ಕರ್ನಾಟಕ

karnataka

ETV Bharat / state

ಕಡಲೆಕಾಳು, ತೊಗರಿ ಖರೀದಿಯ ಪ್ರಮಾಣವನ್ನ ಹೆಚ್ಚಿಸಿ ಸರ್ಕಾರ ಆದೇಶ..

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರಾಜ್ಯ ಸರ್ಕಾರ ರೈತರಿಂದ ಕಡಲೆಕಾಳು ಮತ್ತು ತೊಗರಿ ಖರೀದಿ ಪ್ರಮಾಣವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ.

vidhanasoudha
ವಿಧಾನಸೌಧ

By

Published : May 1, 2020, 10:32 AM IST

ಬೆಂಗಳೂರು :ರೈತರಿಂದ ಕಡಲೆಕಾಳು ಮತ್ತು ತೊಗರಿ ಖರೀದಿಸುವ ಪ್ರಮಾಣವನ್ನು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯ‌ಡಿ ಕಡಲೆಕಾಳು ಖರೀದಿಸಲು ಅನುಮತಿ ನೀಡಿದ್ದ ಆದೇಶದಂತೆ ಪ್ರತಿ ಎಕರೆಗೆ ಪ್ರತಿ ರೈತರಿಂದ 3 ಕ್ವಿಂಟಾಲ್‌ನಂತೆ ಗರಿಷ್ಠ 10 ಕ್ವಿಂಟಾಲ್ ಕಡಲೆ ಖರೀದಿ‌ ಪ್ರಮಾಣವನ್ನು ಈಗ ಮಾರ್ಪಡಿಸಿ, ಒಟ್ಟು ಪ್ರತಿ ಎಕರೆಗೆ 5 ಕ್ವಿಂಟಾಲ್ ಹಾಗೂ ಪ್ರತಿ ರೈತನಿಂದ 15 ಕ್ವಿಂಟಾಲ್ ಕಡಲೆಕಾಳು ಖರೀದಿಸಲು ತೀರ್ಮಾನಿಸಲಾಗಿದೆ.

ಆದೇಶ ಪ್ರತಿ

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯ‌ ಬೆಲೆ ಸ್ಥಿರೀಕರಣ ನಿಧಿಯಡಿ ಕನಿಷ್ಠ ಬೆಂಬಲ ಯೋಜನೆಯಡಿ ನೋಂದಣಿಯಾದ ರೈತರಿಂದ ಖರೀದಿಸುವ ತೊಗರಿ ಪ್ರಮಾಣವನ್ನು ಹೆಚ್ಚಿಸಿ ಸರ್ಕಾರ ಆದೇಶಿಸಿದೆ. ಅದರಂತೆ ಪ್ರತಿ ಎಕರೆಗೆ ಏಳು ಕ್ವಿಂಟಾಲ್ ಮತ್ತು ಪ್ರತಿ ರೈತರಿಂದ ಗರಿಷ್ಟ 20 ಕ್ವಿಂಟಾಲ್ ತೊಗರಿ ಖರೀದಿಗೆ ಸರ್ಕಾರ ನಿರ್ಧರಿಸಿದೆ.

ಈ ಮುಂಚೆ ರೈತರಿಂದ ಪ್ರತಿ ಎಕರೆಗೆ ಗರಿಷ್ಠ 5 ಕ್ವಿಂಟಾಲ್ ಹಾಗೂ ಪ್ರತಿ ರೈತನಿಂದ ಗರಿಷ್ಠ 10 ಕ್ವಿಂಟಾಲ್ ತೊಗರಿ ಖರೀದಿಗೆ ಅನುಮತಿ ನೀಡಲಾಗಿತ್ತು. ಇದೀಗ ಆ ಪ್ರಮಾಣವನ್ನು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.

ABOUT THE AUTHOR

...view details