ಬೆಂಗಳೂರು :ರಾಜ್ಯ ಸರ್ಕಾರ ಹತ್ತು ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಇಂದು ಆದೇಶ ಹೊರಡಿಸಿದೆ. ವರ್ಗಾವಣೆಗೊಂಡ ಅಧಿಕಾರಿಗಳ ವಿವರ ಇಂತಿದೆ.
- ಮಹಮ್ಮದ್ ಮೊಹ್ಸಿನ್- ಪ್ರಧಾನ ಕಾರ್ಯದರ್ಶಿ, ಕಾರ್ಮಿಕ ಇಲಾಖೆ.
- ಟಿ.ಎಚ್.ಎಂ.ಕುಮಾರ್ - ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ.
- ಆರ್.ಸ್ನೇಹಲ್ - ನಿರ್ದೇಶಕಿ(ಐಟಿ), ಬಿಎಂಟಿಸಿ.
- ಪ್ರಭುಲಿಂಗ ಕವಲಿಕಟ್ಟಿ- ಆಯುಕ್ತರು, ಪಶುಸಂಗೋಪನಾ ಮತ್ತು ಪಶುವೈದ್ಯಕೀಯ ಸೇವೆ.
- ಜಿ.ಲಕ್ಷ್ಮೀಕಾಂತ್ ರೆಡ್ಡಿ- ಜಂಟಿ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ.
- ಪಂಡ್ವೆ ರಾಹುಲ್ ತುಕರಾಮ್ - ಕಾರ್ಯ ನಿರ್ವಾಹಣಾಧಿಕಾರಿ, ರಾಯಚೂರು ಜಿಲ್ಲೆ.
- ಎಸ್.ಜೆ.ಸೋಮಶೇಖರ್- ಕಾರ್ಯ ನಿರ್ವಾಹಣಾಧಿಕಾರಿ, ಚಿತ್ರದುರ್ಗ ಜಿಲ್ಲೆ.
- ಎಸ್.ರಂಗಪ್ಪ- ನಿರ್ದೇಶಕರು, ಕಂದಾಯ ಇಲಾಖೆಯ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ವಿಭಾಗ.
- ಡಾ.ಎಸ್. ಆಕಾಶ್ - ಹೆಚ್ಚುವರಿ ಆಯುಕ್ತರು, ಕಲಬುರಗಿ ಜಿಲ್ಲೆಯ ಸಾರ್ವಜನಿಕ ಸೂಚನೆಗಳು ವಿಭಾಗ.
- ಅನ್ಮೂಲ್ ಜೈನ್- ನೋಂದಣಿ (ವಿಜೆಲೆನ್ಸಿ) ಡಿಐಜಿ.