸಕ್ಕೆ ಒತ್ತು ನೀಡಲಾಗಿದ್ದು, ಬೆಂಗಳೂರಿನಲ್ಲೇ ಇಂತಹ ಹೈಟೆಕ್ ಸೌಲಭ್ಯ ಹೊಂದಿರುವ ಮೊದಲ ಶಾಲೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಮಕ್ಕಳಿಗೆ ಓದಿನಲ್ಲಿ ಹೆಚ್ಚಿನ ಏಕಾಗ್ರತೆ ಸೃಷ್ಟಿಯಾಗಲು ಇಲ್ಲಿನ ಶಾಲೆಯ ವಾತಾವರಣ ಸುಭಿಕ್ಷವಾಗಿದ್ದು ಉತ್ತಮ ಕೊಠಡಿಗಳು, ಬೆಂಚುಗಳು, ಬೋರ್ಡ್ ಹಾಗೂ ಗ್ರಂಥಾಲಯ, ಶಾಲಾ ಆವರಣದಲ್ಲಿ ಮಕ್ಕಳ ಆಟಿಕೆಗಳು, ಶಿಕ್ಷಕರಿಗಾಗಿ ವಿಶೇಷ ಕೊಠಡಿಗಳು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಈ ಸರ್ಕಾರಿ ಶಾಲೆ ಒಳಗೊಂಡಿದೆ.
ಇದನ್ನೂ ಓದಿ:ಮತದಾರರ ಮಾಹಿತಿ ದುರುಪಯೋಗ: ಜಿಲ್ಲಾಧಿಕಾರಿ ಅರ್ಜಿ ವಿಚಾರಣೆ ಮುಂದೂಡಿಕೆ