ಕರ್ನಾಟಕ

karnataka

ETV Bharat / state

ನಷ್ಟ ವಸೂಲಿ ಕ್ಲೇಮ್ ಕಮಿಷನರ್​​ಗಳಿಗೆ ಮೂಲಸೌಕರ್ಯ ಒದಗಿಸದ ಸರ್ಕಾರ: ಹೈಕೋರ್ಟ್ ಅಸಮಾಧಾನ - High Court outraged against government

ಮಹದಾಯಿ ಬಂದ್ ಪ್ರಕರಣದಲ್ಲಿನ ನಷ್ಟ ಪ್ರಮಾಣ ಮತ್ತು ಡಿ.ಕೆ. ಶಿವಕುಮಾರ್ ಸಂಬಂಧ ನಡೆದ ಪ್ರತಿಭಟನೆಯ ನಷ್ಟ ಪ್ರಮಾಣ ಅಂದಾಜಿಸಲು ಬರುವ ನಿವೃತ್ತ ನ್ಯಾಯಾಧೀಶರಿಗೆ ಮೂಲ ಸೌಕರ್ಯ ಕಲ್ಪಿಸಲು ಹೈಕೋರ್ಟ್ ಆದೇಶಿಸಿತ್ತು. ಆದ್ರೆ ಸರ್ಕಾರ ಇವರಿಗೆ ಮೂಲಸೌಕರ್ಯ ಒದಗಿಸಿಲ್ಲ. ಹೀಗಾಗಿ ಹೈಕೋರ್ಟ್​ ಅಸಮಾಧಾನ ಹೊರಹಾಕಿದೆ.

High Court
ಹೈಕೋರ್ಟ್

By

Published : Mar 21, 2022, 10:46 PM IST

ಬೆಂಗಳೂರು: ಕಳೆದ ವರ್ಷ ರಾಜ್ಯದಲ್ಲಿ ನಡೆದ ವಿವಿಧ ಪ್ರತಿಭಟನೆಗಳ ವೇಳೆ ಉಂಟಾದ ಸಾರ್ವಜನಿಕ ಆಸ್ತಿ ನಷ್ಟ ಅಂದಾಜಿಸಲು ಹಾಗೂ ವಸೂಲಿ ಮಾಡಲು ನೇಮಕಗೊಂಡಿರುವ ಇಬ್ಬರು ನಿವೃತ್ತ ಜಿಲ್ಲಾ ನ್ಯಾಯಾಧೀಶರಿಗೆ (ಕ್ಲೇಮು ಕಮೀಷನರ್ ಗಳಿಗೆ) ಮೂಲ ಸೌಕರ್ಯ ಕಲ್ಪಿಸಿದ ರಾಜ್ಯ ಸರ್ಕಾರದ ನಡೆಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಮಹಾದಾಯಿ ನ್ಯಾಯಾಧೀಕರಣದ ತೀರ್ಪು ವಿರೋಧಿಸಿ 2018ರಲ್ಲಿ ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಬಂದ್​ಗೆ ಕರೆ ನೀಡಿದ್ದರು. ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಂಧನ ವಿರೋಧಿಸಿ 2019ರಲ್ಲಿ ರಾಮನಗರ, ಕನಕಪುರದಲ್ಲಿ ನಡೆದ ಬಂದ್​ನಿಂದ ಆಗಿರುವ ಸಾರ್ವಜನಿಕ ಆಸ್ತಿ ನಷ್ಟ ವಸೂಲಿ ಕೋರಿ ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಇದನ್ನೂ ಓದಿ:ಕ್ರೀಡಾ ಇಲಾಖೆ ಪುನಶ್ಚೇತನಕ್ಕೆ ಸಾವಿರ ಕೋಟಿ ಅನುದಾನಕ್ಕೆ ಪ್ರಸ್ತಾವನೆ: ಸಚಿವ ನಾರಾಯಣ ಗೌಡ

ವಿಚಾರಣೆ ವೇಳೆ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಮಹಾದಾಯಿ ಬಂದ್ ಪ್ರಕರಣದಲ್ಲಿನ ನಷ್ಟ ಪ್ರಮಾಣ ಅಂದಾಜಿಸಲು ನಿವೃತ್ತ ಜಿಲ್ಲಾ ನ್ಯಾಯಾಧೀಶ ಮಹ್ಮದ್ ಗೌಸ್ ಎಂ. ಪಟೇಲ್ ಹಾಗೂ ಡಿ.ಕೆ. ಶಿವಕುಮಾರ್ ಸಂಬಂಧ ನಡೆದ ಪ್ರತಿಭಟನೆಯ ನಷ್ಟ ಪ್ರಮಾಣ ಅಂದಾಜಿಸಲು ನಿವೃತ್ತ ಜಿಲ್ಲಾ ನ್ಯಾಯಾಧೀಶ ಸಿ.ಆರ್ ಬೆನಕನಹಳ್ಳಿ ಅವರಿಗೆ ಮೂಲ ಸೌಕರ್ಯ ಕಲ್ಪಿಸಲು ಹೈಕೋರ್ಟ್ 2020ರ ಫೆ.25ರಂದು ಆದೇಶಿಸಿತ್ತು. ಆದರೆ, ಈ ಆದೇಶ ಪಾಲನೆಗೆ ಸಂಬಂಧಿಸಿದಂತೆ ಸರ್ಕಾರ ಮಾಹಿತಿಯನ್ನೇ ನೀಡಿಲ್ಲ ಎಂದಿತು. ಅಲ್ಲದೇ, ಸರ್ಕಾರದ ಪ್ರಮಾಣಪತ್ರವನ್ನು ತಿರಸ್ಕರಿಸಿದ ಪೀಠ, ಏ.14ರೊಳಗೆ ಸಮರ್ಪಕ ಪ್ರಮಾಣಪತ್ರ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.

For All Latest Updates

TAGGED:

ABOUT THE AUTHOR

...view details