ಬೆಂಗಳೂರು :ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸರ್ಕಾರಿ ನಿವಾಸವನ್ನು ಹಂಚಿಕೆ ಮಾಡಲಾಗಿದೆ. ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ಅವರಿಂದ ರೇಸ್ ವ್ಯೂ ಕಾಟೇಲ್-1ಅನ್ನು ವಾಪಸ್ ಪಡೆದು ಆ ನಿವಾಸವನ್ನು ಮುಖ್ಯಮಂತ್ರಿಗಳಿಗೆ ಹಂಚಿಕೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಇಂದು ಆದೇಶ ಹೊರಡಿಸಿದೆ.
ಯಡಿಯೂರಪ್ಪ ಮಂತ್ರಿಮಂಡಲದಲ್ಲಿ ಉಪ ಮುಖ್ಯಮಂತ್ರಿ ಆಗಿದ್ದ ಅಶ್ವತ್ಥ ನಾರಾಯಣ್ ಅವರಿಗೆ ರೇಸ್ ವ್ಯೂ ಕಾಟೇಜ್-1 ಅನ್ನು ಹಂಚಿಕೆ ಮಾಡಲಾಗಿತ್ತು. ಕಳೆದ ಎರಡು ವರ್ಷಗಳಿಂದ ಅಶ್ವತ್ಥ ನಾರಾಯಣ್ ಅವರ ಅಧಿಕೃತ ನಿವಾಸವಾಗಿದ್ದ ರೇಸ್ ವ್ಯೂ ಕಾಟೇಜ್-1 ಇನ್ಮುಂದೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾಗಲಿದೆ.
20 ತಿಂಗಳ ಕಾಲ ಬಿಜೆಪಿ ಸರ್ಕಾರದ ಅವಧಿ ಇದೆ. ಅಲ್ಲಿಯವರೆಗೂ ಸಿಎಂ ಬಸವರಾಜ ಬೊಮ್ಮಾಯಿ ಈ ನಿವಾಸದಲ್ಲೇ ಇರಲಿದ್ದಾರೆ. ಕುಟುಂಬ ಸದಸ್ಯರಿಗೆ ಇಷ್ಟವಿಲ್ಲದೇ ಇದ್ದರೂ ಸಿಎಂ ಅನಿವಾರ್ಯವಾಗಿ ಸರ್ಕಾರಿ ನಿವಾಸ ಪಡೆದುಕೊಳ್ಳುತ್ತಿದ್ದಾರೆ.