ಚಿಕ್ಕಬಳ್ಳಾಪುರ: ಗೌರಿಬಿದನೂರು ಕೊರೊನಾ ಹಾಟ್ ಸ್ಪಾಟ್ ಆಗಿದೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ ಚಿಕ್ಕಬಳ್ಳಾಪುರದಲ್ಲಿ ನಡೆದ ಕೊರೊನಾ ಜಾಗೃತಿ ಸಭೆಯಲ್ಲಿ ಹೇಳಿದ್ದಾರೆ.
ಗೌರಿಬಿದನೂರಿನಲ್ಲಿ 50 ಜನ ಕ್ವಾರಂಟೈನ್ ಹಾಗೂ 48 ಜನ 2ನೇ ಹಂತದ ಹೋಮ್ ಕ್ವಾರಂಟೈನ್ ಮತ್ತು 200 ಜನ ವಿದೇಶದಿಂದ ಬಂದವರು ಇದ್ದು, ಜಿಲ್ಲೆಯಲ್ಲಿ 10 ಪ್ರಕರಣದಲ್ಲಿ 1 ಸಾವಾಗಿದೆ ಎಂದಿದ್ದಾರೆ.
ಗೌರಿಬಿದನೂರು ಕೊರೊನಾ ಹಾಟ್ ಸ್ಪಾಟ್: ಡಿಸಿಎಂ ಅಶ್ವತ್ಥ್ ನಾರಾಯಣ್ ಈ ನಡುವೆ ಸೋಂಕಿತರಿಗೆ ಚಿಕಿತ್ಸೆ ನೀಡಲು ಜಿಲ್ಲಾಸ್ಪತ್ರೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸಾಕಷ್ಟು ಜನ ಕ್ವಾರಂಟೈನ್ ಅವಧಿ ಮುಗಿಸಿದ್ದಾರೆ. 10 ವೆಂಟಿಲೇಶನ್ ವ್ಯವಸ್ಥೆ ಮಾಡಲಾಗುತ್ತದೆ. ಎಲ್ಲಾ ಮೂಲಭೂತ ಸೌಕರ್ಯಗಳನ್ನ ಕಲ್ಪಿಸಾಗಿದೆ ಎಂದರು.
ಸದ್ಯ ಗೌರಿಬಿದನೂರು ನಗರವನ್ನ ಸಂಪುರ್ಣ ಬಂದ್ ಮಾಡಿ ವೈರಸ್ ಹರಡದಂತೆ ಕ್ರಮ ಕೈಗೊಳ್ಳಲಾಗಿದೆ. ರೈತರಿಗಾಗಿ ಸಾಕಷ್ಟು ಕ್ರಮ ಕೈಗೊಳ್ಳಲು ಸೂಚನೆ ನೀಡಿಲಾಗಿದೆ. ದ್ರಾಕ್ಷಿ ಮಾರಾಟಕ್ಕೆ ರಫ್ತು ಮತ್ತು ಬೆಂಗಳೂರಿನಲ್ಲಿ ಮಾರಾಟಕ್ಕೆ ಅಡೆತಡೆ ಇಲ್ಲ. ಆದರೆ ಮಾರುಕಟ್ಟೆ ಇಲ್ಲದಿರುವುದು ಸಮಸ್ಯೆಯಾಗಿದೆ. ಹಾಪ್ ಕಾಮ್ಸ್ ಮೂಲಕ ನೇರ ಮಾರಾಟಕ್ಕೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಕೊರೊನಾ ಹಟ್ಟಹಾಸ ಕಡಿಮೆ ಆಗಿದೆ. ಉದಾಹರಣೆಗೆ ಮೂರರಿಂದ ಒಂಭತ್ತನೆ ಸ್ಥಾನಕ್ಕೆ ಬಂದಿದೆ ಎಂದಿದ್ದಾರೆ.