ಕರ್ನಾಟಕ

karnataka

ETV Bharat / state

ಕೊರೊನಾ ಏಟಿಗೆ ಬರಿದಾದ ರಾಜ್ಯದ ಬೊಕ್ಕಸ: 8 ಸಾವಿರ ಕೋಟಿ ರೂ ಸಾಲ ಪಡೆಯಲು ನಿರ್ಧಾರ

ಈ ಬಾರಿ ದೊಡ್ಡ ಪ್ರಮಾಣದಲ್ಲಿ ಆದಾಯ ಕೊರತೆಯ ಆತಂಕ ಉಂಟಾಗಲಿದ್ದು, ಈ ಮುಂಚೆ ಅಂದಾಜಿಸಲಾಗಿದ್ದ 71,332 ಕೋಟಿ ರೂ‌.ಗಿಂತಲೂ ಹೆಚ್ಚಿನ ಸಾಲವನ್ನು ಮುಕ್ತ ಮಾರುಕಟ್ಟೆಯಿಂದ ಎತ್ತುವಳಿ ಮಾಡುವ ಅನಿವಾರ್ಯತೆ ಬರಬಹುದು ಎಂದು ರಾಜ್ಯ ಆರ್ಥಿಕ ಇಲಾಖೆ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

By

Published : Jul 12, 2021, 2:58 PM IST

government
ಆರ್ ಬಿಐ ಮೂಲಕ ಸಾಲ ಎತ್ತುವಳಿ ಪ್ರಕ್ರಿಯೆ ಆರಂಭಿಸಿದ ಸರ್ಕಾರ

ಬೆಂಗಳೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯ ಮತ್ತೆ ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿದೆ. ಸಾಲವೇ ರಾಜ್ಯವನ್ನು ಆರ್ಥಿಕ ವಿಪತ್ತಿನಿಂದ ಎತ್ತಬಲ್ಲ ಏಕೈಕ ಪ್ರಮುಖ ಮಾರ್ಗ. 2021-22ನೇ ಸಾಲಿನ ಆರ್ಥಿಕ ಕೊರತೆ ನೀಗಿಸಲು ರಾಜ್ಯ ಸರ್ಕಾರ ಸಾಲ ಎತ್ತುವಳಿ ಮಾಡುವ ಪ್ರಕ್ರಿಯೆ ಪ್ರಾರಂಭಿಸಿದೆ.

ಎರಡನೇ ಅಲೆ, ಲಾಕ್‌ಡೌನ್‌ನಿಂದ ಉಂಟಾಗಿರುವ ಆರ್ಥಿಕ ಸಂಕಷ್ಟ ರಾಜ್ಯವನ್ನು ದೀರ್ಘಕಾಲೀನ ಕಾಡಲಿದೆ. ಎಲ್ಲಾ ಆರ್ಥಿಕ ಮೂಲಗಳು ಬರಿದಾಗಿದ್ದು, ಬೊಕ್ಕಸ ಖಾಲಿ ಖಾಲಿಯಾಗಿದೆ. ರಾಜ್ಯದ ಆರ್ಥಿಕತೆ ಮೇಲೆ ಕೊರೊನಾಘಾತ ಭಾರೀ ಪೆಟ್ಟು ನೀಡಿದೆ. ಅದೆಷ್ಟು ಪರ್ಯಾಯ ಮಾರ್ಗದಿಂದ ಬೊಕ್ಕಸ ತುಂಬಿಸುವ ಕೆಲಸ ಮಾಡಿದರೂ, ನಿರೀಕ್ಷಿತ ಫಲಿತಾಂಶ ಸಿಗಲು ಅಸಾಧ್ಯ. ಹೀಗಾಗಿ ಹದಗೆಟ್ಟ ರಾಜ್ಯದ ಆರ್ಥಿಕತೆಯನ್ನು ಸರಿದೂಗಿಸಲು ಇರುವ ಏಕೈಕ ಪ್ರಮುಖ ಮಾರ್ಗ ಸಾಲ.

