ಕರ್ನಾಟಕ

karnataka

ETV Bharat / state

ಜೂ. 8 ರಿಂದ ಹೋಟೆಲ್ ಆರಂಭಕ್ಕೆ ಸರ್ಕಾರ ಸಮ್ಮತಿ: ಹೀಗಿವೆ ಮುಂಜಾಗ್ರತಾ ಕ್ರಮ!

ಜೂ. 8 ರಿಂದ ರಾಜ್ಯದಲ್ಲಿನ ಹೋಟೆಲ್​ಗಳನ್ನು ತೆರೆಯಲು ಸರ್ಕಾರ ಸಮ್ಮತಿ ನೀಡಿದ್ದು, ಕೆಲ ಮುಂಜಾಗ್ರತಾ ಕ್ರಮಗಳನ್ನು ವಿಧಿಸಿದೆ.

Government permission for hotel open
ಜೂ. 8 ರಿಂದ ಹೋಟೆಲ್ ಪ್ರಾರಂಭಕ್ಕೆ ಸರ್ಕಾರ ಸಮ್ಮತಿ

By

Published : Jun 7, 2020, 12:11 AM IST

ಬೆಂಗಳೂರು: ಅನ್​ಲಾಕ್ 2ನೇ ಹಂತದಲ್ಲಿ ಜೂ. 8 ರಿಂದ ಹೋಟೆಲ್​ಗಳನ್ನು ತೆರೆಯಲು ರಾಜ್ಯ ಸರ್ಕಾರ ಸಮ್ಮತಿ ನೀಡಿದ್ದು, ಕೆಲ ಮುಂಜಾಗ್ರತಾ ಕ್ರಮಗಳನ್ನು ವಿಧಿಸಿದೆ.

ಹೋಟೆಲ್ ತೆರೆಯುವುದಕ್ಕೆ ಪಾಲಿಸಬೇಕಾದ ಮುಂಜಾಗೃತಾ ಕ್ರಮಗಳು ಹೀಗಿವೆ:

  • ಹೋಟೆಲ್ ಒಳಗೆ 6 ಅಡಿ ಅಂತರ ಕಾಪಾಡಬೇಕು.
  • ಮಾಸ್ಕ್ ಧರಿಸುವುದು ಕಡ್ಡಾಯ.
  • ಕೈ ತೊಳೆಯುವುದಕ್ಕೆ ಸಾಬೂನು ಹಾಗೂ ಸ್ಯಾನಿಟೈಸರ್ ಇರಬೇಕು.
  • ಶೇ. 50 ಆಸನದ ವ್ಯವಸ್ಥೆ ಮೀರಬಾರದು.
  • ಕೈ ತೊಳೆದ ಮೇಲೆ ಟಿಶ್ಯು ಬಳಕೆ ಮಾಡಬೇಕು, ಬಟ್ಟೆಯ ಟವೆಲ್ ಬೇಡ
  • ವಾಲೆಟ್ ಪಾರ್ಕಿಂಗ್ ಸಿಬ್ಬಂದಿ ಮಾಸ್ಕ್ ಧರಿಸಿ, ಸ್ಟ್ರೇರಿಂಗ್ ಗೇರ್​ಗಳನ್ನು ರೋಗ ನಿರೋಧಕ ದ್ರಾವದಿಂದ ಸ್ವಚ್ಛಗೊಳಿಸಬೇಕು.
  • ಏಸಿ ಬಳಕೆ 24 ಡಿಗ್ರಿಯಿಂದ 30 ಡಿಗ್ರಿ ಇರಬೇಕು ಹಾಗೂ ನೈಸರ್ಗಿಕ ಗಾಳಿಗೆ ಹೆಚ್ಚು ಒತ್ತು ನೀಡಬೇಕು.
  • ಸಮಯಕ್ಕೆ ಸರಿಯಾಗಿ ಹೋಟೆಲ್ ಡೋರ್​ ಹಾಗೂ ಶೌಚಾಲಯಗಳನ್ನು ಶುಚಿಗೊಳಿಸಬೇಕು.
    ಹೋಟೆಲ್ ತೆರೆಯುವುದಕ್ಕೆ ಪಾಲಿಸಬೇಕಾದ ಮುಂಜಾಗೃತಾ ಕ್ರಮಗಳು

ಈ ಕ್ರಮಗಳನ್ನು ಹೊರತುಪಡಿಸಿ ಎಂದಿನಂತೆ ಮುಂಜಾಗೃತಾ ಕ್ರಮಗಳನ್ನು ಹೋಟೆಲ್ ಸಿಬ್ಬಂದಿ ಹಾಗೂ ಗ್ರಾಹಕರು ವಹಿಸಬೇಕಾಗಿದೆ. ಅಲ್ಲದೇ ಕೇಂದ್ರ ಸರ್ಕಾರದ ಆರೋಗ್ಯ ಸೇತು ಆ್ಯಪ್​ ಹಾಗೂ ಲಿಫ್ಟ್ ಬದಲು ಮೆಟ್ಟಿಲನ್ನು ಬಳಸಬೇಕೆಂದು ಸೂಚಿಸಲಾಗಿದೆ. ಒಂದು ವೇಳೆ ಹೋಟೆಲ್​ಗಳಲ್ಲಿ ಯಾರಿಗಾದರೂ ರೋಗದ ಲಕ್ಷಣಗಳು ಕಂಡು ಬಂದರೆ ಕೂಡಲೇ ಆರೋಗ್ಯ ಸಿಬ್ಬಂದಿಗೆ ಮಾಹಿತಿ ನೀಡಬೇಕು ಎಂದು ಸರ್ಕಾರ ನೀಡಿರುವ ಕ್ರಮ ಪಟ್ಟಿಯಲ್ಲಿ ಸ್ಪಷ್ಟಪಡಿಸಿದೆ.

ABOUT THE AUTHOR

...view details