ಬೆಂಗಳೂರು:ತಾವು ಸಿಎಂ ಆಗಿದ್ದಾಗ ಜಾರಿಗೆ ತಂದಿದ್ದ ಕೆಲ ಯೋಜನೆಗಳನ್ನು ಬಿಜೆಪಿ ಸರ್ಕಾರ ಬದಲಿಸುವುದೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಎಸ್‌ಸಿಪಿ/ಟಿಎಸ್‌ಪಿ ವಿಚಾರವಾಗಿ ಸರ್ಕಾರದ ನಿಲುವನ್ನು ಅವರು ಖಂಡಿಸಿದ್ದಾರೆ.
ಎಸ್‌ಸಿಪಿ/ಟಿಎಸ್‌ಪಿ ವಿಚಾರವಾಗಿ ಸರ್ಕಾರದ ನಿಲುವು ಖಂಡನೀಯ: ಸಿದ್ದರಾಮಯ್ಯ - ಎಸ್‌ಸಿಪಿ/ಟಿಎಸ್‌ಪಿ ವಿಚಾರ
ಎಸ್‌ಸಿಪಿ/ಟಿಎಸ್‌ಪಿ ವಿಚಾರವಾಗಿ ಸರ್ಕಾರದ ನಿಲುವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಖಂಡಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಎಸ್‌ಸಿಪಿ/ಟಿಎಸ್‌ಪಿ ಯೋಜನೆಗೆ ತಿದ್ದುಪಡಿ ತಂದು ಅನುದಾನ ಕಡಿತಗೊಳಿಸುವ ಬಿ.ಎಸ್.ಯಡಿಯೂರಪ್ಪ ಸರ್ಕಾರದ ದುಷ್ಟ ಆಲೋಚನೆಯ ವಿರುದ್ಧ ಬಿಜೆಪಿ ಶಾಸಕರು ಕೂಡಾ ದನಿ ಎತ್ತಬೇಕು ಎಂದು ವಿನಂತಿಸುತ್ತೇನೆ ಎಂದಿದ್ದಾರೆ.
ಇಂತಹ ದ್ರೋಹ ಚಿಂತನೆಯನ್ನು ಪಕ್ಷದ ದಾಸ್ಯಕ್ಕೆ ಕಟ್ಟುಬಿದ್ದು ಸಹಿಸಿಕೊಂಡರೆ ಇತಿಹಾಸ ಕ್ಷಮಿಸದು ಎಂದು ಹೇಳಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರದ ಬಣ್ಣ ಬಹಳ ಬೇಗ ಬಯಲಾಗುತ್ತಿದೆ. ತನ್ನ ನಿಜಬಣ್ಣ ದಲಿತ ವಿರೋಧಿ ಎನ್ನುವುದು ಸಾಬೀತಾಗ್ತಿದೆ. ನಮ್ಮ ಕಾಲದ ಕ್ರಾಂತಿಕಾರಿ ಎಸ್‌ಸಿಪಿ-ಟಿಎಸ್‌ಪಿ ಕಾಯ್ದೆಯನ್ನು ದುರ್ಬಲಗೊಳಿಸಲು ಹೊರಟರೆ ದಲಿತ ಸಮುದಾಯ ದಂಗೆ ಎದ್ದೀತು, ಅದರ ಮುಂಚೂಣಿಯಲ್ಲಿ ನಾನೇ ಇರುತ್ತೇನೆ ಎಂದು ಎಚ್ಚರಿಸಿದ್ದಾರೆ.