ಕರ್ನಾಟಕ

karnataka

ETV Bharat / state

ಕೊರೊನಾ ಕರ್ಫ್ಯೂ ನಿಯಮ ಇನ್ನಷ್ಟು ಸಡಿಲಿಕೆ: ನೂತನ ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ - ಕೊರೊನಾ ಕರ್ಫ್ಯೂ ನಿಯಮ ಇನ್ನಷ್ಟು ಸಡಿಲಿಕೆ

ಪ್ರಸ್ತುತ ಮಾರುಕಟ್ಟೆಯಲ್ಲಿ ಆಗುತ್ತಿರುವ ಜನಸಂದಣಿ, ನೂಕು ನುಗ್ಗಲನ್ನು ತಪ್ಪಿಸಲು ನಾಳೆಯಿಂದ ಅನ್ವಯವಾಗುವಂತೆ ಎಲ್ಲ ರೀತಿಯ ಸಂತೆ, ವಾರದ ಸಂತೆಗಳನ್ನು ನಿರ್ಬಂಧಿಸಲಾಗಿದೆ.

Government implemented new Corona Curfew Guideline
ನೂತನ ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ

By

Published : May 1, 2021, 10:40 PM IST

ಬೆಂಗಳೂರು: ಕೊರೊನಾ ಕರ್ಫ್ಯೂ ಮಾರ್ಗಸೂಚಿಯಲ್ಲಿ ಮತ್ತೆ ಸಡಿಲಿಕೆ‌‌ ಮಾಡಲಾಗಿದ್ದು, ಎಪಿಎಂಸಿ, ದಿನಸಿ ಅಂಗಡಿಗಳಿಗೆ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆ ವರೆಗೆ ತೆರೆಯಲು ಅವಕಾಶ ನೀಡಲಾಗಿದೆ.

ಈ‌ ಮೊದಲು ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಮಾರಾಟ ಮಾಡಲು ಅವಕಾಶ ನೀಡಲಾಗಿತ್ತು. ಮಾರಾಟದ ಸಮಯವನ್ನು ವಿಸ್ತರಿಸಿ ಪರಿಷ್ಕೃತ ಮಾರ್ಗಸೂಚಿ ಹೊರಡಿಸಲಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಆಗುತ್ತಿರುವ ಜನಸಂದಣಿ, ನೂಕು ನುಗ್ಗಲನ್ನು ತಪ್ಪಿಸಲು ನಾಳೆಯಿಂದ ಅನ್ವಯವಾಗುವಂತೆ ಎಲ್ಲಾ ರೀತಿಯ ಸಂತೆ, ವಾರದ ಸಂತೆಗಳನ್ನು ನಿರ್ಬಂಧಿಸಲಾಗಿದೆ.

ಇದರ ಬದಲಿಗೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೂ ಹಾಪ್‌ಕಾಮ್ಸ್, ಎಲ್ಲಾ ಹಾಲಿನ ಬೂತ್​​​​ಗಳು, ತಳ್ಳುವಗಾಡಿ ಮೂಲಕ ಹಣ್ಣು, ತರಕಾರಿಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡದೆ, ಮಾರುಕಟ್ಟೆ ಬೆಲೆಗೆ ಮಾರಾಟ ಮಾಡುವುದಕ್ಕೆ ಅನುಮತಿಸಲಾಗಿದೆ.

ಇದನ್ನೂ ಓದಿ:ತ್ವರಿತ ಆಮ್ಲಜನಕ ಸಾಗಣೆಗೆ 'ಆಕ್ಸಿಜನ್ ಆನ್ ವೀಲ್ಸ್' ಸೇವೆ ಆರಂಭಿಸಿದ ಮಹೀಂದ್ರಾ ಗ್ರೂಪ್​!

ABOUT THE AUTHOR

...view details