ಕರ್ನಾಟಕ

karnataka

ETV Bharat / state

ಕೆಪಿಟಿಸಿಎಲ್ ಹುದ್ದೆ ಆಕಾಂಕ್ಷಿಗಳಿಗೆ ಡಬಲ್ ಶಾಕ್ ನೀಡಿದ ಬಿಎಸ್​ವೈ ಸರ್ಕಾರ - banglore

ಕೆಪಿಟಿಸಿಎಲ್​ನ ಎಇಜೆಇ ಹುದ್ದೆಗಳ ಕನಸು ಕಟ್ಟಿಕೊಂಡು ವರ್ಷಗಟ್ಟಲೆ ತಯಾರಿ ನಡೆಸಿ ಪರೀಕ್ಷೆಗೆ ಸಿದ್ದರಾಗಿದ್ದ ಸಾವಿರಾರು ಅಭ್ಯರ್ಥಿಗಳ ಕನಸಿಗೆ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸುವ ಮೂಲಕ ಸರ್ಕಾರ ಆಘಾತ ಕೊಟ್ಟಿದೆ.

banglore
ಕೆಪಿಟಿಸಿಎಲ್ ಹುದ್ದೆ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ.

By

Published : Dec 1, 2020, 2:19 PM IST

ಬೆಂಗಳೂರು: ಕೆಪಿಟಿಸಿಎಲ್​ನ ಎಇ, ಜೆಇ ಹುದ್ದೆಗಳ ಕನಸು ಕಟ್ಟಿಕೊಂಡು ವರ್ಷಗಟ್ಟಲೆ ತಯಾರಿ ನಡೆಸಿ ಪರೀಕ್ಷೆಗೆ ತಯಾರಾಗಿದ್ದ ಸಾವಿರಾರು ಅಭ್ಯರ್ಥಿಗಳ ಕನಸಿಗೆ ಸರ್ಕಾರ ತಣ್ಣೀರೆರಚಿದೆ. ಏಕೆಂದರೆ ಸರ್ಕಾರ ಇದೀಗ ನೇಮಕಾತಿ ಪ್ರಕ್ರಿಯೆಯನ್ನೇ ರದ್ದುಗೊಳಿಸಿದೆ. ಇದರಿಂದಾಗಿ ಭವಷ್ಯವನ್ನೇ ಕಳೆದುಕೊಳ್ಳುವ ಆತಂಕಕ್ಕೆ ಸಿಲುಕಿರುವ ಅಭ್ಯರ್ಥಿಗಳು ಸಿಎಂ ಮನೆ ಬಾಗಿಲಿಗೆ ಅಲೆದಾಡುವಂತಾಗಿದೆ.

ಸಂಕಷ್ಟ ತೋಡಿಕೊಂಡಿರುವ ಕೆಪಿಟಿಸಿಎಲ್‌ ಹುದ್ದೆ ಆಕಾಂಕ್ಷಿ ಚಂದ್ರಿಕಾ

2019-20 ನೇ ಸಾಲಿನ 1559 ಎಇ, ಜೆಇ ಹುದ್ದೆಗಳ ನೇರ ನೇಮಕಾತಿಗೆ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಇದಕ್ಕೆ ಎರಡು ಲಕ್ಷಕ್ಕೂ ಹೆಚ್ಚಿನ ಅಭ್ಯರ್ಥಿಗಳು ಸಾಕಷ್ಟು ಸಿದ್ಧತೆಯನ್ನೂ ಮಾಡಿಕೊಂಡಿದ್ದರು. ಆದರೆ ನವೆಂಬರ್ 21 ರಂದು ನೇರ ನೇಮಕಾತಿಯನ್ನು ರದ್ದುಪಡಿಸಿ ಕೆಪಿಟಿಸಿಎಲ್ ಪ್ರಕಟಣೆ ಹೊರಡಿಸಿದೆ. 505 ಸಹಾಯಕ ಇಂಜಿನಿಯರ್ (ವಿದ್ಯುತ್), 28 ಸಹಾಯಕ ಇಂಜಿನಿಯರ್ (ಸಿವಿಲ್), 570 ಕಿರಿಯ ಇಂಜಿನಿಯರ್ (ವಿದ್ಯುತ್), 29 ಕಿರಿಯ ಇಂಜಿನಿಯರ್ (ಸಿವಿಲ್), 67 ಕಿರಿಯ ಆಪ್ತ ಸಹಾಯಕ, 360 ಕಿರಿಯ ಸಹಾಯಕ ಸೇರಿದಂತೆ ಒಟ್ಟು 1559 ಹುದ್ದೆಗಳ ನೇರ ನೇಮಕಾತಿ ರದ್ದಾಗಿದೆ.

ಅಭ್ಯರ್ಥಿಗಳಿಗೆ ಸಿಎಂ ಭರವಸೆ ಏನಾಗಿತ್ತು?

