ಬೆಂಗಳೂರು: ವಿವಿಧ ಅಕಾಡೆಮಿಗಳ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿಗೆ ಸಂಬಂಧಪಟ್ಟಂತೆ ಖಾಲಿಯಿರುವ ಕೆಲ ಅಕಾಡೆಮಿಗಳಿಗೆ ಹೊಸ ಅಧ್ಯಕ್ಷರನ್ನು ಹಾಗೂ ಹಲವು ಅಕಾಡೆಮಿಗಳಲ್ಲಿ ಮತ್ತು ರಂಗಸಮಾಜದಲ್ಲಿ ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವ ಕೆಲವು ಸದಸ್ಯರುಗಳನ್ನು ಕೈಬಿಟ್ಟು ಹೊಸ ಸದಸ್ಯರುಗಳನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.
ಕರ್ನಾಟಕ ಬಯಲಾಟ ಅಕಾಡೆಮಿ, ಬಾಗಲಕೋಟೆಗೆ ಅಜಿತ್ ನಾಗಪ್ಪ ಬಸಾಪುರ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಸದಸ್ಯರಾಗಿ ತಿಪ್ಪೇಸ್ವಾಮಿ, ದತ್ತಾತ್ರೇಯ ಅರಳಿಕಟ್ಟಿಯನ್ನು ನೇಮಕ ಮಾಡಲಾಗಿದೆ. ಬೆಂಗಳೂರಿನ ಲಲಿತ ಕಲಾ ಅಕಾಡೆಮಿಗೆ ಹೊಸ ಸದಸ್ಯರಾಗಿ ರಾಮಗೌತಮ್, ಗುರುಸಿದ್ಧಪ್ಪ ಮಲ್ಲಾಪುರ, ಕಮಲ್ ಅಹಮ್ಮದ್, ಶಿಲ್ಪಾ ಕಡಕಭಾವಿಯವರನ್ನು ನೇಮಿಸಲಾಗಿದೆ. ಮಂಗಳೂರಿನ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಓಂಗಣೇಶ್, ರಮೇಶ್ ಪುರುಸಯ್ಯ ಮೇಸ್ತರನ್ನು ನೇಮಿಸಲಾಗಿದೆ.
ಬೆಂಗಳೂರಿನ ಕರ್ನಾಟಕ ನಾಟಕ ಅಕಾಡೆಮಿಯ ಹೊಸ ಸದಸ್ಯರಾಗಿ ಶ್ರೀಧರ ಹೆಗಡೆ, ಪ್ರದೀಪಚಂದ್ರ ಕುತ್ಪಾಡಿ, ಆರತಿದೇವ ಶಿಖಾಮಣಿ, ಜೀವನ್ ಕುಮಾರ್, ವಿಜಯಕುಮಾರ್ ಮಾಲೂರು, ಗಣಪತಿ ಹಿತ್ಲಕ್ಕೆ, ಎಂ.ಎನ್. ಕಿರಣಕುಮಾರ್ ಹಾಗೂ ಪುಸನ್ನಕುಮಾರ್‌ನ್ನು ನೇಮಿಸಲಾಗಿದೆ. ಕರ್ನಾಟಕ ಜಾನಪದ ಅಕಾಡೆಮಿಯ ಹೊಸ ಸದಸ್ಯರಾಗಿ ಡಾ.ಅಪ್ಪಾಜಿ ಹಾಗೂ ಬಸವರಾಜ ಶಿವಪ್ಪ, ಶಿವೇಶ್ವರ ಗೌಡ, ಸಣ್ಣ ವೀರಪ್ಪ ಹಾಲಪ್ಪರನ್ನು ನೇಮಿಸಲಾಗಿದೆ.