ಕರ್ನಾಟಕ

karnataka

ETV Bharat / state

ಕರ್ನಾಟಕ ಬಂದ್​​: ಎಂದಿನಂತೆ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಕಚೇರಿಗಳು - Karnataka Bandh from Farmers

ರಾಜ್ಯಾದ್ಯಂತ ಬಂದ್ ಹಿನ್ನೆಲೆ ​ ಪ್ರತಿಭಟನೆಗಳು ನಡೆಯುತ್ತಿದ್ದರೂ ವಿಧಾನಸೌಧ ಸೇರಿದಂತೆ ಪ್ರಮುಖ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.

Government offices functions as usual amid Karnataka Bandh
ಎಂದಿನಂತೆ ತೆರೆದಿರುವ ವಿಧಾನಸೌಧದ ಕಚೇರಿಗಳು

By

Published : Sep 28, 2020, 2:24 PM IST

ಬೆಂಗಳೂರು:ರಾಜ್ಯಾದ್ಯಂತ ಬಂದ್​​ ಹಿನ್ನೆಲೆ ಪ್ರತಿಭಟನೆ ನಡೆಯುತ್ತಿದ್ದರೂ ಸರ್ಕಾರಿ ಕಚೇರಿಗಳು ಮಾತ್ರ ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.

ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧ, ವಿಕಾಸಸೌಧ ಮತ್ತು ಎಂಎಸ್ ಬಿಲ್ಡಿಂಗ್​ನಲ್ಲಿ ಸರ್ಕಾರಿ ನೌಕರರು ಎಂದಿನಂತೆ ಕಚೇರಿಗಳಿಗೆ ಬಂದು ಕಾರ್ಯನಿರ್ವಹಿಸುತ್ತಿದ್ದಾರೆ. ಎಂದಿನಂತೆ ನಿಗದಿತ ಸಮಯಕ್ಕೆ ಕಚೇರಿಗಳಿಗೆ ನೌಕರರು ಮತ್ತು ಅಧಿಕಾರಿಗಳು ಆಗಮಿಸಿದ್ದಾರೆ.

ಎಂದಿನಂತೆ ತೆರೆದಿರುವ ವಿಧಾನಸೌಧದ ಕಚೇರಿಗಳು

ಸಾರಿಗೆ ವ್ಯವಸ್ಥೆಯಲ್ಲಿ ಸ್ವಲ್ಪ ವ್ಯತ್ಯಯ ಆಗಿರುವ ಕಾರಣಕ್ಕೆ ಸಿಬ್ಬಂದಿ ಹಾಜರಾತಿಯಲ್ಲಿ ಕೊಂಚ ಇಳಿಕೆ ಕಂಡಿದೆ. ಆದರೆ ತಡವಾದರೂ ಸಿಬ್ಬಂದಿ ಕಚೇರಿಗೆ ಆಗಮಿಸಿದ್ದಾರೆ. ಜೊತೆಗೆ ನಗರದಲ್ಲಿ ಮೆಟ್ರೋ, ಆಟೋ, ಬಿಎಂಟಿಸಿ ಬಸ್ ಸಂಚಾರ ಎಂದಿನಂತೆ ಇದ್ದಿದ್ದರಿಂದ ಸಿಬ್ಬಂದಿಗೆ ಕಚೇರಿಗೆ ಆಗಮಿಸಲು ಯಾವುದೇ ತೊಡಕಾಗಿಲ್ಲ.

ABOUT THE AUTHOR

...view details