ಬೆಂಗಳೂರು: ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಆದ್ಯತೆ ನೀಡಲಾಗುತ್ತಿದ್ದು, ಸರ್ಕಾರದ ಬಳಕೆ ವಾಹನಗಳು ವಿದ್ಯುತ್ ಚಾಲಿತ ಆಗಬೇಕು, ಡಿಪಿಆರ್ ಈ ಬಗ್ಗೆ ಚಿಂತನೆ ಮಾಡಬೇಕು ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ವಿದ್ಯುತ್ ವಾಹನಗಳ ಪ್ರೋತ್ಸಾಹ ಬಗ್ಗೆ ಬಿಜೆಪಿ ಸದಸ್ಯ ಮುನಿರಾಜುಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಗೆ ಅನುಕೂಲವಾಗಲೆಂದು 646 ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸಿದ್ದೇವೆ,ಪ್ರವಾಸಿ ತಾಣಗಳೂ ಸೇರಿದಂತೆ ಹಲವೆಡೆ ಚಾರ್ಜಿಂಗ್ ಸ್ಟೇಶನ್ ಆರಂಭಿಸಲಾಗುತ್ತಿದೆ,ಅದಕ್ಕೆ ಹೆಸ್ಕಾಂ ಸಹಾಯ ಮಾಡುತ್ತದೆ ಖಾಸಗಿಯವರೂ ಚಾರ್ಜಿಂಗ್ ಸ್ಟೇಶನ್ ಗಳನ್ನು ಆರಂಭಿಸಲು ಸಹಕಾರ ಕೊಡುತ್ತೇವೆ ಎಂದರು.