ಕರ್ನಾಟಕ

karnataka

ETV Bharat / state

ಮುಷ್ಕರ 'ಕೈಗಾರಿಕಾ ವಿವಾದ ಕಾಯ್ದೆ'ಯ ವಿರುದ್ಧವಾಗಿದೆ: ಸಾರಿಗೆ ನೌಕರರ ಪ್ರತಿಭಟನೆ ನಿಷೇಧಿಸಿ ಸರ್ಕಾರದ ಆದೇಶ - industrial disputes act

ಕೈಗಾರಿಕಾ ವಿವಾದ ಕಾಯ್ದೆ 1947 ರ ಕಲಂ 12 ಅಡಿಯ ನಿಯಮಗಳನ್ನು ಉಲ್ಲಂಘಿಸಿ ಸಾರಿಗೆ ನೌಕರರು ಮುಷ್ಕರ ಹೂಡಿದ್ದಾರೆ ಎಂದು ಹೇಳಿ ಸರ್ಕಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದಿಂದ ನಡೆಯುತ್ತಿರುವ ಮುಷ್ಕರ ನಿಷೇಧಿಸಿ ಆದೇಶ ಹೊರಡಿಸಿದೆ.

Government order  banning strike of transport employees
ಸಾರಿಗೆ ನೌಕರರ ಮುಷ್ಕರ ನಿಷೇಧ

By

Published : Apr 10, 2021, 6:49 AM IST

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ, ಗಾಂಧಿನಗರ ಈ ಸಂಘದಿಂದ ನಡೆಯುತ್ತಿರುವ ಮುಷ್ಕರ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ.

ಸಾರಿಗೆ ನೌಕರರ ಮುಷ್ಕರ ನಿಷೇಧ
ಸಾರಿಗೆ ನೌಕರರ ಮುಷ್ಕರ ನಿಷೇಧ

ಕೈಗಾರಿಕಾ ವಿವಾದ ಕಾಯ್ದೆ 1947 ರ ಕಲಂ 12 ಅಡಿಯಲ್ಲಿ ಕಾರ್ಮಿಕ ಸಂಘಟನೆ ಹಾಗೂ ನಾಲ್ಕು ಸಾರಿಗೆ ನಿಗಮಗಳ ನಡುವೆ ಉದ್ಭವಿಸಿರುವ ಕೈಗಾರಿಕಾ ವಿವಾದದ ಬಗ್ಗೆ ಸಂಧಾನ ಪ್ರಕ್ರಿಯೆ ಪ್ರಾರಂಭಿಸಿದ್ದರೂ, ಸಾರಿಗೆ ನೌಕರರು 06-04-21 ರಿಂದ ಮುಷ್ಕರ ಹೂಡಿದ್ದಾರೆ. ಆದರೆ‌' ಬಿಎಂಟಿಸಿ, ಕೆಎಸ್​ಆರ್‌ಟಿಸಿ ಈಶಾನ್ಯ, ವಾಯುವ್ಯ ಸಾರಿಗೆ ಸಂಸ್ಥೆಗಳು ಕೈಗಾರಿಕಾ ವಿವಾದ ಕಾಯ್ದೆಯಡಿ ' ಸಾರ್ವಜನಿಕ ಉಪಯುಕ್ತ ಸೇವೆ' ಎಂದು ಅಧಿಸೂಚನೆ ಹೊರಡಿಸಲಾಗಿದೆ.

ಕೈಗಾರಿಕಾ ವಿವಾದ ಸಂಧಾನ ಪ್ರಕ್ರಿಯೆ ಬಾಕಿ ಇರುವಾಗ ಕಾರ್ಮಿಕರು ಯಾವುದೇ ಮುಷ್ಕರ ಹೂಡಬಾರದೆಂಬ ನಿಯಮ ಇರುತ್ತದೆ. ಹೀಗಾಗಿ ಸಾರ್ವಜನಿಕರಿಗೆ ಅನಾನುಕೂಲತೆ ಹಾಗೂ ಕೈಗಾರಿಕಾ ವಿವಾದ ಕಾಯ್ದೆಯ ವಿರುದ್ಧವಾಗಿರುವ ಈ ಸಾರಿಗೆ ನೌಕರರ ಮುಷ್ಕರವನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿದೆ ಎಂದು ಕಾರ್ಮಿಕ ಇಲಾಖೆಯ ಸರ್ಕಾರದ ಉಪಕಾರ್ಯದರ್ಶಿ ಸಂಧ್ಯಾ ಎಲ್‌ ನಾಯಕ್, ಆದೇಶ ಹೊರಡಿಸಿದ್ದಾರೆ. ಅಲ್ಲದೆ ಈ ವಿವಾದವನ್ನು ನ್ಯಾಯ ನಿರ್ಣಯಕ್ಕೆ ಔದ್ಯಮಿಕ ನ್ಯಾಯಾಧೀಕರಣಕ್ಕೆ ಕಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಭಾರತದ ಅನುಮತಿಯಿಲ್ಲದೇ ಲಕ್ಷದ್ವೀಪ ಕಡಲಲ್ಲಿ ಸಂಚರಿಸಿದ ಅಮೆರಿಕದ ಯುದ್ಧ ನೌಕೆ!

ABOUT THE AUTHOR

...view details