ಕರ್ನಾಟಕ

karnataka

ETV Bharat / state

ಕೋವಿಡ್ ಲಸಿಕೆ ಪಡೆಯದವರಿಗೆ ಪಿಂಚಣಿ, ಪಡಿತರ ಇಲ್ಲವೆಂಬ ಯೋಜನೆ ರೂಪಿಸಿಲ್ಲ: ಸರ್ಕಾರದ ಸ್ಪಷ್ಟನೆ - ಕೋವಿಡ್ ಲಸಿಕೆ

ಕೊರೊನಾ ಲಸಿಕೆ ಪಡೆಯದವರಿಗೆ 'ನೋ ವ್ಯಾಕ್ಸಿನ್, ನೋ ರೇಷನ್, ನೋ ಪೆನ್ಷನ್​' ಎಂಬ ಯಾವುದೇ ಯೋಜನೆಯನ್ನು ಸರ್ಕಾರ ರೂಪಿಸಿಲ್ಲ ಎಂದು ರಾಜ್ಯಸರ್ಕಾರ ಸ್ಪಷ್ಟೀಕರಣ ನೀಡಿದೆ.

no  scheme like no pension for those who are not vaccinated says goverment
ಸರ್ಕಾರದ ಸ್ಪಷ್ಟನೆ

By

Published : Sep 2, 2021, 10:25 PM IST

ಬೆಂಗಳೂರು: ಕೋವಿಡ್ ಲಸಿಕೆ ಪಡೆಯದವರಿಗೆ ಪಿಂಚಣಿ ಮತ್ತು ಪಡಿತರವನ್ನು ನೀಡುವುದಿಲ್ಲವೆಂದು ಎಲ್ಲೂ ಹೇಳಿಲ್ಲ. ಇಂತಹ ಯಾವುದೇ ಕಾರ್ಯಕ್ರಮ ರೂಪಿಸಿಲ್ಲ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಪಿ. ರವಿಕುಮಾರ್ ಸ್ಪಷ್ಟಪಡಿಸಿದ್ದಾರೆ.

ಸರ್ಕಾರದ ಸ್ಪಷ್ಟನೆ

ಕೆಲವು ಮಾಧ್ಯಮಗಳಲ್ಲಿ 'ನೋ ವ್ಯಾಕ್ಸಿನ್, ನೋ ರೇಷನ್' ಎಂದು ವರದಿಯಾಗಿರುವುದು ತಿಳಿದುಬಂದಿದ್ದು, ಈ ರೀತಿ ಕೋವಿಡ್ ಲಸಿಕೆ ನೀಡುವುದನ್ನು ಸರ್ಕಾರದಿಂದ ನೀಡಲಾಗುವ ಪಡಿತರ, ಪಿಂಚಣಿ ಅಂತಹ ಯಾವುದೇ ಕಾರ್ಯಕ್ರಮ/ ಯೋಜನೆಗಳಿಗೆ ಜೋಡಿಸಿಲ್ಲವಾದ್ದರಿಂದ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳುವುದಕ್ಕೆ ಜನರಿಗೆ ಯಾವುದೇ ನಿರ್ಬಂಧ ಹೇರದೆ, ಜಾಗೃತಿ ಮೂಡಿಸುವ ಅಭಿಯಾನದ ಮೂಲಕ ಕೋವಿಡ್ ಲಸಿಕೆ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ/ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಈ ಮೂಲಕ ನಿರ್ದೇಶಿಸಲಾಗಿದೆ.

ಒಂದು ಪಕ್ಷ ಈ ರೀತಿಯಾಗಿ ಲಸಿಕಾ ಕಾರ್ಯಕ್ರಮವನ್ನು ಯಾವುದೇ ಕಾರ್ಯಕ್ರಮ/ಯೋಜನೆಗೆ ತಪ್ಪಾಗಿ ಜೋಡಿಸಿದ್ದಲ್ಲಿ, ಕೂಡಲೇ ಕೈಬಿಡಲು ಮುಖ್ಯಕಾರ್ಯದರ್ಶಿಗಳು ನಿರ್ದೇಶಿಸಿದ್ದಾರೆ.

ಇದನ್ನೂ ಓದಿ:ಸೆ.15ರ ಒಳಗೆ ಮೀಸಲಾತಿ ನೀಡದೆ ಹೋದ್ರೆ, ಮತ್ತೆ ಹೋರಾಟ: ಪಂಚಮಸಾಲಿ ಸ್ವಾಮೀಜಿ ಎಚ್ಚರಿಕೆ

ABOUT THE AUTHOR

...view details