2021-22 ಸಾಲಿನಲ್ಲಿ 71,332 ಕೋಟಿ ರೂ. ಸಾಲ ಮಾಡುವುದಾಗಿ ಸರ್ಕಾರ ಈಗಾಗಲೇ ಘೋಷಿಸಿದೆ. ಆದರೆ ಇದೀಗ ಕೊರೊನಾ ಎರಡನೇ ಅಲೆ ಸೃಷ್ಟಿಸಿದ ಅನಾಹುತ ಹಾಗೂ ಲಾಕ್‌ಡೌನ್‌ನಿಂದ ರಾಜ್ಯದ ಬೊಕ್ಕಸ ಸಂಪೂರ್ಣ ಬುಡಮೇಲಾಗಲಿದೆ. ಹೀಗಾಗಿ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಆದಾಯ ಕೊರತೆಯ ಆತಂಕ ಉಂಟಾಗಲಿದ್ದು, ಈ ಮುಂಚೆ ಅಂದಾಜಿಸಲಾಗಿದ್ದ 71,332 ಕೋಟಿ ರೂ‌.ಗಿಂತಲೂ ಹೆಚ್ಚಿನ ಸಾಲವನ್ನು ಮುಕ್ತ ಮಾರುಕಟ್ಟೆಯಿಂದ ಎತ್ತುವಳಿ ಮಾಡುವ ಅನಿವಾರ್ಯತೆ ಬರಬಹುದು ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಸಾಲ ಎತ್ತುವಳಿಗಾಗಿ ಆರ್​ಬಿಐಗೆ ಮನವಿ:

ಮೊದಲ ತ್ರೈಮಾಸಿಕದಲ್ಲಿ ಆರ್‌ಬಿಐ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಯಾವುದೇ ಸಾಲ ಎತ್ತುವಳಿ ಮಾಡದ ರಾಜ್ಯ ಸರ್ಕಾರ ಇದೀಗ ಜುಲೈ-ಸೆಪ್ಟೆಂಬರ್ ವರೆಗಿನ ಎರಡನೇ ತ್ರೈಮಾಸಿಕದಲ್ಲಿ ಸಾಲ ಎತ್ತುವಳಿ ಮಾಡಲು ಮುಂದಾಗಿದೆ.

ಇದನ್ನೂ ಓದಿ:ಚೆಂಡು ಉಮಾಪತಿ ಅಂಗಳದಲ್ಲಿದೆ, ಗೋಲು​ ಹೊಡೆಯುವುದು ಅವರಿಗೆ ಬಿಟ್ಟಿದ್ದು: 25 ಕೋಟಿ ವಂಚನೆ ಕೇಸ್​ಗೆ ದಚ್ಚು ಕಿಡಿ

ರಾಜ್ಯ ಸರ್ಕಾರ ರಾಜ್ಯ ಅಭಿವೃದ್ಧಿ ಸಾಲ (ಎಸ್ ಡಿಎಲ್)ವನ್ನು ಪಡೆಯುವುದಾಗಿ ಈಗಾಗಲೇ ಆರ್‌ಬಿಐಗೆ ಸೂಚನೆ ನೀಡಿದೆ. ಆಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲಿ ಸಾಲ ಎತ್ತುವಳಿ ಮಾಡುವುದಾಗಿ ರಾಜ್ಯ ಸರ್ಕಾರ ಆರ್ ಬಿಐಗೆ ತಿಳಿಸಿದೆ. ಆರ್ಥಿಕ ಸಂಕಷ್ಟ ತೀವ್ರವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮುಕ್ತ ಮಾರುಕಟ್ಟೆಯಲ್ಲಿ ಸಾಲ ಎತ್ತುವಳಿ ಮಾಡುವುದು ಅನಿವಾರ್ಯವಾಗಿದೆ.

ಅತ್ತ ಎರಡನೇ ಅಲೆ ತಣ್ಣಗಾಗುತ್ತಿದ್ದ ಹಾಗೇ, ಇತ್ತ ಲಾಕ್‌ಡೌನ್ ಪರಿಣಾಮ ರಾಜ್ಯದ ಹಣಕಾಸು ನಿರ್ವಹಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ಶುರುವಾಗುತ್ತಿದ್ದ ಹಾಗೇ ರಾಜ್ಯ ಸರ್ಕಾರ ಸಾಲದತ್ತ ಮುಖ‌ ಮಾಡಿದೆ. 2021-22 ಸಾಲಿನ ಮೊದಲ ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರ ಯಾವುದೇ ಸಾಲ ಪಡೆದಿಲ್ಲ. ಇದೀಗ ಎರಡನೇ ತ್ರೈ ಮಾಸಿಕದಲ್ಲಿ ಸಾಲ ಪಡೆಯಲು ಮುಂದಾಗಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ತಲಾ 4,000 ಕೋಟಿ ಯಂತೆ ಒಟ್ಟು 8,000 ಕೋಟಿ ರೂ‌. ಸಾಲ ಎತ್ತುವಳಿ ಮಾಡಲು ಸರ್ಕಾರ ನಿರ್ಧರಿಸಿದೆ.

