ಬೆಂಗಳೂರು:ಖಾಸಗಿ ಲ್ಯಾಬ್ಗಳಲ್ಲಿ ಕೋವಿಡ್ ಟೆಸ್ಟ್ ದರವನ್ನು ಮರು ಪರಿಷ್ಕರಿಸಿ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರ ಕೋವಿಡ್ ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡಿ ಆದೇಶ ಹೊರಡಿಸಿದೆ. ತಾಂತ್ರಿಕ ಸಲಹಾ ಸಮಿತಿ ವಿವಿಧ ಕೋವಿಡ್ ಪರೀಕ್ಷೆಯ ದರ ಪರಿಷ್ಕರಿಸಲು ನಿರ್ಧರಿಸಿದೆ.
ಖಾಸಗಿ ಲ್ಯಾಬ್ಗಳಲ್ಲಿನ ಕೋವಿಡ್ ಟೆಸ್ಟ್ ಶುಲ್ಕ ಪರಿಷ್ಕರಿಸಿ ಸರ್ಕಾರ ಆದೇಶ ಶುಲ್ಕ ಪರಿಷ್ಕರಣೆ ಎಷ್ಟು?
- ಸ್ಯಾಂಪಲ್ ಸಂಗ್ರಹ ಹಾಗೂ ಸರ್ಕಾರಿ ಮತ್ತು ಖಾಸಗಿ ಸ್ಯಾಂಪಲ್ ಲ್ಯಾಬ್ಗಳಿಗೆ ಸಾಗಾಣೆ- ಪ್ರತಿ ಟೆಸ್ಟ್ಗೆ 400 ರೂ.
- ಸರ್ಕಾರ ಶಿಫಾರಸು ಮಾಡಿರುವ ಆರ್ಟಿ-ಪಿಸಿಆರ್ ಟೆಸ್ಟ್- ಪ್ರತಿ ಟೆಸ್ಟ್ಗೆ 800 ರೂ.
- ಖಾಸಗಿ ಲ್ಯಾಬ್ಗಳಿಗೆ ನೀಡಿದ ಸ್ಯಾಂಪಲ್‌ಗಳ ಆರ್ಇ-ಪಿಸಿಆರ್ ಟೆಸ್ಟ್ಗೆ 1,200 ರೂ.
- ಸ್ಯಾಂಪಲ್ಗಳನ್ನು ಮನೆಯಿಂದ ಸಂಗ್ರಹಿಸಿ, ಖಾಸಗಿಯಾಗಿ ಖಾಸಗಿ ಲ್ಯಾಬ್ಗೆ ನೀಡಿರುವ ಸ್ಯಾಂಪಲ್‌ಗಳ ಆರ್ಟಿ-ಪಿಸಿಆರ್ ಟೆಸ್ಟ್ಗೆೆ 1,600 ರೂ.
- ಖಾಸಗಿಯಾಗಿ ಖಾಸಗಿ ಲ್ಯಾಬ್ಗಳಿಗೆ ನೀಡಿದ ಸ್ಯಾಂಪಲ್ನ TRU-NAT ಟೆಸ್ಟ್ಗೆ 2,200 ರೂ.
- ಸ್ಯಾಂಪಲ್ಗಳನ್ನು ಮನೆಯಿಂದ ಸಂಗ್ರಹಿಸಿ, ಖಾಸಗಿಯಾಗಿ ಖಾಸಗಿ ಲ್ಯಾಬ್ಗೆ ನೀಡರುವ ಸ್ಯಾಂಪಲ್‌ಗಳ TRU-NAT ಟೆಸ್ಟ್ಗೆ 2,600 ರೂ.
- ಖಾಸಗಿಯಾಗಿ ಖಾಸಗಿ ಲ್ಯಾಬ್ಗಳಿಗೆ ನೀಡಿದ ಸ್ಯಾಂಪಲ್‌ಗಳ CB-NAAT ಟೆಸ್ಟ್ಗೆ 3,800 ರೂ.
- ಸ್ಯಾಂಪಲ್ಗಳನ್ನು ಮನೆಯಿಂದ ಸಂಗ್ರಹಿಸಿ, ಖಾಸಗಿಯಾಗಿ ಖಾಸಗಿ ಲ್ಯಾಬ್ಗೆ ನೀಡಿರುವ ಸ್ಯಾಂಪಲ್‌ಗಳ CB-NAAT ಟೆಸ್ಟ್ಗೆ 4,200 ರೂ.
- ಖಾಸಗಿಯಾಗಿ ಖಾಸಗಿ ಲ್ಯಾಬ್ಗಳಿಗೆ ನೀಡಿದ ಸ್ಯಾಂಪಲ್‌ಗಳ ರ್ಯಾಪಿಡ್ ಆ್ಯಂಟಿ ಬಾಡಿ ಟೆಸ್ಟ್ಗೆ 500 ರೂ.
- ಖಾಸಗಿಯಾಗಿ ಖಾಸಗಿ ಲ್ಯಾಬ್ಗಳಿಗೆ ನೀಡಿದ ಸ್ಯಾಂಪಲ್‌ಗಳ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ಗೆ 700 ರೂ.
ಹೀಗೆ ಸರ್ಕಾರ ಕೋವಿಡ್ ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡಿ ಆದೇಶ ಹೊರಡಿಸಿದೆ. ಇದರಿಂದ ಜನರಿಗೆ ಮತ್ತಷ್ಟು ಅನುಕೂಲವಾಗಲಿದೆ.