ಬೆಂಗಳೂರು:ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮುಂದೆ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಬಹಿರಂಗವಾಗಿ ಏರು ಧ್ವನಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.
ವಿಧಾನಸೌಧದ ಸಚಿವರ ಕಚೇರಿಗೆ ಇಂದು ಶಾಸಕ ಗೂಳಿಹಟ್ಟಿ ಸಚಿವರ ಭೇಟಿಗೆ ತೆರಳಿದ್ದಾರೆ. ಆದರೆ, ಕಚೇರಿಯಲ್ಲಿ ಕಾರ್ಯಕರ್ತರೇ ತುಂಬಿದ್ದರು. ಸರಿಯಾಗಿ ಸ್ಪಂದಿಸದ ಹಿನ್ನೆಲೆ ಗೂಳಿಹಟ್ಟಿ ಸಚಿವರ ಮುಂದೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಗೂಳಿಹಟ್ಟಿ, ಕೋಟಾ ಶ್ರೀನಿವಾಸ್ ಪೂಜಾರಿಗೆ ಕಾದು - ಕಾದು ಸುಸ್ತಾಗಿದ್ದಾರೆ. ಸಚಿವರಿಂದ ಸ್ವಂದನೆ ಸಿಗದೇ ಇದ್ದಾಗ, ಸಿಟ್ಟಾದ ಗೂಳಿಹಟ್ಟಿ ಶೇಖರ್ ಸಚಿವರ ಮುಂದೆ ಏರು ಧ್ವನಿಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಬಳಿಕ ಗೂಳಿಹಟ್ಟಿ ಅವರನ್ನು ಕರೆದೊಯ್ದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಸಮಾಧಾನ ಪಡಿಸಿದ್ದಾರೆ.