ಈ ಮೊದಲ ಕೆಪಿಟಿಸಿಎಲ್ ಹುದ್ದೆಗಳ ನೇಮಕಾತಿಗಾಗಿ ಸಿದ್ಧತೆಯಲ್ಲಿದ್ದ ಅಭ್ಯರ್ಥಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 2020 ರ ಜನವರಿಯಲ್ಲಿ ಮೊದಲ ಶಾಕ್ ನೀಡಿದ್ದರು. ಎಇಇ ಹುದ್ದೆಗಳ ನೇರ ನೇಮಕಾತಿಯನ್ನು ರದ್ದುಪಡಿಸಿ 9-13 ವರ್ಷ ಸೇವೆ ಸಲ್ಲಿಸಿದವರಿಗೆ ಪದೋನ್ನತಿ ನೀಡುವ ನಿರ್ಧಾರ ಪ್ರಕಟಿಸಿದ್ದರು. ಇದರಿಂದಾಗಿ ಆತಂಕಕ್ಕೆ ಸಿಲುಕಿದ್ದ ಅಭ್ಯರ್ಥಿಗಳು ಪ್ರತಿಭಟನೆಯ ಹಾದಿ ತುಳಿದು ಮುಖ್ಯಮಂತ್ರಿಗಳ ಮನೆ ಬಾಗಿಲು ತಟ್ಟಿದ್ದರು. ಆಗ ಈ ಅಭ್ಯರ್ಥಿಗಳ ಮನವೊಲಿಸಿದ್ದ ಸಿಎಂ ಸುಮ್ಮನೆ ಸಮಯ ವ್ಯರ್ಥ ಮಾಡಿಕೊಳ್ಳದೆ ಎಇ,ಜೆಇ ಹುದ್ದೆಗಳಿಗೆ ಸಿದ್ದರಾಗಿ ಎಂದು ಸಲಹೆ ನೀಡಿದ್ದರು. ಇದಕ್ಕೆ ಸಮ್ಮತಿಸಿದ್ದ ವಿದ್ಯಾರ್ಥಿಗಳು ಆಗ ಪ್ರತಿಭಟನೆ ಕೈಬಿಟ್ಟು ಮತ್ತೆ ಪರೀಕ್ಷೆಗೆ ಸಿದ್ದತೆ ನಡೆಸಿದ್ದರು. ಆದರೆ ಅಂದು ಸಿಎಂ ಭರವಸೆ ನೀಡಿದ್ದ ಎಇ, ಜೆಇ ಹುದ್ದೆಗಳ ನೇಮಕಾತಿಯೂ ಈಗ ರದ್ದಾಗಿರುವುದು ಅಭ್ಯರ್ಥಿಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಅಭ್ಯರ್ಥಿಗಳು ಹೇಳುವುದೇನು?

ಈ ಕುರಿತು ಸಂಕಷ್ಟ ತೋಡಿಕೊಂಡಿರುವ ಅಭ್ಯರ್ಥಿ ಚಂದ್ರಿಕಾ, 'ನಾವು ಕಷ್ಟಗಳು, ಸವಾಲಿನ ನಡುವೆ ಪರೀಕ್ಷೆಗೆ ಸಿದ್ದತೆ ನಡೆಸಿದ್ದೇವೆ. ನಮ್ಮ ಶ್ರಮ ಹಾಗು ಸಮಯಕ್ಕೆ ಬೆಲೆ ಕೊಡಿ, ನೇಮಕಾತಿ ರದ್ದು ಆದೇಶವನ್ನು ವಾಪಸ್ ಪಡೆದು ಕೂಡಲೇ ಪರೀಕ್ಷೆ ನಡೆಸಿ ಖಾಲಿ ಹುದ್ದೆ ಭರ್ತಿ ಮಾಡಿಕೊಳ್ಳಬೇಕು' ಎಂದು ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆಯುವ ನಾಯಕ. ಅವರೇ ಹಿಂದೆ ನಮಗೆ ಎಇಇ ನೇಮಕಾತಿ ರದ್ದಾದಾಗ ಎಇ,ಜೆಇ ಪರೀಕ್ಷೆ ಇದೆ, ಅದಕ್ಕೆ ಸಿದ್ದರಾಗಿ ಎಂದಿದ್ದರು. ಈಗ ಆ ನೇಮಕಾತಿಯೂ ರದ್ದಾಗಿದೆ. ಸಿಎಂ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ. ಕೂಡಲೇ ನೇಮಕಾತಿ ರದ್ದು ಆದೇಶ ವಾಪಸ್ ಪಡೆದು ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದು ಹುದ್ದೆ ಆಕಾಂಕ್ಷಿಗಳು ಒತ್ತಾಯಿಸಿದ್ದಾರೆ.

ABOUT THE AUTHOR

...view details