ಮುಂದಿನ ತ್ರೈಮಾಸಿಕದಲ್ಲಿ ನಿರಂತರವಾಗಿ ಕರ್ನಾಟಕ ಸಾಲ ಎತ್ತುವಳಿ ಮಾಡಲು ನಿರ್ಧರಿಸಿದೆ. ಈ ಬಾರಿ ಕರ್ನಾಟಕ 71,332 ಕೋಟಿ ರೂ. ಸಾಲ ಮಾಡಲು ಮುಂದಾಗಿದೆ. ಆದರೆ ಈ ವರ್ಷ ಇನ್ನೂ ಹೆಚ್ಚಿನ ಸಾಲ ಎತ್ತುವಳಿ‌ ಮಾಡುವ ಅನಿವಾರ್ಯತೆ ಎದುರಾಗಿದೆ.

ಕಳೆದ ಬಾರಿ ರಾಜ್ಯ ಮಾಡಿದ ಸಾಲ ಎಷ್ಟು?

2020-21 ಸಾಲಿನಲ್ಲಿ ಸರ್ಕಾರ ಆರ್‌ಬಿಐ ಮೂಲಕ ಬರೋಬ್ಬರಿ 69,000 ಕೋಟಿ ರೂ. ಸಾಲ ಎತ್ತುವಳಿ ಮಾಡಿತ್ತು. ರ್ರಾಜ್ಯ ಸರ್ಕಾರ 2019-20ರ ಆರ್ಥಿಕ ವರ್ಷದಲ್ಲಿ ಕರ್ನಾಟಕ ಆರ್ ಬಿಐ ಮೂಲಕ ಎಸ್ ಡಿಎಲ್ ರೂಪದಲ್ಲಿ ಒಟ್ಟು 49,500 ಕೋಟಿ ರೂ. ಸಾಲ ಮಾಡಿತ್ತು. ಅದೇ 2020-21ಸಾಲಿನಲ್ಲಿ ಸಾಲದ ಮೊತ್ತ 69,000 ಕೋಟಿ ರೂ.‌ಏರಿಕೆಯಾಗಿದೆ. ಆ ಮೂಲ‌ಕ‌ ಕಳೆದ ಬಾರಿಗಿಂತ 2020-21ಸಾಲಿನಲ್ಲಿ 50%ಗೂ ಹೆಚ್ಚು ಸಾಲದಲ್ಲಿ ಏರಿಕೆಯಾಗಿದೆ.

ಈ ಆರ್ಥಿಕ ವರ್ಷದಲ್ಲಿ ಸರ್ಕಾರ 71,332 ಕೋಟಿ ರೂ. ಸಾಲ ಮಾಡಲು ನಿರ್ಧರಿಸಿದೆ. ಆದರೆ ಕೊರೊನಾ ಎರಡನೇ ಅಲೆಯ ಅಬ್ಬರ ಮತ್ತು ಹೇರಲಾದ ಲಾಕ್‌ಡೌನ್ ನಿಂದ ಸಾಲದ ಮೊತ್ತ ಅಂದಾಜಿಸಿದ್ದಕ್ಕಿಂತಲೂ ಹೆಚ್ಚಿಗೆ ಮಾಡುವ ಅನಿವಾರ್ಯತೆ ಎದುರಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಹಳ್ಳಿಗಳ ವಿದ್ಯಾರ್ಥಿಗಳ ಕಲಿಕೆಗೆ ನೆಟ್​ವರ್ಕ್ ಸಮಸ್ಯೆ : ಶೀಘ್ರ ಪರಿಹರಿಸುವಂತೆ ಶಿಕ್ಷಣ ಸಚಿವರ ಸೂಚನೆ

For All Latest Updates

TAGGED:

ABOUT THE AUTHOR

...view details