ಬೆಂಗಳೂರು :ನಗರದ ತುಮಕೂರು ರಸ್ತೆಯ ಗೊರಗುಂಟೆಪಾಳ್ಯದಿಂದ ಆರಂಭವಾಗಿ ಕೆನ್ನಮೆಟಲ್ ಕಾರ್ಖಾನೆಯವರೆಗೆ ಕೊನೆಗೊಳ್ಳುವ ಮೇಲುಸೇತುವೆ ಹಾಗೂ ಯಶವಂತಪುರ ವೃತ್ತದಿಂದ(ಸಂವಿಧಾನ ವೃತ್ತ) ಕೆನ್ನಮೆಟಲ್ ಕಾರ್ಖಾನೆವರೆಗಿನ ರಸ್ತೆಗೆ ಡಾ. ಶಿವಕುಮಾರ ಸ್ವಾಮೀಜಿ ರವರ ಹೆಸರನ್ನು ಸಿದ್ಧಗಂಗಾ ಮಠದ ಪೀಠಾಧ್ಯಕ್ಷರಾದ, ಶ್ರೀ ಸಿದ್ಧಲಿಂಗ ಮಹಾಸ್ವಾಮಿ ನಾಮಕರಣ ಮಾಡಿದರು.
ಈ ವೇಳೆ ಮಾತನಾಡಿದ ಸಿದ್ಧಲಿಂಗ ಮಹಾಸ್ವಾಮಿ, ಶಿವಕುಮಾರ ಸ್ವಾಮೀಜಿ ಅವರ ಹೆಸರು ನಗರದಲ್ಲಿ ಅಜರಾಮರವಾಗಿರುವಂತೆ ಮಾಡಲು ಬಿಬಿಎಂಪಿ ತುಮಕೂರು ರಸ್ತೆ ಹಾಗೂ ಮೇಲು ಸೇತುವೆಗೆ ನಾಮಕರಣ ಮಾಡುವ ಮೂಲಕ ಗೌರವ ಸೂಚಿಸಿರುವುದು ಶ್ಲಾಘನೀಯ ಎಂದರು.