ಬೆಂಗಳೂರು :ಮಹಾಮಾರಿ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈಗಾರಿಕೋದ್ಯಮಿಗಳು, ಎನ್ಜಿಒಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು, ಸಾಮಾಜಿಕ ಸೇವಾ ಸಂಘ-ಸಂಸ್ಥೆಗಳು, ಸಾರ್ವಜನಿಕರು ಉದಾರವಾಗಿ ದೇಣಿಗೆ ನೀಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ.
ಕೊರೊನಾ ತಡೆಗೆ ಉದ್ಯಮಿಗಳು, ಸಂಸ್ಥೆಗಳು,ಎನ್ಜಿಒಗಳ ಸಹಕಾರ ಕೋರಿದ ಸರ್ಕಾರ.. - Corona control
ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯಕೀಯ ಪರಿಕರಗಳು ಬೇಕಿದೆ. ಈ ಪರಿಸ್ಥಿತಿ ನಿರ್ವಹಿಸಲು ಸರ್ಕಾರದ ಜೊತೆಗೆ ಉಳ್ಳವರು, ಸಾಮರ್ಥ್ಯ ಇರುವವರು ಕೈಜೋಡಿಸಬೇಕೆಂದು ಕೇಳಿಕೊಂಡಿದೆ ಸರ್ಕಾರ.
ಕೋವಿಡ್-19ರ ವಿರುದ್ಧ ಹೋರಾಡಲು ಸರ್ಕಾರ ಲಾಕ್‌ಡೌನ್ ಆದೇಶ ಮಾಡಿದೆ. ಜನ ಸಾಮಾನ್ಯರಿಗೆ ಹಲವಾರು ಸಮಸ್ಯೆ ಎದುರಾಗುತ್ತಿವೆ. ಈ ಹಿನ್ನೆಲೆ ಸಮಸ್ಯೆಗಳ ಪರಿಹಾರ ಕೈಗೊಳ್ಳಲು ಹಣಕಾಸಿನ ಅಗತ್ಯತೆ ಇದೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯಕೀಯ ಪರಿಕರಗಳು ಬೇಕಿದೆ. ಈ ಪರಿಸ್ಥಿತಿ ನಿರ್ವಹಿಸಲು ಸರ್ಕಾರದ ಜೊತೆಗೆ ಉಳ್ಳವರು, ಸಾಮರ್ಥ್ಯ ಇರುವವರು ಕೈಜೋಡಿಸಬೇಕೆಂದು ಕೇಳಿಕೊಂಡಿದೆ ಸರ್ಕಾರ.
ಆರ್ಥಿಕ ಸಹಾಯ ನಿರ್ವಹಣೆಗೆ ಹಿರಿಯ ಐಎಎಸ್ ಅಧಿಕಾರಿಯಾದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರ ಸಮಿತಿ ರಚಿಸಿದೆ. ಕೊರೊನಾ ಹರಡುವಿಕೆ ತಡೆಗಟ್ಟಲು ಆರೋಗ್ಯ ಸೇವೆ ಒದಗಿಸುವುದಕ್ಕಾಗಿ ಮುಖ್ಯಮಂತ್ರಿ ಗಳ ಪರಿಹಾರ ನಿಧಿ ಕೋವಿಡ್-19 ಸ್ಥಾಪಿಸಲಾಗಿದೆ. ಈ ದೇಣಿಗೆಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಜಿ (2) ಅಡಿ ವಿನಾಯಿತಿ ನೀಡಲಾಗಿದೆ.