ಬೆಂಗಳೂರು:ಮಾಜಿ ಸಿಎಂ ಸಿದ್ದರಾಮಯ್ಯ ತೆರವುಗೊಳಿಸಿರುವ ಕಾವೇರಿ ನಿವಾಸಕ್ಕೆ ಹಾಲಿ ಸಿಎಂ ಬಿ. ಎಸ್. ಯಡಿಯೂರಪ್ಪ ಆಗಮಿಸುತ್ತಿರುವ ಹಿನ್ನೆಲೆ ಸಿಬ್ಬಂದಿ ಕಾವೇರಿಯನ್ನ ತ್ವರಿತಗತಿಯಲ್ಲಿ ಸಜ್ಜುಗೊಳಿಸಲಾಗುತ್ತಿದೆ.
ಸಿಎಂ ಆಗಮನಕ್ಕೆ ಸಜ್ಜುಗೊಳ್ಳುತ್ತಿದ್ದಾಳೆ ಕಾವೇರಿ! - ಬೆಂಗಳೂರು ಕಾವೇರಿ ನಿವಾಸ
ಸಿಎಂ ಬಿಎಸ್ವೈ ಆಗಮನ ಹಿನ್ನೆಲೆ ಕಾವೇರಿ ನಿವಾಸವನ್ನು ಸಜ್ಜುಗೊಳಿಸುವ ಕೆಲಸ ಇಂದಿನಿಂದ ಆರಂಭವಾಗಿದೆ. ಕಾವೇರಿ ನಿವಾಸದ ನವೀಕರಣ ಕೆಲಸ ಪ್ರಾರಂಭವಾಗಿದ್ದು, 30 ಮಂದಿ ಕೆಲಸಗಾರರು ಕಾರ್ಯಪ್ರವೃತ್ತರಾಗಿದ್ದಾರೆ. ಆದಷ್ಟು ಬೇಗ ಕೆಲಸ ಮುಗಿಸುವಂತೆ ಸರ್ಕಾರದಿಂದ ಸೂಚನೆ ಸಹ ಹೊರಡಿಸಲಾಗಿದೆ.

ಸದ್ಯ ಒಡೆದಿರುವ ಟೈಲ್ಸ್, ಬಿರುಕು ಬಿಟ್ಟ ಗೋಡೆಗಳಿಗೆ ಪ್ಯಾಚ್ ವರ್ಕ್ ಮಾಡಲಾಗುತ್ತಿದೆ. ಅನಂತರ ಸುಣ್ಣ, ಬಣ್ಣ ಬಳಿಯಲಿರುವ ಕೆಲಸಗಾರರು ಬಂದು ಕಟ್ಟಡವನ್ನು ಚಂದಕಾಣಿಸಲಿದ್ದಾರೆ. ಇದರಿಂದಾಗಿ ಸಿಎಂ ಬಿಎಸ್ ವೈ ಕಾವೇರಿಗೆ ಆಗಮಿಸುವುದು ಇನ್ನೂ 15 ದಿನ ಆಗಬಹುದು ಎನ್ನಲಾಗುತ್ತಿದೆ. ಕಾವೇರಿ ನಿವಾಸವನ್ನು ನವೀಕರಿಸಲು ಗುತ್ತಿಗೆ ಪಡೆದಿರುವ ಕೆಲಸಗಾರರೇ ಇನ್ನೂ ಹತ್ತು ದಿನಗಳ ಕೆಲಸ ಇದೆ ಎಂದು ಹೇಳುತ್ತಿದ್ದು, ಈ ಕೆಲಸ ಪೂರ್ಣಗೊಂಡ ನಂತರ ಒಳ್ಳೆ ದಿನ ನೋಡಿ ಸಿಎಂ ಕಾವೇರಿಗೆ ಆಗಮಿಸಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.